More

  ದೇಶದ ಸುರಕ್ಷತೆ, ರಕ್ಷಣೆಗಾಗಿ ಬಿಜೆಪಿ ಗೆಲ್ಲಿಸಿ

  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ — ಉಡುಪಿಯಲ್ಲಿ ‘ಯುವ ಭಾರತ ಸಂವಾದ’ ಕಾರ್ಯಕ್ರಮ

  ವಿಜಯವಾಣಿ ಸುದ್ದಿಜಾಲ ಉಡುಪಿ
  ವಿಕಸಿತ ಭಾರತಕ್ಕೆ ಯುವ ಸಮುದಾಯವೇ ಆಸರೆಯಾಗಿದ್ದು, ಸಮಗ್ರ ಹಿಂದುಸ್ತಾನದ ಸುರಕ್ಷತೆ ಹಾಗೂ ಜನತೆಯ ರಕ್ಷಣೆಗಾಗಿ ಬಿಜೆಪಿಯನ್ನೇ ಗೆಲ್ಲಿಸಿ. ದೇಶದ 144 ಕೋಟಿ ಜನರ ಸೇವೆ ಮಾಡಲು ನರೇಂದ್ರ ಮೋದಿ ಅವರಿಗೆ ಯುವಸಮುದಾಯ ಕೈಜೋಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದರು.

  ಉಡುಪಿಯ ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಶನಿವಾರ ಆಯೋಜಿಸಿದ್ದ ಯುವ ಭಾರತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

  ಭಾಷಣದಿಂದ ಅಭಿವೃದ್ಧಿ ಆಗದು

  ಕಳೆದ 10 ವರ್ಷದಲ್ಲಿ ಮೋದಿ ಆಡಳಿತ, ಕಾರ್ಯ ವೈಖರಿಯನ್ನು ಜಗತ್ತೇ ಗಮನಿಸಿದೆ. ಕೇವಲ ಭಾಷಣದಿಂದ ಭಾರತವು ವಿಶ್ವದ 5ನೇ ಆರ್ಥಿಕ ರಾಷ್ಟ್ರವಾಗಿಲ್ಲ. ಅದಕ್ಕಾಗಿ ಪ್ರಧಾನಿ ಮೋದಿ ಹಗಲಿರುಳು ಶ್ರಮಿಸಿದ್ದಾರೆ. ಕಾಶ್ಮೀರದ 370ನೇ ವಿಧಿ ರದ್ದು ಮಾಡಿದರೆ ದೇಶದಲ್ಲಿ ರಕ್ತದ ಹೊಳೆಯೇ ಹರಿಯುತ್ತದೆ ಎಂದು ಕಾಂಗ್ರೆಸ್​ ಹೇಳಿತ್ತು. ಆದರೆ, ಅಲ್ಲಿ ಹರಿದಿದ್ದು ರಕ್ತವಲ್ಲ, ಪ್ರೀತಿ&ಪ್ರೇಮ. ಶಾಂತಿ&ಸುವ್ಯವಸ್ಥೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದು ಬಿಜೆಪಿಯ ದೊಡ್ಡ ಅಜೆಂಡಾ ಆಗಿತ್ತು. ಅದನ್ನೂ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ ಎಂದರು.

  ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ಕುಂದಾಪುರ, ಶಾಸಕರಾದ ಯಶಪಾಲ್​ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಕಿರಣಕುಮಾರ ಕೊಡ್ಗಿ, ಹರೀಶ ಪುಂಜಾ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲಕುಮಾರ್​, ಲಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕೆ.ಉದುಯಕುಮಾರ್​ ಶೆಟ್ಟಿ, ಅರುಣಕುಮಾರ ಪುತ್ತಿಲ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಮಾಜಿ ಶಾಸಕರಾದ ರಘುಪತಿ ಭಟ್​, ಲಾಲಾಜಿ ಮೆಂಡನ್​, ಶಿಲ್ಪಾ ಸುವರ್ಣ, ರೇಶ್ಮಾ ಶೆಟ್ಟಿ ಇತರರಿದ್ದರು.
  ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಥ್ವಿರಾಜ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿಖ್ಯಾತ ಶೆಟ್ಟಿ, ಶಾಸಕ ಯಶ್​ಪಾಲ್​ ಸುವರ್ಣ, ಪುತ್ತೂರಿನ ಅರುಣಕುಮಾರ್​ ಪುತ್ತಿಲ ಮಾತನಾಡಿದರು. ಶಶಿಕಾಂತ ಶಿವತ್ತಾಯ ಸ್ವಾಗತಿಸಿದರು. ಅಭಿರಾಜ್​ ಸುವರ್ಣ ವಂದಿಸಿದರು. ಗಿರೀಶ್​ ಅಂಚನ್​ ನಿರೂಪಿಸಿದರು.

  ಕಾಂಗ್ರೆಸ್​ಗೆ ನೈತಿಕತೆ ಇದೆಯೇ?

  ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶದ ಸಂವಿಧಾನವನ್ನೇ ಬದಲಿಸುತ್ತಾರೆ. ಹೀಗಾಗಿ ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್​ ಸರ್ಕಾರ ಆಡಳಿತಕ್ಕೆ ಬರಬೇಕು ಎಂದು ಮಲ್ಲಿಕಾರ್ಜುನ ರ್ಖಗೆ ಹೇಳುತ್ತಿದ್ದಾರೆ. ಸಂವಿಧಾನ ರಚಿಸಿದ ಡಾ. ಅಂಬೇಡ್ಕರ್​ ನಿಧನರಾದಾಗ ಅವರ ಅಂತ್ಯ ಸಂಸ್ಕಾರವೂ ಜಾಗ ನೀಡದ ಕಾಂಗ್ರೆಸ್​, ಈಗ ಸಂವಿಧಾನ ಹಾಗೂ ಅಂಬೇಡ್ಕರ್​ರ ಹೆಸರು ಹೇಳುತ್ತಿದೆ. ವಿ.ಪಿ. ಸಿಂಗ್​ ಸರ್ಕಾರಕ್ಕೆ ಒತ್ತಡ ಹೇರಿ ಅಂಬೇಡ್ಕರ್​ ಅವರಿಗೆ “ಭಾರತ ರತ್ನ’ ಕೊಡಿಸಿದ್ದು ಅಟಲ್​ ಬಿಹಾರಿ ವಾಜಪೇಯಿ ಅವರು. ಅಂಬೇಡ್ಕರ್​ ಕಲಿತ ಶಾಲೆ ಹಾಗೂ ಅವರ ಕುರುಹುಗಳಿರುವ ಜಾಗಗಳನ್ನೆಲ್ಲ ಮೋದಿ ಅಭಿವೃದ್ಧಿ ಪಡಿಸಿದ್ದಾರೆ. ಅಂಬೇಡ್ಕರ್​ ಕುರಿತು ಮಾತನಾಡಲು ನಿಮಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು. ಅಮೇಥಿಯಲ್ಲಿ ಸೋಲು ಕಂಡ ರಾಹುಲ್​ ಗಾಂಧಿ, ಶೇ. 70 ಅಲ್ಪಸಮಖ್ಯಾತ ಮತಗಳಿರುವ ಕೇರಳದ ವಯನಾಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುವ ದರಿದ್ರ ಪರಿಸ್ಥಿತಿ ಬಂದಿದೆ ಎಂದು ವಿಜಯೇಂದ್ರ ಟೀಕಿಸಿದರು.

  ಇದು ಜನರ ಬದುಕಿನ ಚುನಾವಣೆ. ಹಿಂದು ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನಗೆ ಕೇಸರಿ ಕಂಡರೆ ಆಗುವುದಿಲ್ಲ ಎನ್ನುತ್ತಾರೆ. ಹೀಗಾಗಿ ದೇಶದಲ್ಲಿ ಮುಂದಿನ 25 ವರ್ಷ ಕೇಸರಿ ಆಡಳಿತವೇ ಇರುವಂತೆ ಯುವ ಮೋರ್ಚಾ ಕಾರ್ಯಕರ್ತರು ನೋಡಿಕೊಳ್ಳಬೇಕು. ದೇಶದಲ್ಲಿ ಪ್ರಧಾನಿ ಮೋದಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳುವುದಿಲ್ಲ. ಕೊಬ್ಬಿನಿಂದ ಮೆರೆಯುತ್ತಿರುವ ಮುಸ್ಲೀಮರ, ಜಿಹಾದಿಗಳ ಸೊಕ್ಕು ಮಟ್ಟ ಹಾಕಬೇಕಾದರೆ ದೇಶದಲ್ಲಿ ಕೇಸರಿ ಆಡಳಿತವೇ ಇರಬೇಕು.

  ವಿ.ಸುನೀಲಕುಮಾರ್​. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

  ಯುವ ಸಮುದಾಯಕ್ಕೆ ಪ್ರಧಾನಿ ಮೋದಿ ಭರವಸೆಯಾಗಿದ್ದಾರೆ. ಇದಕ್ಕೆ ಕರ್ನಾಟಕದಲ್ಲಿ ವಿಜಯೇಂದ್ರ, ತಮಿಳುನಾಡಿನಲ್ಲಿ ಅಣ್ಣಾಮಲೈ ಅವರಂತಹ ಯುವಕರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದು ಸಾಯಾಗಿದೆ. ಯುವ ಸಮುದಾಯಕ್ಕೆ ಪ್ರೋತ್ಸಾಹ ನೀಡುವಂತಹ ಮೋದಿ ಅವರನ್ನೇ ಮತ್ತೊಮ್ಮೆ ಪ್ರಧಾನಿಯಾಗಿಸಲು ಕೋಟ ಪೂಜಾರಿ ಗೆಲುವಿಗೆ ಯುವ ಮೋರ್ಚಾ ಕಂಕಣ ಬದ್ಧರಾಗಬೇಕು.

  ಪ್ರಮೋದ್​ ಮಧ್ವರಾಜ್​, ಮಾಜಿ ಸಚಿವ

  ಇದು ಸಾಮಾನ್ಯ ಚುನಾವಣೆಯಲ್ಲ. ಇದು ಭಾರತದ ಭವಿಷ್ಯ ನಿರ್ಧರಿಸುವ ಚುನಾವಣೆ. ಹಿಂದೆ ಭಾರತದ ಆರ್ಥಿಕ ಸ್ಥಿತಿ ಹೇಗಿತ್ತೆಂದು ಜನರಿಗೆ ತಿಳಿದಿದೆ. ಈ ದೇಶದ ಚಿನ್ನವನ್ನು ವಿಮಾನದ ಮೂಲಕ ವಿದೇಶಕ್ಕೆ ಒಯ್ದು ಒತ್ತೆ ಇಟ್ಟು ಸಾಲ ಮಾಡಿ ಕಾಂಗ್ರೆಸ್​ ಸರ್ಕಾರ ದೇಶ ಆಳಿತ್ತು. ಆದರೆ, ಮೋದಿ ಪ್ರಧಾನಿಯಾದ ಬಳಿಕ ಅವರು ಮಾಡಿದ್ದ ವಿದೇಶಿ ಸಾಲಗಳನ್ನೆಲ್ಲ ತೀರಿಸಿ, ಜಗತ್ತಿನ 70 ದೇಶಗಳಿಗೆ ಸಾಲ ನೀಡುವ ಮಟ್ಟಿಗೆ ಭಾರತದ ಆರ್ಥಿಕ ಸ್ಥಿತಿಯನ್ನು ಬೆಳೆಸಿದ್ದಾರೆ. ಮೋದಿಯೇ ಮತ್ತೊಮ್ಮೆ ಪ್ರಧಾನಿ ಆಗಲು ನನ್ನನ್ನು ಗೆಲ್ಲಿಸಿ.

  ಕೋಟ ಶ್ರೀನಿವಾಸ್​ ಪೂಜಾರಿ, ಬಿಜೆಪಿ ಅಭ್ಯರ್ಥಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts