More

    ಆಸ್ತಿ ವಿಭಜನೆ ಅರ್ಜಿ ವಿಚಾರಕ್ಕೆ ಲಂಚ ಸ್ವೀಕರಿಸಿದ ಪ್ರಕರಣ: ಇಬ್ಬರು ಕಂದಾಯ ಅಧಿಕಾರಿಗಳ ಅಮಾನತು

    ಬೆಂಗಳೂರು: ಬಿಬಿಎಂಪಿ ಪೂರ್ವ ವಲಯದ ಸಿ.ವಿ. ರಾಮನ್‌ನಗರ ಉಪವಿಭಾಗದಲ್ಲಿ ಆಸ್ತಿಯನ್ನು ವಿಭಜನೆ ಮಾಡಿಕೊಡಲು ಲಂಚ ಸ್ವೀಕರಿಸಿದ್ದ ಆರೋಪದಲ್ಲಿ ಇಬ್ಬರು ಕಂದಾಯ ಅಧಿಕಾರಿಗಳನ್ನು ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತ ಯೋಗೇಶ್ ಆಮಾನತು ಮಾಡಿದ್ದಾರೆ.

    ಚಿಕ್ಕಬಾಣಸವಾಡಿ ಗ್ರಾಮಠಾಣೆ ವ್ಯಾಪ್ತಿಯ ಕೆ. ಸುಬ್ರಮಣಿ ಎನ್ನುವವರು ಸಕಾಲದಡಿ ಮೇ 25 ರಂದು ತಮ್ಮ ಆಸ್ತಿಯ ಖಾತೆಯನ್ನು ದಾನಪತ್ರ ಹಾಗೂ ಇತರೆ ದಾಖಲೆಗಳ ಆಧಾರದಲ್ಲಿ ವಿಭಜಿಸಲು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ಕಂದಾಯ ಅಧಿಕಾರಿ ಮತ್ತು ಸಹ ಕಂದಾಯ ಅಧಿಕಾರಿಗಳು ಪ್ರಸ್ತಾವನೆಯನ್ನು ಅನುಮೋದಿಸಿದ್ದರು.

    ಆನ್‌ಲೈನ್‌ನಲ್ಲಿ ಪರಿಶೀಲನೆ ಮಾಡಿದಾಗ ಅರ್ಜಿಗೆ ಅನುಮೋದನೆ ಸಿಕ್ಕು ವಿಭಜನೆಯ ವಿಶೇಷ ಸೂಚನಾ ಪತ್ರ ನೀಡಲಾಗಿದೆ. ಆದರೆ, ಕಂದಾಯ ವಸೂಲಿಗಾರ ಕುಮಾರ್ ಬಾಬು ಮತ್ತು ಕಂದಾಯ ಪರಿವೀಕ್ಷಕ ಲೋಕೇಶ್‌ಬಾಬು ಅರ್ಜಿದಾರರ ಮನೆಗೆ ತೆರಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ, ಹಣವನ್ನು ಪಡೆಯುವ ವಿಡಿಯೊ ಲಭ್ಯವಾಗಿದ್ದು, ಇದನ್ನು ಆಧರಿಸಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.


    ಈ ಘಟನೆಯು ಜು.8 ರಂದು ನಡೆದಿದ್ದು, ಪೂರ್ವ ವಲಯದ ಉಪ ಮತ್ತು ಜಂಟಿ ಆಯುಕ್ತರು ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ. ಇದನ್ನು ಪರಿಗಣಿಸಿ ಕುಮಾರ್ ಬಾಬು ಮತ್ತು ಲೋಕೇಶ್‌ಬಾಬು ಅವರನ್ನು ಅಮಾನತುಗೊಳಿಸಲಾಗಿದೆ. ಆಸ್ತಿ ಸಂಬಂಧಿತ ಎಲ್ಲ ಸೇವೆಗಳನ್ನು ಆನ್‌ಲೈನ್ ರಹಿತವಾಗಿ ನೀಡಬೇಕು ಎನ್ನುವ ಕಚೇರಿ ಸುತ್ತೋಲೆ ಇದ್ದರೂ, ಹಲವು ಅಧಿಕಾರಿಗಳು ಅರ್ಜಿದಾರರ ಮನೆಗೆ ತೆರಳಿ ಲಂಚ ಪಡೆಯುತ್ತಿರುವ ಪ್ರಕರಣಗಳು ವರದಿ ಆಗುತ್ತಿರುವುದು ಪಾಲಿಕೆಗೆ ನಾಚಿಕೆಗೇಡಿನ ವಿಚಾರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts