More

    ಮೇರಾ ಯುವ ಭಾರತ್ ಸ್ವಾಯತ್ತ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ

    ನವದೆಹಲಿ: ಮೇರಾ ಯುವ ಭಾರತ್ (ಎಂವೈ ಭಾರತ್) ಸ್ವಾಯತ್ತ ಸಂಸ್ಥೆ ಸ್ಥಾಪನೆಗೆ ಇಂದು ಕೇಂದ್ರ ಸರ್ಕಾರದಿಂದ ಅನುಮೋದನೆ ಲಭಿಸಿದೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ.

    ಯುವ ಸಮುದಾಯದ ಅಭಿವೃದ್ಧಿ ಮತ್ತು ತಂತ್ರಜ್ಞಾನದಿಂದ ಮುನ್ನಡೆಸಲ್ಪಡುವ ಯುವಜನರ ನೇತೃತ್ವದಲ್ಲಿ ದೇಶದ ಅಭಿವೃದ್ಧಿ ಮತ್ತು ಯುವಜನತೆಗೆ ಸಮಾನವಾದ ಪ್ರವೇಶ ಒದಗಿಸುವ ಒಂದು ವ್ಯಾಪಕ ಸಕ್ರಿಯ ಕಾರ್ಯವಿಧಾನವಾಗಿ ಇದು ಕಾರ್ಯ ನಿರ್ವಹಿಸಲಿದೆ. ಜತೆಗೆ, ಇದು ಯುವ ಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ನೆರವಾಗಲಿದೆ ಎಂದೂ ಹೇಳಲಾಗಿದೆ.

    ಇದನ್ನೂ ಓದಿ: ಪ್ರಧಾನಿ ಮೋದಿಗೆ ಆಪತ್ತಿದೆಯೇ?: ಸಹಾಯಕರ ಸೋಗಿನಲ್ಲಿ ಇರುವವರಿಂದಲೇ ತೊಂದರೆ!; ಏನಿದು ಭವಿಷ್ಯ?

    ಯುವಜನತೆಯ ಅಭಿವೃದ್ಧಿಗಾಗಿ ಇದನ್ನು ಸಂಪೂರ್ಣ ಸರ್ಕಾರಿ ವೇದಿಕೆಯನ್ನಾಗಿ ಮಾಡುವುದೇ ಮೇರಾ ಯುವ ಭಾರತ್ (ಎಂವೈ ಭಾರತ್) ಪ್ರಾಥಮಿಕ ಉದ್ದೇಶ. ಈ ಹೊಸ ವ್ಯವಸ್ಥೆಯಡಿ ಸಂಪನ್ಮೂಲಗಳ ಪ್ರವೇಶ ಮತ್ತು ಅವಕಾಶಗಳ ಸಂಪರ್ಕದೊಂದಿಗೆ ಯುವಕರು ಸಮುದಾಯ ಬದಲಾವಣೆಯ ಮಧ್ಯವರ್ತಿ ಆಗುತ್ತಾರೆ. ಸರ್ಕಾರ ಮತ್ತು ನಾಗರಿಕರ ನಡುವೆ ಯುವ ಸೇತುವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವ ರಾಷ್ಟ್ರ ನಿರ್ಮಾತೃ ಆಗಲಿದ್ದಾರೆ. ಇದು ರಾಷ್ಟ್ರ ನಿರ್ಮಾಣಕ್ಕಾಗಿ ಅಪಾರ ಯುವ ಶಕ್ತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸಲಿದೆ ಎಂದು ಕೇಂದ್ರ ತಿಳಿಸಿದೆ.

    ಸ್ವಾಯತ್ತ ಸಂಸ್ಥೆಯಾದ ಮೇರಾ ಯುವ ಭಾರತ್ (ಎಂವೈ ಭಾರತ್), ರಾಷ್ಟ್ರೀಯ ಯುವ ನೀತಿಯಲ್ಲಿರುವ ‘ಯುವ’ ವ್ಯಾಖ್ಯಾನಕ್ಕೆ ಅನುಗುಣವಾಗಿ 15-29ರ ವಯಸ್ಸಿನ ಯುವಕರಿಗೆ ಪ್ರಯೋಜನ ನೀಡುತ್ತದೆ. ಒಂದು ವೇಳೆ ಹದಿಹರೆಯದವರಿಗೆ ನಿರ್ದಿಷ್ಟವಾಗಿ ಸಂಬಂಧಿಸಿದ ಕಾರ್ಯಕ್ರಮಗಳಾದರೆ, ಫಲಾನುಭವಿಗಳು 10-19 ವರ್ಷ ವಯಸ್ಸಿನ ಗುಂಪಿನಲ್ಲಿರುತ್ತಾರೆ.

    ಇದನ್ನೂ ಓದಿ: ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?

    ಮೇರಾ ಯುವ ಭಾರತ್ (ಎಂವೈ ಭಾರತ್) ಸ್ಥಾಪನೆಯಿಂದಾಗುವ ಅನುಕೂಲ

    – ಯುವಕರಲ್ಲಿ ನಾಯಕತ್ವ ಅಭಿವೃದ್ಧಿಪಡಿಸುವುದು
    – ಪ್ರತ್ಯೇಕವಾದ ದೈಹಿಕ ಸಂವಹನದಿಂದ ಕಾರ್ಯಕ್ರಮ ಕೌಶಲ್ಯಗಳಿಗೆ ಬದಲಾಯಿಸುವ ಮೂಲಕ ಅನುಭವದ ಕಲಿಕೆಯ ಮೂಲಕ ನಾಯಕತ್ವ ಕೌಶಲ್ಯಗಳನ್ನು ಸುಧಾರಿಸುವುದು.
    – ಯುವಕರನ್ನು ಸಾಮಾಜಿಕ ನವೋದ್ಯಮಿಗಳಾಗಿ, ಸಮುದಾಯಗಳಲ್ಲಿ ನಾಯಕರನ್ನಾಗಿ ಮಾಡಲು ಅವರಲ್ಲಿ ಹೆಚ್ಚು ಹೂಡಿಕೆ ಮಾಡುವುದು.
    – ಯುವ ನೇತೃತ್ವದ ಅಭಿವೃದ್ಧಿ ಮೇಲೆ ಸರ್ಕಾರದ ಸಂಪೂರ್ಣ ಗಮನ ಹೊಂದಿಸುವುದು, ಯುವಕರನ್ನು ನಾಮಕಾವಸ್ತೆ ಪಾಲ್ಗೊಳ್ಳುವಿಕೆಯಿಂದ ಹೊರತಂದು, ಅವರನ್ನುಅಭಿವೃದ್ಧಿಯ “ಸಕ್ರಿಯ ಚಾಲಕರ”ನ್ನಾಗಿ ಮಾಡುವುದು.
    – ಯುವ ಆಕಾಂಕ್ಷೆಗಳು ಮತ್ತು ಸಮುದಾಯದ ಅಗತ್ಯಗಳ ನಡುವೆ ಉತ್ತಮ ಹೊಂದಾಣಿಕೆ
    – ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳ ಒಮ್ಮುಖದ ಮೂಲಕ ದಕ್ಷತೆ ಹೆಚ್ಚಿಸುವುದು.
    – ಯುವಜನರಿಗೆ ಮತ್ತು ಸಚಿವಾಲಯಗಳಿಗೆ ಒಂದು ನಿಲುಗಡೆ ತಾಣವಾಗಿ ಕಾರ್ಯ ನಿರ್ವಹಿಸುವುದು.
    – ಕೇಂದ್ರೀಕೃತ ಯುವ ಡೇಟಾ ಬೇಸ್ (ದತ್ತಾಂಶ ನೆಲೆ) ರೂಪಿಸುವುದು.
    – ಸರ್ಕಾರದ ಯುವ ಉಪಕ್ರಮಗಳು ಮತ್ತು ಯುವಕರೊಂದಿಗೆ ತೊಡಗಿಸಿಕೊಳ್ಳುವ ಇತರೆ ಪಾಲುದಾರರ ಚಟುವಟಿಕೆಗಳನ್ನು ಸಂಪರ್ಕಿಸಲು ಸುಧಾರಿತ ದ್ವಿಮುಖ ಸಂವಹನ.
    – ಯುವ ಸಮುದಾಯದ ಪ್ರವೇಶ ಖಚಿತಪಡಿಸಿಕೊಳ್ಳುವುದು, ಭೌತಿಕ ಪರಿಸರ ವ್ಯವಸ್ಥೆ ರೂಪಿಸುವುದು.

    ಇದನ್ನೂ ಓದಿ: ಹಮಾಸ್​ ದಾಳಿ: ಐವರು ಹಂತಕರನ್ನು ಸ್ವತಃ ಕೊಂದ ಎದೆಗಾತಿ; 20 ಉಗ್ರರ ಹತ್ಯೆಗೆ ನೇತೃತ್ವ ವಹಿಸಿದ ದಿಟ್ಟ ಯುವತಿ!

    ಮೇರಾ ಯುವ ಭಾರತ್ ಸ್ಥಾಪನೆ ಹಿನ್ನೆಲೆ

    ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ‘ಇಡೀ ಸರ್ಕಾರಿ ಕಾರ್ಯವಿಧಾನ’ ತತ್ವಗಳಿಂದ ಮಾರ್ಗದರ್ಶಿಸಲ್ಪಟ್ಟ ಯುವ ಜನರನ್ನು ಮತ್ತು ಅವರ ಸಬಲೀಕರಣಕ್ಕೆ ಸಂಪೂರ್ಣ ತೊಡಗಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ವೇಗದ ಸಂವಹನಗಳು, ಸಾಮಾಜಿಕ ಮಾಧ್ಯಮಗಳು, ಹೊಸ ಡಿಜಿಟಲ್ ಅವಕಾಶಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ವಾತಾವರಣ ಹೊಂದಿರುವ ಸಂಸ್ಥೆಯ ರೂಪದ ಸಕ್ರಿಯ ಕಾರ್ಯವಿಧಾನ ಸ್ಥಾಪನೆಯೇ “ಮೇರಾ ಯುವ ಭಾರತ್ (ಎಂವೈ ಭಾರತ್)” ಎಂಬ ಸ್ವಾಯತ್ತ ಸಂಸ್ಥೆ.

    ಇದು ನಿಜವಾದ ‘ಬೆಡ್​ರೂಮ್’!; ಬೆಂಗಳೂರಿನಲ್ಲಿದು ಎಲ್ಲಿದೆ? ಸುದ್ದಿ ಆಗುತ್ತಿರುವುದಾದರೂ ಯಾಕೆ?

    ಪೊದೆಯಲ್ಲಿ ಯುವ ಜೋಡಿ, ಫೋಟೋ ವೈರಲ್​: ಅಷ್ಟಕ್ಕೂ ಅಲ್ಲಿ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts