More

    ಹೆಗಲ ಮೇಲೆ ಶವ ಹೊತ್ತುಕೊಂಡು ನದಿ ದಾಟಲೇ ಬೇಕು… ಆಯ ತಪ್ಪಿದ್ರೆ ನೂರಾರು ಮಂದಿ ಜಲಸಮಾಧಿ!

    ಯಳಂದೂರು: ಮೃತರ ಶವ ಸಂಸ್ಕಾರ ಮಾಡಬೇಕೆಂದರೆ ಇವರು ಜೀವಭಯದಲ್ಲೇ ನದಿ ದಾಟಿ ಹೋಗಬೇಕು. ಇಲ್ಲಿನ ನಡಿಗೆ ಸ್ವಲ್ಪ ಆಯ ತಪ್ಪಿದರೂ ನೂರಾರು ಜನರು ಜೀವಂತ ಜಲಸಮಾಧಿ ಆಗುವುದು ಗ್ಯಾರಂಟಿ!

    ಅಂದಹಾಗೆ ಇಂತಹ ದುಸ್ಥಿತಿಗೆ ಸಿಲುಕಿರುವುದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ದಲಿತ ಸಮುದಾಯದವರು. ಹೌದು, ಇಲ್ಲಿನ ದಲಿತ ಸಮುದಾಯಕ್ಕೆ ಸೇರಿದ ಸಮಾಧಿಗೆ ಹೋಗಬೇಕೆಂದರೆ ನದಿ ದಾಟಬೇಕು. ಅದಕ್ಕಾಗಿ ಗ್ರಾಮಸ್ಥರೇ ಹಲಗೆಯಿಂದ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಹೆಗಲ ಮೇಲೆ ಶವಹೊತ್ತು ಈ ಸೇತುವೆ ಮೂಲಕ ನದಿ ದಾಟುವುದೇ ಅವರಿಗೆ ಸರ್ಕಸ್. ತೂಗುಯ್ಯಾಲೆಯಂತೆ ಅಲುಗಾಡುವ ಈ ಸೇತುವೆ ಮೇಲೆ ಕಾಲಿಡುತ್ತಿದ್ದಂತೆ ಎದೆ ಢವಢವ ಅನ್ನೋಕೆ ಶುರು ಮಾಡುತ್ತೆ. ಇದನ್ನೂ ಓದಿರಿ ದೇವರಿಗೆ ಕೈಮುಗಿಯುತ್ತಿದ್ದಾಗಲೇ ವ್ಯಕ್ತಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ!

    ಇಂತಹ ದುರ್ಗಮ ಹಾದಿಯಲ್ಲೇ ಸಂಬಂಧಿಕರು ಮತ್ತು ಕುಟುಂಬಸ್ಥರು ಮೃತದೇಹ ಎತ್ತಿಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸುವ ದುಸ್ಥಿತಿಯ ವಿಡಿಯೋ ವೈರಲ್​ ಆಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿದೆ.

    ಸ್ಮಶಾನಕ್ಕೆಂದು ಸರ್ಕಾರ ನಿಗದಿಪಡಿಸಿದ ‌ಜಮೀನನ್ನು ಖಾಸಗಿ ವ್ಯಕ್ತಿಗಳಿಂದ ಒತ್ತುವರಿ‌ ಮಾಡಿಕೊಳ್ಳಲಾಗಿದೆ. ಈ‌ ವಿವಾದ ಕೋರ್ಟ್ ಮೆಟ್ಟಿಲೇರಿದೆ. ವಿವಾದ ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಇದು ಸ್ಮಶಾನದ ಹಾದಿ.. ಸ್ವಲ್ಪ ಆಯ ತಪ್ಪಿದರೂ ಸ್ಥಳದಲ್ಲೇ ಜಲಸಮಾಧಿ ಆಗ್ತಾರೆ!

    ಇದು ಸ್ಮಶಾನದ ಹಾದಿ.. ಸ್ವಲ್ಪ ಆಯ ತಪ್ಪಿದರೂ ಸ್ಥಳದಲ್ಲೇ ಜಲಸಮಾಧಿ ಆಗ್ತಾರೆ!ಇಲ್ನೋಡಿ, ಸ್ಮಶಾನಕ್ಕೆ ಶವ ಹೊತ್ತುಕೊಂಡು ಸಾಗುವ‌ ದಾರಿ ಹೇಗಿದೆ ಎಂದು. ಸ್ವಲ್ಪ ಆಯಾ ತಪ್ಪಿದರೂ ಅವರ ಸಮಾಧಿ ಕಟ್ಟಿಟ್ಟ ಬುತ್ತಿ! ಇದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ದಲಿತರ ಸ್ಮಶಾನಕ್ಕೆ ಹೋಗುವ ದುರ್ಗಮ ದಾರಿ. ಹರಿಯುವ ನದಿ ದಾಟಲು ಹಲಗೆಯಿಂದ ನಿರ್ಮಿಸಿದ ಸೇತುವೆ ಮೇಲೆ ಶವ ಹೊತ್ತು ಹೋಗುತ್ತಿದ್ದಾರೆ. #Cemetery #MamballiVillage #Yelandur #Chamarajanagar

    Posted by Vijayavani on Sunday, August 23, 2020

    ಮಿಸ್ಟರ್ ಡಿಕೆಶಿ, ನೀವು ಜಾಮೀನಿನ ಮೇಲೆ ಹೊರಗಿದ್ದೀರಿ ಎಂಬುದನ್ನ ಅರಿತುಕೊಳ್ಳಿ; ಪ್ರಹ್ಲಾದ್ ಜೋಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts