More

    ಕರೊನಾ ಸೋಂಕಿಗೆ ಆಯುರ್ವೇದ ಚಿಕಿತ್ಸೆ? ಕ್ಲಿನಿಕಲ್​ ಟ್ರಯಲ್​​ನಿಂದ ಹೊರಬಿತ್ತು ಅಚ್ಚರಿಯ ಫಲಿತಾಂಶ

    ನವದೆಹಲಿ: ಕೊವಿಡ್-19 ಸೋಂಕಿಗೆ ಆಯುರ್ವೇದದಲ್ಲಿ ಪರಿಣಾಮಕಾರಿ ಮದ್ದು ಇದೆಯಾ? ಆಯುರ್ವೇದ ಔಷಧಿಯಿಂದ ಸೋಂಕು ನಿವಾರಣೆಯಾಗುತ್ತದೆಯಾ? ಎಂಬ ಪ್ರಶ್ನೆ ಕರೊನಾ ಪ್ರಾರಂಭದಿಂದಲೂ ಇದೆ. ಆಯುರ್ವೇದ ಚಿಕಿತ್ಸೆ ಮೂಲಕವೇ ಕರೊನಾ ಗುಣಪಡಿಸಿಕೊಂಡವರೂ ಇದ್ದಾರೆ.

    ಈ ಮಧ್ಯೆ ಇನ್ನೊಂದು ಮಹತ್ವದ ಬೆಳವಣಿಗೆ ಆಗಿದೆ. ಕ್ಲಿನಿಕಲ್​ ಟ್ರಯಲ್​ವೊಂದರ ಮಧ್ಯಂತರ ವರದಿ ಹೊರಬಿದ್ದಿದ್ದು, ಅದರಲ್ಲಿ ನೈಸರ್ಗಿಕ ಚಿಕಿತ್ಸೆ ಪಡೆಯುತ್ತಿರುವ ಕರೊನಾ ರೋಗಿಗಳು, ಆಲೋಪಥಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗಿಂತ ಬಹುಬೇಗನೇ ರೋಗಲಕ್ಷಣಗಳಿಂದ ಮುಕ್ತರಾಗುತ್ತಿದ್ದಾರೆ ಎಂಬ ಅಂಶ ಗೊತ್ತಾಗಿದೆ. ಒಟ್ಟು ಮೂರು ಆಸ್ಪತ್ರೆಗಳಲ್ಲಿ ನಡೆದ ಕ್ಲಿನಿಕಲ್​ ಟ್ರಯಲ್​​ಗಳಲ್ಲೂ ಇದೇ ವರದಿ ಬಂದಿದೆ. ಇದನ್ನೂ ಓದಿ: ಪತಿಯೊಂದಿಗೆ ಚಾಮುಂಡಿ ದರ್ಶನ ಪಡೆದ ರೋಹಿಣಿ ಸಿಂಧೂರಿ: ಡಿಸಿ ಆಗಿ ಅಧಿಕಾರ ಸ್ವೀಕಾರ ಬೆನ್ನಲ್ಲೇ ಖಡಕ್​ ಸಂದೇಶ!

    ಕರೊನಾ ವೈರಸ್ ಚಿಕಿತ್ಸೆಗೆ ಸರ್ಕಾರ ಅನುಮೋದನೆ ನೀಡಿದ ಅಲೋಪಥಿ ಔಷಧಕ್ಕಿಂತಲೂ, ಆಯುರ್ವೇದಿಕ್​ ಔಷಧಿಗಳಾದ ಕೊರಿವಲ್ ಲೈಫ್ ಸೈನ್ಸಸ್​​ನ ‘ ಇಮ್ಯೂನ್​ಫ್ರೀ’ ಮತ್ತು ಬಯೋಜೆಟಿಕಾದ ‘ರೆಜಿನ್​ಮ್ಯೂನ್​ ‘ ನ್ಯೂಟ್ರಾ ಸುಟಿಕಲ್​​ ಮಿಶ್ರಣದ ಚಿಕಿತ್ಸೆ ಕರೊನಾ ವಿರುದ್ಧ ಮತ್ತಷ್ಟು ಪರಿಣಾಮಕಾರಿಯಾಗಿ ಹೋರಾಡುತ್ತದೆ. ಇದರ ಮೂಲಕ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಬೇಗನೇ ಗುಣಮುಖರಾಗುತ್ತಿದ್ದಾರೆ ಎಂದು ವರದಿಯಾಗಿದೆ.

    ಅಲೋಪಥಿಕ್ ಟ್ರೀಟ್​ ಮೆಂಟ್​ ಪಡೆದವರಿಗೆ ಹೋಲಿಸಿದರೆ ಆಯುರ್ವೇದಿಕ್​ ಚಿಕಿತ್ಸೆ ಪಡೆದವರನ್ನು ಸಿ ರಿಯಾಕ್ಟಿವ್​ ಪ್ರೋಟಿನ್​, ಪ್ರೊಕಾಲ್ಸಿಟೋನಿನ್, ಡಿ ಡಿಮರ್​ ಮತ್ತು ಆರ್​ಟಿ-ಪಿಸಿಆರ್​ ಟೆಸ್ಟ್​ಗೆ ಒಳಪಡಿಸಿದಾಗ ಅದರ ರಿಪೋರ್ಟ್​​ನಲ್ಲಿ ಶೇ. 20-60ರಷ್ಟು ಸುಧಾರಣೆ ಕಂಡುಬರುತ್ತಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಅರೆ ಇದೆಂಥ ಆಘಾತ! ಕರ್ನಾಟಕಕ್ಕೂ ಕಾಲಿಟ್ಟುಬಿಟ್ಟಿದೆ ಹೊಸ ಚೀನಿ ವೈರಸ್​- ಇಬ್ಬರಲ್ಲಿ ಪತ್ತೆ!

    ಆಯುರ್ವೇದಿಕ್​ ಚಿಕಿತ್ಸೆ ಪಡೆದವರಲ್ಲಿ ಶೇ.85ರಷ್ಟು ಜನರಿಗೆ ಐದನೇ ದಿನಕ್ಕೆ ಕರೊನಾ ನೆಗೆಟಿವ್​ ವರದಿ ಬಂದಿದೆ. ಹಾಗೇ ಸಾಂಪ್ರದಾಯಿಕ ಚಿಕಿತ್ಸೆ ಪಡೆದ ಶೇ.60ರಷ್ಟು ಜನರಲ್ಲಿ ಮಾತ್ರ ಈ ಫಲಿತಾಂಶ ಕಾಣಿಸಿದೆ. ಇನ್ನು ಆಯುರ್ವೇದ ಚಿಕಿತ್ಸೆಯಲ್ಲಿ 10ನೇ ದಿನಕ್ಕೆ ಎಲ್ಲ ರೋಗಿಗಳೂ ಕರೊನಾದಿಂದ ಮುಕ್ತರಾಗುತ್ತಿದ್ದಾರೆ ಎಂದು ಕ್ಲಿನಿಕಲ್​ ಟೆಸ್ಟ್​ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಇಮ್ಯೂನ್​ಫ್ರೀ’ ಮತ್ತು ‘ರೆಜಿನ್​ಮ್ಯೂನ್​ ‘ಗಳನ್ನು ಆಂಧ್ರಪ್ರದೇಶದ ಶ್ರೀಕಾಕುಲಂ ಸರ್ಕಾರಿ ವೈದ್ಯಕೀಯ ಆಸ್ಪತ್ರೆ, ಗುಜರಾತ್​ನ ವಡೋದರಾದಲ್ಲಿರುವ ಪಾರುಲ್​ ಸೇವಾಶ್ರಮ ಆಸ್ಪತ್ರೆ, ಮಹಾರಾಷ್ಟ್ರದ ಪುಣೆಯ ಲೋಕಮಾನ್ಯ ಆಸ್ಪತ್ರೆಗಳ ಔಷಧೀಯ ನಿಯಂತ್ರಿತ ಮಲ್ಟಿಸೆಂಟರ್​​ಗಳಲ್ಲಿ ಕ್ಲಿನಿಕಲ್ ಟ್ರಯಲ್​ಗೆ ಒಳಪಡಿಸಲಾಗಿದೆ. ಸಿಟಿಆರ್​ಐನಿಂದ ಅನುಮೋದನೆಯೂ ಸಿಕ್ಕಿದೆ. (ಏಜೆನ್ಸೀಸ್)

    ಅ.1ರಿಂದ ಹೊಸಹೊಸ ನಿಯಮಗಳು ಜಾರಿ, ಇಲ್ಲಿದೆ ನೋಡಿ ಸಂಪೂರ್ಣ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts