More

    Success Story | ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಲು ಅಸಾಧಾರಣ ಪ್ರತಿಭೆ ಬೇಕಂತಿಲ್ಲ!

    “ಗೊತ್ತಿಲ್ಲದಿದ್ದರೂ ತಿಳಿದುಕೊಳ್ಳುವ ಛಲ, ಬದ್ಧತೆ ಇರಬೇಕು. ದೃಢ ನಿರ್ಧಾರವೊಂದಿದ್ದರೆ ಖಂಡಿತವಾಗಿಯೂ ಯಶಸ್ಸು ಕಾಣಲಿಕ್ಕೆ ಸಾಧ್ಯ. ನಾನು ನೋಡಿರುವಂತೆ ಒಬ್ಬ ವ್ಯಕ್ತಿಯ ಬಲವಾದ ದೃಢ ನಿಶ್ಚಯ, ಪರಿಶ್ರಮ ಅವನನ್ನು ಮುಂದೆ ಬರುವಂತೆ ಮಾಡುತ್ತದೆ. ಹಾಗಾಗಿ ಕೇವಲ ಪ್ರಯತ್ನಿಸುತ್ತೇವೆ ಎನ್ನುವುದನ್ನು ಬಿಟ್ಟು, ಮಾಡಲೇಬೇಕು, ಮಾಡುತ್ತೇನೆ ಅಂದುಕೊಳ್ಳಿ ಆಗ ಖಂಡಿತ ಯಶ ನಿಮ್ಮದಾಗುತ್ತದೆ ಎಂದು ಸ್ಪಧಾರ್ಥಿಗಳಿಗೆ ಕಿವಿ ಮಾತು ಹೇಳಿರುವ ಕೆಎಎಸ್​ ಅಧಿಕಾರಿ ಎನ್​. ಸಿದ್ದೇಶ್ವರ ಇಂದಿನ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದ ಗೆಸ್ಟ್​’.

    ಅಶ್ವಿನಿ ಎಚ್​.ಆರ್​.

    ಓದಿದ್ದೆಲ್ಲಾ ಸರ್ಕಾರಿ ಶಾಲೆಯಲ್ಲಿ

    “ನಾನು ಕುಗ್ರಾಮದಿಂದ ಬಂದವನು. ಹಾವೇರಿ ಜಿಲ್ಲೆ ಬ್ಯಾಡಗಿ ಸ್ವಂತೂರು. ಚಿಕ್ಕವನಿದ್ದಾಗಿನಿಂದಲೂ ಹಾಸ್ಟೆಲ್​ನಲ್ಲಿಯೇ ಓದಿದ್ದು. ಜೀವನಾಧರಕ್ಕೆ ಬೇಕಾದ ಯಾವುದೇ ಸೌಲಭ್ಯಗಳು ಇರಲಿಲ್ಲವಾದ್ದರಿಂದ ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮುಗಿಸಿದೆ. ಪ್ರೈಮರಿ, ಹೈಸ್ಕೂಲ್​ ವ್ಯಾಸಂಗವೆಲ್ಲಾ ಶಿವಮೊಗ್ಗ ಜಿಲ್ಲೆಯಲ್ಲಿಯೇ. ಆ ನಂತರ ಟಿಸಿಎಚ್​ನಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಶಿಕ್ಷಕನ ಕೆಲಸ ಸಿಕ್ಕಿತು. ಡಿಗ್ರಿ ಮುಗಿದ ತಕ್ಷಣ ಕೆಪಿಎಸ್​ಸಿ ಮೂಲಕ ನ್ಯಾಯಾಂಗ ಇಲಾಖೆಯಲ್ಲಿಯೂ ಕೆಲಸ ಸಿಕ್ಕಿತು. ತದನಂತರ ಸಬ್​ ಇನ್ಸ್​ಪೆಕ್ಟರ್​ ಆಗಿ ಕಾರ್ಯನಿರ್ವಹಿಸಿದೆ. ಇದೇ ಸಮಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಸಿಕ್ಕರೂ ಸೇರಿಕೊಳ್ಳಲಿಲ್ಲ. 2010 ಬ್ಯಾಚ್​ನಲ್ಲಿ ಡಿವೈಎಸ್​ಪಿಯಾಗಿ ಆಯ್ಕೆಯಾದೆ. 4 ವರ್ಷ ಕೆಲಸ ಮಾಡಿದ ಮೇಲೆ ಕೆಎಎಸ್​ಗೆ ಸರ್ವೀಸ್​ ಶಿಫ್ಟ್ ಆಯಿತು. ಸದ್ಯ ಸೆಲೆಕ್ಷನ್​ ಗ್ರೇಡ್​ನಲ್ಲಿ ಇದ್ದೇನೆ. ಐಎಎಸ್​ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾದರೂ, ಸಂದರ್ಶನ ಹಂತದವರೆಗೂ ಹೋಗಿ ಬಂದೆ. ಆ ನಂತರ ಪರೀಕ್ಷೆ ಬರೆಯಬೇಕೆಬ ಇಚ್ಛೆಯಿದ್ದರೂ, ವಯಸ್ಸಿನ ಮಿತಿ ಕಾರಣದಿಂದ ಬರೆಯುವುದಕ್ಕೆ ಆಗಲಿಲ್ಲ’.

    ಇವರೆಲ್ಲಾ ಪ್ರೇರಣೆ

    “ಟಿಎಸಿಎಚ್​ ಓದುವಾಗ ನಮ್ಮ ಪ್ರಾಂಶುಪಾಲರು ಕೆಎಎಎಸ್​ನಲ್ಲಿ ಜಸ್ಟ್​ ಪಾಸ್​ ಆಗಿದ್ದರು. ಅವರನ್ನು ನೋಡಿ ನಾವು ಯಾಕೆ ಪ್ರಯತ್ನಿಸಬಾರದು ಅಂದುಕೊಂಡು ಪರೀಕ್ಷೆ ಬರೆದವು. ಜತೆಗೆ ಪೊಲೀಸ್​ ಕೆಲಸ ಮಾಡುವಾಗ ಆಗ ಶಿವಮೊಗ್ಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ತುಷಾರ್​ ಗಿರಿನಾಥ್​ ಸರ್​ ಅವರನ್ನು ನೋಡಿ ಪ್ರೇರಣೆಯಾಯಿತು. ಇಲ್ಲ ಅಂದ್ರೆ ಕೊನೆಯವರೆಗೂ ಪ್ರೈಮರಿ ಶಿಕ್ಷನಾಗಿಯೇ ಉಳಿಯಬೇಕಾಗಿತ್ತು. ಹಾಗೆಯೇ ಪ್ರಯತ್ನ, ಪರಿಶ್ರಮ, ಬದ್ಧತೆ, ವಿಲ್​ ಪವರ್​ ಇದ್ದಿದ್ದರಿಂದ ಪರೀಕ್ಷೆ ಬರೆಯಲು ಸಹಾಯಕವಾಯಿತು’.

    ಇದನ್ನೂ ಓದಿ: Success Story: ಕಾರ್ಪೊರೇಟ್​ ಕೆಲಸ ಬಿಟ್ಟು ಐಎಎಸ್ ಅಧಿಕಾರಿಯಾದ ಸಾಧಕ!

    ಪಠ್ಯಕ್ರಮ ಏನಿದೆ ತಿಳಿದುಕೊಳ್ಳಿ

    “ಯಾವಾಗಲೂ ಪರೀಕ್ಷೆ ಬರೆಯುವಾಗ ಅಲ್ಲಿ ಪಠ್ಯಕ್ರಮ ಏನಿದೆ ಎನ್ನುವುದನ್ನು ವಿಮರ್ಶೆ ಮಾಡಬೇಕು. ಅದರ ಮಾಹಿತಿ ನಮಗೆ ಯಾವ ಪುಸ್ತಕಗಳಿಂದ ಸಿಗುತ್ತದೆ ಎಂಬುದನ್ನು ಗಮನಿಸಿ, ಸಂಗ್ರಹ ಮಾಡಬೇಕು. ಯಾವುದು ಓದಬೇಕು ಎನ್ನುವುದು ಎಷ್ಟು ಮುಖ್ಯನೋ, ಯಾವುದು ಓದಬಾರದು ಅನ್ನುವುದು ಅಷ್ಟೇ ಮುಖ್ಯ. ಪಠ್ಯಕ್ರಮದಲ್ಲಿ ಏನಿದೆ ಎಂಬುದು ಗೊತ್ತಿಲ್ಲದೆ ಓದುತ್ತಾ ಹೋದರೆ ಸಮಯ, ಎನರ್ಜಿ ಎಲ್ಲವೂ ವ್ಯರ್ಥ. ಪಾಯಿಂಟೆಡ್​ ಫೋಕಸ್​ ಸ್ಟಡಿ ಮಾಡಬೇಕು. ಆಗ ಯಶಸ್ಸು ಸಿಗಲು ಸಾಧ್ಯ. ಹಾಗೆಯೇ ಆಗಲೇ ಯಶಸ್ವಿಯಾಗಿರುವವರ ತಪ್ಪು ಸರಿಯನ್ನು ನೋಡಿ ನಾವು ಕೂಡ ಬಹಳ ಬೇಗ ಕಲಿಯಲು ಅನುಕೂಲವಾಗುತ್ತದೆ’.

    ಇದನ್ನೂ ಓದಿ: Success Story | ಮೊದಲ ಪ್ರಯತ್ನದಲ್ಲೇ ಯಶಸ್ಸು; ತಂದೆಯ ಕೆಲಸದ ಸ್ಫೂರ್ತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ರು ಈ ಅಧಿಕಾರಿ…

    ಸ್ಪಧಾರ್ಥಿಗಳ ಸಿದ್ಧತೆ ಹೇಗಿರಬೇಕು?

    “ಮೈಂಡ್​ ಮೊದಲು ಸ್ಟ್ರಾಂಗ್​ ಇಟ್ಟುಕೊಂಡಿರಬೇಕು. ಎಷ್ಟೋ ಬಾರಿ ನನ್ನ ಸ್ನೇಹಿತರೇ 7 ನೇ ಪ್ರಯತ್ನಕ್ಕೆ ಯಶಸ್ವಿಯಾಗಿದ್ದಾರೆ. ಛಲ, ಕಠಿಣ ಪರಿಶ್ರಮ, ಬದ್ಧತೆ ಬೇಕಾಗುತ್ತದೆ. ಕೆಲವರು ಒಂದು ಸಾರಿ ಪ್ರಯತ್ನ ಮಾಡಿ, ಆಗಲ್ಲ ಅಂತಾದಾಗ ಕೈ ಚೆಲ್ಲಿ ಕೂರುತ್ತಾರೆ. ಪ್ರಯತ್ನ ಮಾಡೋಣ ಅಂತ ಕೆಲವರು ಮಾಡ್ತಾರೆ, ಆದರೆ ಪ್ರಯತ್ನಿಸುವುದನ್ನು ಬಿಡಿ. ಸ್ಟ್ರಾಂಗ್​ ಪವರ್​ ಇದ್ದವರಷ್ಟೇ ಅದನ್ನು ಮಾಡಲಿಕ್ಕೆ ಸಾಧ್ಯ. ಹಾಗೆಯೇ ಪರೀಕ್ಷೆ ಪಾಸಾಗಲು ಅಸಾಧರಣ ಬುದ್ಧಿವಂತಿಕೆ ಏನೂ ಬೇಕಿಲ್ಲ. ಹಾರ್ಡ್​ ವರ್ಕ್​ ಮಾಡಬೇಕು. ಪರೀಕ್ಷೆ ತಕ್ಕಂತೆ ಪರಿಶ್ರಮ, ಸಿದ್ಧತೆ ನಡೆಸಲೇಬೇಕು. ಕೋಚಿಂಗ್​ ಹೋದ ಮಾತ್ರ ಆಯ್ಕೆಯಾಗುತ್ತೇವೆ ಎನ್ನುವುದು ಭ್ರಮೆ. ತುಂಬಾ ಜಾಣತನದಿಂದ ಸಂಸ್ಥೆ ಆಯ್ಕೆ ಮಾಡಬೇಕು. ಆಗ ಅವರು ನಮಗೆ ಗೈಡ್​ ಮಾಡಬಹುದು. ಇದನ್ನು, ಇಷ್ಟು ಓದಿದರೆ ಸಾಕು ಎಂದು ಸಲಹೆ ನೀಡಬಹುದು. ಸ್ಪೂನ್​ ಫೀಡ್​ ಮಾಡಿದಾಗ ಎನರ್ಜಿ, ಟೈಂ ಸ್ವಲ್ಪ ಉಳಿತಾಯವಾಗುತ್ತದೆ. ಆ ರೀತಿ ಕೋಚಿಂಗ್​ ಕ್ಲಾಸ್​ಗಳು ಸ್ವಲ್ಪ ಸಹಾಯವಾಗುತ್ತವೆ’.

    ಇದನ್ನೂ ಓದಿ: Success Story: ಐಎಎಸ್​ ಆಗದಿದ್ದರೆ ಟೆಕ್ಸ್​ಟೈಲ್​ ಉದ್ಯಮ ಮಾಡಲು ನಿರ್ಧರಿಸಿದ್ದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts