More

    ಸಿಬಿಐ ಆಪರೇಷನ್ ಚಕ್ರ-2: ಸಂಘಟಿತ ಸೈಬರ್ ಆರ್ಥಿಕ ಅಪರಾಧಗಳ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಚರಣೆ

    ನವದೆಹಲಿ: ಅಂತಾರಾಷ್ಟ್ರೀಯ ಸಂಘಟಿತ ಸೈಬರ್ ಅಪರಾಧ ಜಾಲಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ಆಪರೇಷನ್ ಚಕ್ರ-2 ಪ್ರಾರಂಭಿಸಿದೆ. ಇದು ಭಾರತದಲ್ಲಿನ ಸಂಘಟಿತ ಸೈಬರ್ ಆರ್ಥಿಕ ಅಪರಾಧಗಳ ಮೂಲಸೌಕರ್ಯ ಎದುರಿಸಿ ಅದನ್ನು ತೊಡೆದುಹಾಕುವ ಗುರಿ ಹೊಂದಿದೆ.

    ಈ ಕಾರ್ಯಾಚರಣೆಯನ್ನು ಖಾಸಗಿ ವಲಯದ ದಿಗ್ಗಜರೊಂದಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳ ಸಹಯೋಗದಲ್ಲಿ ನಡೆಸಲಾಗಿದೆ. ಮಧ್ಯಪ್ರದೇಶ, ಉತ್ತರಪ್ರದೇಶ, ಕರ್ನಾಟಕ, ಹರಿಯಾಣ, ಕೇರಳ, ತಮಿಳುನಾಡು, ಪಂಜಾಬ್, ಬಿಹಾರ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳ 76 ಸ್ಥಳಗಳಲ್ಲಿನ ಐದು ಪ್ರಕರಣಗಳಲ್ಲಿ ಸಿಬಿಐ ತೀವ್ರ ಶೋಧ ನಡೆಸಿದೆ.

    ಆಪರೇಷನ್ ಚಕ್ರ-2 ಕಾರ್ಯಾಚರಣೆಯಲ್ಲಿ 32 ಮೊಬೈಲ್​ಫೋನ್​ನಗಳು, 48 ಲ್ಯಾಪ್​ಟಾಪ್​​ಗಳು/ಹಾರ್ಡ್​ಡಿಸ್ಕ್​, ಎರಡು ಸರ್ವರ್ ಇಮೇಜ್​, 33 ಸಿಮ್ ಕಾರ್ಡ್​ಗಳು ಮತ್ತು ಪೆನ್ ಡ್ರೈವ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಹಲವಾರು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಿಬಿಐ 15 ಇಮೇಲ್ ಖಾತೆಗಳ ದತ್ತಾಂಶವನ್ನೂ ವಶಪಡಿಸಿಕೊಂಡಿದೆ. ಈ ಮೂಲಕ ಆರೋಪಿಗಳು ಹೆಣೆದ ವಂಚನೆಯ ಸಂಕೀರ್ಣ ಜಾಲ ಕೂಡ ಬೆಳಕಿಗೆ ತಂದಿದೆ.

    ಇದನ್ನೂ ಓದಿ: #NoBindiNoBusiness | ಹಿಂದೂಗಳಿಂದ ಮತ್ತೆ ಅಭಿಯಾನ, ಟ್ರೆಂಡ್ ಆಯ್ತು ಕ್ಯಾಂಪೇನ್..

    ಆಪರೇಷನ್ ಚಕ್ರ-2 ಅಡಿಯಲ್ಲಿ ತಂದ ಪ್ರಕರಣಗಳಲ್ಲಿ, ಅಂತಾರಾಷ್ಟ್ರೀಯ ಟೆಕ್ ಬೆಂಬಲ ವಂಚನೆಯ ಹಗರಣದ ಎರಡು ನಿದರ್ಶನಗಳು ಬೆಳಕಿಗೆ ಬಂದವು. ಈ ಪ್ರಕರಣಗಳಲ್ಲಿ ಆರೋಪಿಗಳು ಆನ್​​ಲೈನ್​ ತಂತ್ರಜ್ಞಾನ ಚಾಲಿತ ವ್ಯಾಪಾರ ವೇದಿಕೆಯೊಂದಿಗೆ ಜಾಗತಿಕ ಐಟಿ ಪ್ರಮುಖ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಂತೆ ನಟಿಸಿದ್ದಾರೆ. ಆರೋಪಿಗಳು 5 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂಬತ್ತು ಕಾಲ್​ಸೆಂಟರ್​ಗಳ ಮೂಲಕ ತಾಂತ್ರಿಕ ಬೆಂಬಲ ಪ್ರತಿನಿಧಿಗಳ ಸೋಗಿನಲ್ಲಿ ವಿದೇಶಿ ಪ್ರಜೆಗಳನ್ನು ವ್ಯವಸ್ಥಿತವಾಗಿ ಮೋಸದ ಜಾಲದಲ್ಲಿ ಬೀಳಿಸುತ್ತಿದ್ದರು.

    ಇದಲ್ಲದೆ ಎಫ್​​ಐಯು ಇಂಡಿಯಾ ಸಂಸ್ಥೆಯಿಂದ ಮಹತ್ವದ ಗುಪ್ತಚರ ಮಾಹಿತಿ ಮೂಲಕ ಅತ್ಯಾಧುನಿಕ ಕ್ರಿಪ್ಟೋ ಕರೆನ್ಸಿ ವಂಚನೆಯನ್ನು ಆಪರೇಷನ್ ಚಕ್ರ-2 ಭೇದಿಸಿತು. ಈ ವಂಚನೆಯ ಯೋಜನೆ ನಕಲಿ ಕ್ರಿಪ್ಟೋ ಮೈನಿಂಗ್ ಕಾರ್ಯಾಚರಣೆ ನೆಪದಲ್ಲಿ ಭಾರತೀಯ ನಾಗರಿಕರನ್ನು ಗುರಿಯಾಗಿಸಿತ್ತು. ಇದರ ಪರಿಣಾಮವಾಗಿ ಭಾರತೀಯ ಸಂತ್ರಸ್ತರಿಗೆ 100 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ.

    ಇದನ್ನೂ ಓದಿ: ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

    ಆಪರೇಷನ್ ಚಕ್ರ-2 ಸಮಯದಲ್ಲಿ ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ ಗುರುತಿಸಲಾದ ಸಂತ್ರಸ್ತರ ವಿವರಗಳು, ಶೆಲ್ ಕಂಪನಿಗಳು, ಹಣದ ಕಾನೂನಬಾಹಿರ ದಲ್ಲಾಳಿಗಳು, ಅಪರಾಧದಿಂದ ಬಂದ ಹಣ, ಸಹ ಆರೋಪಿಗಳ ವಿವರಗಳನ್ನು ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳಿಗೆ ತಿಳಿಸಿ ಈ ಅಪರಾಧ ಜಾಲಗಳನ್ನು ತೊಡೆದುಹಾಕಲು ಸಮಗ್ರ ಕ್ರಮಕೈಗೊಳ್ಳಲು ಹೇಳಲಾಗಿದೆ.

    ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್​ಬಿಐ), ಸೈಬರ್ ಕ್ರೈಮ್ ಡೈರೆಕ್ಟೊರೇಟ್ ಮತ್ತು ಇಂಟರ್ಪೋಲ್​ನ ಐಎಫ್​ಸಿಎಸಿಸಿ, ಯುನೈಟೆಡ್ ಕಿಂಗ್​ಡಮ್​ನ ನ್ಯಾಷನಲ್ ಕ್ರೈಮ್ ಏಜೆನ್ಸಿ (ಎನ್​ಸಿಎ), ಸಿಂಗಾಪುರ್ ಪೊಲೀಸ್ ಮತ್ತು ಜರ್ಮನಿಯ ಬಿಕೆಎ ಸೇರಿದಂತೆ ಅಂತಾರಾಷ್ಟ್ರೀಯ ಸಹವರ್ತಿಗಳೊಂದಿಗೆ ಅಂತಾರಾಷ್ಟ್ರೀಯ ಪೊಲೀಸ್ ಸಹಕಾರದಲ್ಲಿ ಸಿಬಿಐ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

    ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ಸರ್ಕಾರದಿಂದ ಹೊಸ ಆದೇಶ

    ಪೆಟ್ರೋಲ್ ಬಂಕ್​ಗಳಲ್ಲಿನ ಮೋಸ ತಪ್ಪಿಸಲು ಸರ್ಕಾರಕ್ಕೆ ಹೊಸ ಬೇಡಿಕೆ: ವಿಡಿಯೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts