More

    ಕಾರ್ಯಕರ್ತನ ಹತ್ಯೆ ಖಂಡಿಸಿ 12 ಗಂಟೆ ಬಂದ್​ಗೆ ಕರೆ ನೀಡಿದ ಬಿಜೆಪಿ

    ಹೌರಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ಮುಂದುವರಿದಿದ್ದು, ಹೌರಾ ಜಿಲ್ಲೆಯಲ್ಲಿ ಮತ್ತೆ ಒಬ್ಬನ ಹತ್ಯೆ ನಡೆದ ಕಾರಣ ಪಕ್ಷ ಬಗ್​ನಾನ್​ ವಿಧಾನಸಭಾ ಕ್ಷೇತ್ರದಲ್ಲಿ ಇಂದು 12 ಗಂಟೆ ಬಂದ್​​ಗೆ ಕರೆ ನೀಡಿದೆ. ಬುಧವಾರ ಹೌರಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು.

    ಬಗ್​ನಾನ್ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತ ಕಿನ್​ಕರ್​ ಮಜ್ಹಿ ಎಂಬಾತನ ಹತ್ಯೆ ಆಗಿದ್ದು, ಇದನ್ನು ಟಿಎಂಸಿ ಕಾರ್ಯಕರ್ತರು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಬಿಜೆಪಿಯ ಆರೋಪವನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತಳ್ಳಿ ಹಾಕಿದೆ. ಬಿಜೆಪಿ ಕಾರ್ಯಕರ್ತರು ರಾಜ್ಯದಾದ್ಯಂತ ರಾಜಕೀಯ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.ಹೀಗಾಗಿ ಶವದ ಮೇಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಬಗ್​ನಾನ್ ಶಾಸಕ ಟಿಎಂಸಿಯ ಅರುಣವ್ ಸೇನ್​ ಟೀಕಿಸಿದ್ದಾರೆ.

    ಇದನ್ನೂ ಓದಿ:  ಅಮೆರಿಕ ಅಧ್ಯಕ್ಷೀಯ ಚುನಾವಣೆ ಹೇಗೆ, ಎತ್ತ…?

    ಬಿಜೆಪಿ ಮೂಲಗಳ ಪ್ರಕಾರ, ಮಜ್ಹಿ ಹೂವಿನ ವ್ಯಾಪಾರಿಯಾಗಿದ್ದು, ಪಕ್ಷದ ಪ್ರಮುಖ ಕಾರ್ಯಕರ್ತರಾಗಿದ್ದರು. ಆ ಪ್ರದೇಶದಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚುತ್ತಿರುವುದನ್ನು ಸಹಿಸದೇ ಟಿಎಂಸಿಯ ಗೂಂಡಾಗಳು ಅವರನ್ನು ಹತ್ಯೆ ಮಾಡಿದ್ದಾರೆ. ಪೊಲೀಸ್​ ಮೂಲಗಳ ಪ್ರಕಾರ, ಮಜ್ಹಿ ಅವರನ್ನು ಮನೆಯ ಸಮೀಪವೇ ಅಕ್ಟೋಬರ್ 24ರಂದು ಹತ್ಯೆ ಮಾಡಲಾಗಿದೆ. ಅದು ಜಮೀನು ವಿವಾದಕ್ಕೆ ಸಂಬಂಧಿಸಿದ ಹತ್ಯೆ ಆಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.(ಏಜೆನ್ಸೀಸ್)

    ‘ಅಭಿನಂದನ್​ ರಿಲೀಸ್ ಮಾಡದಿದ್ರೆ ಭಾರತ ದಾಳಿ ಮಾಡುತ್ತೆ ಅಂತ ನಡುಗ್ತಾ ಬೇಡಿಕೊಂಡಿದ್ರು ಬೆಜ್ವಾ, ಖುರೇಶಿ’ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts