More

    ಲಂಚ ಪಡೆಯುತ್ತಾ ಸಿಕ್ಕಿಬಿದ್ದ ಪೊಲೀಸ್… ಪಿಸ್ತೂಲ್ ತೋರಿಸಿ ಪರಾರಿ !

    ಮುಂಬೈ : ಲಂಚ ಪಡೆಯುತ್ತಾ ರೆಡ್​ ಹಾಂಡೆಡ್​ ಆಗಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಯೊಬ್ಬ ಎಸಿಬಿ ಅಧಿಕಾರಿಗಳಿಗೆ ಪಿಸ್ತೂಲ್ ತೋರಿಸಿ ಹಣ ಎತ್ತಿಕೊಂಡು ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದಿಂದ ವರದಿಯಾಗಿದೆ. ರಾಜ್ಯದ ರಾಯಗಡ ಜಿಲ್ಲೆಯ ಮಾನ್​ಗಾವ್​ ಠಾಣೆ ಸಬ್​ಇನ್ಸ್​ಪೆಕ್ಟರ್ ಗಣೇಶ್ ಕಂಡೇಕರ್ ಎಂಬುವರೇ ಹೀಗೆ ಓಡಿಹೋಗಿರುವ ಪೊಲೀಸ್!

    ಠಾಣೆಯಲ್ಲಿ ದೂರು ಸ್ವೀಕರಿಸಲು 50 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದಾರೆ ಎಂಬ ದೂರಿನ ಮೇರೆಗೆ ಆ್ಯಂಟಿ ಕರಪ್ಷನ್ ಬ್ಯೂರೋ(ಎಸಿಬಿ) ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದರು. ಬುಧವಾರ ಬೆಳಿಗ್ಗೆ 11.30 ರ ಸುಮಾರಿಗೆ ಜಾಲ ಬೀಸಿದಾಗ, ಎಸ್​ಐ ಕಂಡೇಕರ್ ದೂರು ಸ್ವೀಕರಿಸಲು 25,000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಸಾಕ್ಷಿ ಸಮೇತ ಹಿಡಿಯಲು ಮುಂದಾದರು.

    ಇದನ್ನೂ ಓದಿ: ಆಸ್ಪತ್ರೆಯ ಡ್ರೆಸ್ ಚೇಂಜಿಂಗ್ ರೂಮಲ್ಲಿ ಕ್ಯಾಮೆರಾ! ಮೊಬೈಲ್ ಚಾರ್ಜ್​ಗೆ ಹಾಕಿ ರೆಕಾರ್ಡಿಂಗ್!

    ಎಚ್ಚೆತ್ತುಕೊಂಡ ಕಂಡೇಕರ್, ಎಸಿಬಿಯ ಇನ್ಸ್​ಪೆಕ್ಟರ್ ಮತ್ತು ಪೇದೆ ಅವರನ್ನು ಬಂಧಿಸಲು ಹೋದಾಗ ತಮ್ಮ ಸರ್ವೀಸ್ ಪಿಸ್ತೋಲನ್ನು ತೋರಿಸಿದ್ದಾರೆ. ನಂತರ ಪೇದೆಗೆ ಬೈಕ್​ನಿಂದ ಗುದ್ದಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಎಸಿಬಿ ಪೇದೆಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಗಡ ಎಸಿಬಿಯು ಪ್ರಕರಣ ದಾಖಲಿಸಿದ್ದು, ಪರಾರಿಯಾಗಿರುವ ಎಸ್​ಐ ಗಣೇಶ್ ಕಂಡೇಕರ್ ಅವರ ಪತ್ತೆ ಕಾರ್ಯ ಆರಂಭವಾಗಿದೆ. (ಏಜೆನ್ಸೀಸ್)

    ‘ರಾಜ್ಯದ ಜನತೆ ಸಂಕಷ್ಟದಲ್ಲಿದಾರೆ, ದಿಕ್ಕು ತಪ್ಪಿಸಬೇಡಿ’ : ಸಿಡಿ ಲೇಡಿಗೆ ಎಚ್​ಡಿಕೆ ಸಲಹೆ

    ಯಾರೀ ಮತ್ಸ್ಯಕನ್ಯೆ ? ಮತ್ತೊಮ್ಮೆ ನೋಡಿ…

    “ಹಿಂದೆ ಮಹಿಳೆಯರ ಸೊಂಟ ನಂಬರ್ 8 ರಂತೆ ಇರುತ್ತಿತ್ತು, ಈಗ ಡ್ರಮ್ಮಿನಂತಾಗಿದ್ದಾರೆ” ಎಂದ ಡಿಎಂಕೆ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts