More

    ಬಿಜೆಪಿ ಮನುಸ್ಮೃತಿ ಆಧಾರದ ಸಂವಿಧಾನ ರಚನೆ ಆಗಬೇಕೆಂದು ಬಯಸಿದೆ; ಸಿದ್ದರಾಮಯ್ಯ

    ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಅವರು ಅಸಮಾನತೆ ಹೋಗಲಾಡಿಸಬೇಕೆಂದು ಹೇಳಿದ್ದರು. ಇದಕ್ಕೆ ಬಿಜೆಪಿಯಿಂದ ವಿರುದ್ದ ಇದೆ. ಅವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಇದನ್ನು ಶೋಷಿತ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಬಿಜೆಪಿ RSSನ ರಾಜಕೀಯ ಅಂಗವಾಗಿದ್ದು, ಆರ್​ಎಸ್​​ಎಸ್​​ ಮತ್ತು ಹಿಂದು ಮಹಾಸಭಾ ನಿಯಂತ್ರಣ ಮಾಡುತ್ತಿದೆ. ಆರ್​​ಎಸ್​​ಎಸ್​ ಅವರ ಚಿಂತನಾ ಗಂಗಾ ಪುಸ್ತಕ, ಆರ್​​ಎಸ್​​ಎಸ್​​ ಮುಖವಾಣಿ ಪತ್ರಿಕೆಯಲ್ಲೂ ಅಂಬೇಡ್ಕರ್ ಸಂವಿಧಾನವನ್ನು ಅವರು ಒಪ್ಪಿಕೊಂಡಿಲ್ಲ. ಸಂವಿಧಾನ ಸರಿಯಾಗಿ ರಚನೆ ಮಾಡಿಲ್ಲ, ಈ ದೇಶಕ್ಕೆ ಯೋಗ್ಯವಾದ ಸಂವಿಧಾನ ಅಲ್ಲ ಎನ್ನುತ್ತಾರೆ ಎಂದು ಹೇಳಿದರು.

    ಇದನ್ನೂ ಓದಿ: ಪೂಂಚ್​ನಲ್ಲಿ ಒಳನುಸುಳುವಿಕೆ ಯತ್ನ; ಓರ್ವ ಭಯೋತ್ಪಾದಕನ ಹತ್ಯೆ

    ಬಿಜೆಪಿ ಮೀಸಲಾತಿಯನ್ನು ವಿರೋಧ ಮಾಡುತ್ತಾ ಬರುತ್ತಿದೆ. ಶೋಷಿತ ಸಮಾಜಗಳು ಈ ಬಾರಿ ರಾಜ್ಯದಲ್ಲಿ ಕೋಮುವಾಗಿ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಬೇಕು. ಬಿಜೆಪಿ ಪಕ್ಷ ಆರ್​ಎಸ್​ಎಸ್ ಹಾಗೂ ಹಿಂದು ಮಹಾಸಭಾದ ರಾಜಕೀಯ ಮುಖವಾಡ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

    ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಅವರೆಲ್ಲ ಕೂಗು ಮಾರಿಗಳು. ಅವರು ಸಂವಿಧಾನದ ಬಗ್ಗೆ ‌ಮಾತಾಡುತ್ತಾರೆ. ಆರ್​ಎಸ್​​ಎಸ್​ ಮತ್ತು ಹಿಂದು ಮಹಾಸಭಾ ಸಂವಿಧಾನಕ್ಕೆ ಕವಡೆಕಾಸಿನ ಬೆಲೆ ಕೊಡುವುದಿಲ್ಲ. ಇವರು ಸಂವಿಧಾನ ವಿರೋಧವಾಗಿ ಇದ್ದಾರೆ. ಎಲ್ಲರಿಗೂ ಶಿಕ್ಷಣ ಕೊಡೋದು ಇಷ್ಟ ಇಲ್ಲ. ಸಮ ಸಮಾಜ ನಿರ್ಮಾಣ ಆದರೆ ಶೋಷಣೆಗೆ ಅವಕಾಶ ಕಡಿಮೆ ಆಗುತ್ತದೆ. ಆರ್​ಎಸ್​​ಎಸ್​ ಅವರಿಗೆ ಸಮಾಜದ ಎಲ್ಲಾ ಕಂಟ್ರೋಲ್ ಅವರ ಕೈಯಲ್ಲಿ ಇರಬೇಕು. ಅವರು ಬಯಸಿರುವುದು ಮನುಸ್ಮೃತಿ ಆಧಾರದ ಸಂವಿಧಾನ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ನಾಪತ್ತೆ ಆಗಿದ್ದವಳ ಕಂಡು ದೇವತೆ ಅಂದುಕೊಂಡ ಜನರು!; ನೀರ ಮೇಲೆ ನಡೆದ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts