More

    ಮೃತ ವ್ಯಕ್ತಿಯ ವೀರ್ಯದ ಹಕ್ಕು ಪತ್ನಿಗೆ ಮಾತ್ರ: ತಂದೆಯ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ!

    ಕೋಲ್ಕತ: ಮೃತ ಮಗನ ವೀರ್ಯ ಸಂಗ್ರಹ ಸಂಬಂಧ ತಂದೆ ಹೂಡಿದ್ದ ದಾವೆಯನ್ನು ತಿರಸ್ಕರಿಸಿರುವ ಕೋಲ್ಕತ ಹೈಕೋರ್ಟ್​ ವಿಧವೆಗೆ ಮಾತ್ರ ಮೃತ ಗಂಡನ ವೀರ್ಯದ ಮೇಲೆ ಹಕ್ಕಿದೆ ಎಂಬ ಮಹತ್ವದ ತೀರ್ಪು ಪ್ರಕಟಿಸಿದೆ.

    ನ್ಯಾಯಮೂರ್ತಿ ಸವ್ಯಸಾಚಿ ಭಟ್ಟಾಚಾರ್ಯ ಆದೇಶ ಹೊರಡಿಸಿದ್ದು, ದೆಹಲಿಯ ವೀರ್ಯ ಬ್ಯಾಂಕಿನಲ್ಲಿ ಸಂರಕ್ಷಿಸಲಾಗಿರುವ ಏಕೈಕ ಮಗನ ವೀರ್ಯವನ್ನು ನೀಡುವಂತೆ ತಂದೆ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ತಿರಸ್ಕರಿಸಿದೆ.

    ಇದನ್ನೂ ಓದಿರಿ: ಎಸ್​ಐಗೆ ಸಾವಿನ ದಾರಿ ತೋರಿದ ಬ್ಯೂಟಿಷಿಯನ್​ ಬಂಧನ: ಸುಂದರಿಯ ಹೈಡ್ರಾಮಕ್ಕೆ ಬೆದರಿ ನೇಣಿಗೆ ಶರಣು!

    2020ರಲ್ಲಿ ಕೋರ್ಟ್​ ಮೆಟ್ಟಿಲೇರಿದ್ದ ತಂದೆ, ಮಗನ ವೀರ್ಯ ನೀಡಲು ನನ್ನ ಸೊಸೆ ತಿರಸ್ಕರಿಸಿದಲ್ಲದೆ, ನಮ್ಮ ಮನವಿಯನ್ನು ಸಹ ಅಂಗೀಕರಿಸಲಿಲ್ಲ. ಆಸ್ಪ್ರತೆಯ ವೀರ್ಯ ಬ್ಯಾಂಕ್​ ಜತೆಗಿನ ಒಪ್ಪಂದದ ಸಮಯದಲ್ಲಿ ವೀರ್ಯ ಏನಾದರೂ ನಾಶವಾದರೆ, ನಾವು ಕುಲವನ್ನೇ ಕಳೆದುಕೊಳ್ಳಲಿದ್ದೇವೆ ಎಂದು ತಂದೆ ಆತಂಕ ವ್ಯಕ್ತಪಡಿಸಿದ್ದರು.

    ಜನವರಿ 19ರಂದು ಮೂರು ಪುಟಗಳ ಆದೇಶ ಓದಿದ ನ್ಯಾಯಮೂರ್ತಿ ಸವ್ಯಸಾಚಿ ಭಟ್ಟಾಚಾರ್ಯ ಅವರು, ವೀರ್ಯ ಪಡೆ ಅನುಮತಿಗೆ ಯಾವುದೇ ಮೂಲಭೂತ ಹಕ್ಕುಗಳು ಇಲ್ಲ. ಆ ಅಧಿಕಾರವೇನಿದ್ದರು ಪತ್ನಿಗೆ ಮಾತ್ರ ಇದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿರಿ: ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…

    ಮೃತ ವ್ಯಕ್ತಿಗೆ ಸಂಬಂಧಿಸಿದ ವೀರ್ಯವನ್ನು ದೆಹಲಿ ಆಸ್ಪತ್ರೆಗೆಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಮದುವೆಯಾದಾಗಿನಿಂದ ಮತ್ತು ಮೃತಪಟ್ಟಾಗಿನಿಂದ ಆತನ ವೀರ್ಯದ ಹಕ್ಕು ಆತನನ್ನು ಹೊರತುಪಡಿಸಿ ಪತ್ನಿಗೆ ಮಾತ್ರ ಇದೆ. ಆದರೆ, ತಂದೆ-ಮಗನಿಗೆ ಇದು ಸಂಬಂಧಿಸಿದ್ದಲ್ಲ ಎಂದು ತಿಳಿಸಿದೆ. (ಏಜೆನ್ಸೀಸ್​)

    31 ಬಾರಿ ಕೋವಿಡ್ ಪಾಸಿಟಿವ್​: ಟೆಸ್ಟ್​ ಮಾಡಿದಾಗಲೆಲ್ಲ ಬಿಡದ ಕರೊನಾ, ಮಹಿಳೆಯ ರಿಪೋರ್ಟ್​ ನೋಡಿ ವೈದ್ಯರು ಶಾಕ್​!​​

    ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಟ್ರಂಪ್​ಗೆ ಕೈ ಕೊಟ್ಟ ಮೆಲನಿಯಾ ಟ್ರಂಪ್​?! 15 ವರ್ಷಗಳ ದಾಂಪತ್ಯ ಅಂತ್ಯ?

    ಬೆತ್ತಲೆ ಫೋಟೋ ಹರಿಬಿಟ್ಟು ಸಂಭ್ರಮಿಸಿದ ಮಹಿಳೆ: ಕಾರಣ ಕೇಳಿದ್ರೆ ಹೀಗೂ ಉಂಟೆ ಅಂತಿರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts