More

    ಐನೂರು ವರ್ಷದ ಸೊಸೆಯಂದಿರ ಬಾವಿಯಲ್ಲಿ ಈಜಲು ಹೋಗಿ ಸಾವಿಗೀಡಾದ ಬಾಲಕ!

    ಕೊಪ್ಪಳ: ನೀರಿನಲ್ಲಿ ಈಜಿಗೆ ಹಾಗೂ ಮೋಜಿಗೆ ಮುಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಇದೀಗ ಅಂಥ ಸಾವುಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ಈ ಪ್ರಕರಣದಲ್ಲಿ ಹದಿನಾಲ್ಕು ವರ್ಷದ ಪೋರನೊಬ್ಬ ಜೀವ ಕಳೆದುಕೊಂಡಿದ್ದಾನೆ.

    ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬಸವರಾಜು (14) ಎಂಬಾತ ಮೃತಪಟ್ಟವ. ಈತ ಪುರಾತನ ಬಾವಿಯಲ್ಲಿ ಈಜುವ ಸಾಹಸಕ್ಕೆ ಮುಂದಾಗಿ ಸಾವಿಗೀಡಾಗಿದ್ದಾನೆ.

    ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಯ ಮತ್ತೊಂದು ವಿಡಿಯೋ ವೈರಲ್​; ಗೆಸ್ಟ್​ ಹೌಸ್​​ನಲ್ಲಿ ಸ್ವತಃ ಪೊರಕೆ ಹಿಡಿದು ರೂಮ್​ ಗುಡಿಸಿದ ನಾಯಕಿ..!

    ಸುಮಾರು ಐನೂರು ವರ್ಷಗಳ ಇತಿಹಾಸ ಹೊಂದಿರುವ, ಸೊಸೆಯಂದಿರ ಬಾವಿ ಎಂದೇ ಕರೆಯಲಾಗುವ ಈ ಪುರಾತನ ಬಾವಿಯಲ್ಲಿ ಈತ ಮಧ್ಯಾಹ್ನ ಸ್ನೇಹಿತರ ಜತೆ ಈಜಲು ತೆರಳಿದ್ದ. ಆದರೆ ಈಜಲು ಆಗದೆ ಮುಳುಗಿ ಮೃತಪಟ್ಟಿದ್ದಾನೆ.

    ಇದನ್ನೂ ಓದಿ: ಕೆರೆಗೆ ಹಾರ: ಈಜಲು ಹೋದ ನಾಲ್ವರು ನೀರುಪಾಲು; ಮೂವರ ಶವ ಇನ್ನೂ ನಾಪತ್ತೆ..

    ಬಸವರಾಜು ನೀರಿನಲ್ಲಿ ಮುಳುಗಿದ ಕುರಿತು ಸ್ನೇಹಿತರು ತಿಳಿಸಿದ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಅವರು ತಕ್ಷಣ ಧಾವಿಸಿ ಕಾರ್ಯಾಚರಣೆಗೆ ಮುಂದಾದರೂ ಸುಮಾರು ನಾಲ್ಕು ಗಂಟೆಗಳ ಕಾಲ ಬಸವರಾಜು ಪತ್ತೆ ಆಗಿರಲಿಲ್ಲ. ಆ ಬಳಿಕ ಆತನ ಶವ ಸಿಕ್ಕಿದೆ. ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಶಾಸಕರ ಕಾರಿಗೆ ಮಹಿಳೆ ಬಲಿ; ಕಾರು-ಬೈಕ್ ಅಪಘಾತದಲ್ಲಿ 58 ವರ್ಷದ ಸ್ತ್ರೀ ಸ್ಥಳದಲ್ಲೇ ಸಾವು..

    ರಾಜ್ಯದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ; ನೇಣಿಗೆ ಕೊರಳೊಡ್ಡಿದ ಸಹಾಯಕ ಸಬ್​ ಇನ್​​ಸ್ಪೆಕ್ಟರ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts