More

    ಬಾಲಿವುಡ್​ ಟಾಪ್​ ಸಿನಿಮಾಗಳ ಬಿಡುಗಡೆಗೆ ಮುಳುವಾಯ್ತು ಐಪಿಎಲ್​!

    ಮುಂಬೈ: ಬಿಡುಗಡೆಗೆ ಸಿದ್ಧವಿರುವ ಬಾಲಿವುಡ್​ ಸಿನಿಮಾಗಳಿಗೆ ಒಂದಾದ ನಂತರ ಒಂದು ಸಮಸ್ಯೆ ಎದುರಾಗುತ್ತಿದೆ. ಇಷ್ಟು ದಿನ ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರ ಸ್ಥಗಿತಗೊಂಡಿದ್ದರಿಂದ ಸಿನಿಮಾ ಪ್ರದರ್ಶನ ಇರಲಿಲ್ಲ. ಬಳಿಕ ಓಟಿಟಿಯಲ್ಲಾದರೂ ಬಿಡುಗಡೆ ಮಾಡಿಕೊಂಡರಾಯಿತೆಂದು ತಂಡಗಳು ಪ್ಲಾನ್​ ಮಾಡಿಕೊಂಡಿದ್ದವು. ಆದರೆ, ಇದೀಗ ಆ ಸಿನಿಮಾಗಳಿಗೆ ಐಪಿಎಲ್​ ಕಂಟಕವಾಗಿ ಪರಿಣಮಿಸಿದೆ.

    ಇದನ್ನೂ ಓದಿ: ಇಡೀ ಚಿತ್ರರಂಗವನ್ನು ದೂಷಿಸುವುದು ತಪ್ಪಲ್ವಾ? ಜಯಾ ಬಚ್ಚನ್​ ಪ್ರಶ್ನೆ

    ಹೌದು, ಜೂನ್​ ತಿಂಗಳಲ್ಲಿಯೇ ಸರಣಿ ಸಿನಿಮಾಗಳನ್ನು ಬಿಡುಗಡೆ ಮಾಡಿಕೊಳ್ಳುವುದಾಗಿ ಡಿಸ್ನಿ ಹಾಟ್​​ಸ್ಟಾರ್ ಹೇಳಿಕೊಂಡಿತ್ತು. ಅಕ್ಷಯ್​ ಕುಮಾರ್, ಅಜಯ್​ ದೇವಗನ್​, ಅಭಿಷೇಕ್​ ಬಚ್ಚನ್​ ಸಿನಿಮಾಗಳೂ ಓಟಿಟಿಯಲ್ಲಿ ಬಿಡುಗಡೆ ಆಗಲು ಸಿದ್ಧವಾಗಿದ್ದವು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಸೆಪ್ಟೆಂಬರ್ ತಿಂಗಳ ಕೊನೆಗೆ ಒಂದಾದ ಬಳಿಕ ಒಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಐಪಿಎಲ್​ನಿಂದಾಗಿ ಸಿನಿಮಾ ರಿಲೀಸ್​ ಮತ್ತೆ ಮುಂದಕ್ಕೆ ಹೋಗಿದೆ.

    ಇದನ್ನೂ ಓದಿ: ಈ ಸಲದ ಹಿಂದಿ ಬಿಗ್​ಬಾಸ್​ಗೆ ಸಲ್ಮಾನ್​ ಜತೆ ಇನ್ನೊಬ್ಬ ನಿರೂಪಕ

    ಓಟಿಟಿ ಸಂಸ್ಥೆ ಸದ್ಯ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿದ್ದು, ಐಪಿಎಲ್​ ಮುಕ್ತಾಯದ ಬಳಿಕವಷ್ಟೇ ಲಕ್ಷ್ಮೀ ಬಾಂಬ್​, ಭುಜ್​, ಬಿಗ್​ ಬುಲ್ ಚಿತ್ರಗಳನ್ನು ರಿಲೀಸ್​ ಮಾಡಲಿದೆಯಂತೆ. ದೀಪಾವಳಿ ವೇಳೆಗೆ ಲಕ್ಷ್ಮೀ ಬಾಂಬ್​ ತೆರೆಗೆ ಬರುವುದು ಅಧಿಕೃತ ಎಂದೇ ಹೇಳಲಾಗುತ್ತಿದೆ.

    ಒಟ್ಟಿನಲ್ಲಿ ಇಷ್ಟು ದಿನ ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಮುಚ್ಚಿದ್ದರಿಂದ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಇದೀಗ ಓಟಿಟಿಯಲ್ಲಿ ಬಿಡುಗಡೆಗೆ ಸಜ್ಜಾದರೂ, ಐಪಿಎಲ್​ನಿಂದ ಮತ್ತೆ ರಿಲೀಸ್​ ದಿನವನ್ನು ಮುಂದೂಡಿಕೊಂಡಿವೆ. ಈ ಸಿನಿಮಾಗಳಿಗಾಗಿ ಕಾದಿರುವ ಪ್ರೇಕ್ಷಕರು ಮತ್ತಷ್ಟು ಸಿನ ಕಾಯಲೇಬೇಕು. (ಏಜೆನ್ಸೀಸ್​)

    ನಟನೆ ಜತೆ ಹೊಸ ಕೆಲಸಕ್ಕೆ ಕೈ ಹಾಕಿದ ಕಣ್ಸನ್ನೆ ಸುಂದರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts