More

    ದೇಶದ ಅತಿದೊಡ್ಡ ಗನ್​ ಲೈಸೆನ್ಸ್​ ಹಗರಣ ಬೆಳಕಿಗೆ! ಭರದಿಂದ ಸಾಗಿದೆ, ಸಿಬಿಐ ಕಾರ್ಯಾಚರಣೆ!

    ಶ್ರೀನಗರ : ದೇಶದ ಅತಿದೊಡ್ಡ ಶಸ್ತ್ರಾಸ್ತ್ರ ಪರವಾನಗಿ ಹಗರಣವನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬೆಳಕಿಗೆ ತಂದಿದೆ. ಜಮ್ಮು ಮತ್ತು ಕಾಶ್ಮೀರದ ಹಲವು ಜಿಲ್ಲಾ ಮ್ಯಾಜಿಸ್ಟ್ರೇಟ್​(ಡಿಎಂ)ಗಳು ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ಅಕ್ರಮ ಗನ್​ ಲೈಸೆನ್ಸ್​ಗಳನ್ನು ನೀಡಿದ್ದಾರೆ. ಈ ರೀತಿಯಾಗಿ ದೇಶದ ವಿವಿಧ ಭಾಗಗಳ ಜನರಿಗೆ ಇಲ್ಲಿ ಗನ್​ ಲೈಸೆನ್ಸ್​ಗಳನ್ನು ನೀಡಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಸಿಬಿಐ ನೀಡಿದೆ.

    ಶಸ್ತ್ರಾಸ್ತ್ರಗಳ ಡೀಲರ್​ಗಳೊಂದಿಗೆ ಕೈಜೋಡಿಸಿದ್ದ ರಾಜ್ಯದ ಹಲವು ಡಿಎಂಗಳು ಹಣಕ್ಕಾಗಿ 2 ಲಕ್ಷಕ್ಕೂ ಹೆಚ್ಚು ಕಾನೂನುಬಾಹಿರವಾದ ಗನ್​ ಲೈಸೆನ್ಸ್​ಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಶನಿವಾರದಂದು, ಈ ತನಿಖೆಯ ಅಂಗವಾಗಿ, ಸಿಬಿಐ ಅಧಿಕಾರಿಗಳ ತಂಡವು 20 ಗನ್​ ಹೌಸ್​ಗಳೂ ಸೇರಿದಂತೆ 40 ಸ್ಥಳಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಮತ್ತು ದೆಹಲಿಯಲ್ಲಿ ಶೋಧ ಕಾರ್ಯ ನಡೆಸಿತು. ಎಂಟು ಜನ ಮಾಜಿ ಡಿಎಂಗಳನ್ನು ವಿಚಾರಣೆಗೆ ಒಡ್ಡಲಾಗಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

    ಇದನ್ನೂ ಓದಿ: ಜಮ್ಮು-ಕಾಶ್ಮೀರದ ಶಾಲೆಗಳಿಗೆ ತ್ರಿವರ್ಣ ಫಲಕಗಳು

    ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮುಂಚಿನ ಅವಧಿಯ, 2012ನೇ ಸಾಲಿನಷ್ಟು ಹಿಂದಿನ ಗನ್ ಲೈಸೆನ್ಸ್​ಗಳ ಬಗ್ಗೆ ಸಿಬಿಐ ತನಿಖೆ ಕೈಗೊಂಡಿದೆ. ಈ ಹಗರಣದ ವಿವಿಧ ಮಜಲುಗಳನ್ನೂ, ಯಾವ್ಯಾವ ಅಧಿಕಾರಿಗಳು ಈ ಅಕ್ರಮದಲ್ಲಿ ತೊಡಗಿದ್ದರು ಎಂಬುದನ್ನೂ ಸಿಬಿಐ ಆಳವಾಗಿ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.

    ಆರ್ಮ್ಸ್​​ ಲೈಸೆನ್ಸ್​ ರಾಕೆಟ್​ ನಡೆಯುತ್ತಿದೆ ಎಂಬ ವಿಚಾರವನ್ನು ರಾಜಸ್ತಾನ ಪೊಲೀಸರ ಆ್ಯಂಟಿ ಟೆರರಿಸಂ ಸ್ಕ್ವಾಡ್ 2017 ರಲ್ಲಿ ಮೊದಲ ಬಾರಿಗೆ ಬೆಳಕಿಗೆ ತಂದಿತ್ತು. ಆಗ ರಾಜಸ್ತಾನದ ಕೆಲವು ಕ್ರಿಮಿನಲ್​ಗಳು ಜಮ್ಮುಕಾಶ್ಮೀರದ ಗನ್​ ಲೈಸೆನ್ಸ್​ಗಳನ್ನು ಹೊಂದಿರುವುದು ಪತ್ತೆಯಾಗಿತ್ತು. ಜಮ್ಮು-ಕಾಶ್ಮೀರದಲ್ಲಿ 2018 ರಲ್ಲಿ ರಾಜ್ಯಪಾಲರ ಆಡಳಿತ ವಿಧಿಸಲಾದ ನಂತರ ಆಗಿನ ರಾಜ್ಯಪಾಲರಾಗಿದ್ದ ಎನ್​.ಎನ್.ವೋಹ್ರ ಅವರು ಈ ಬಗೆಗಿನ ತನಿಖೆಯನ್ನು ಸಿಬಿಐಗೆ ವಹಿಸಿದ್ದರು. (ಏಜೆನ್ಸೀಸ್)

    ಅಪರಾಧ ತಡೆಯಲು ಹೊಯ್ಸಳಕ್ಕೆ ಹೊಸ ಹುರುಪು! ದಕ್ಷತೆ ಹೆಚ್ಚಿಸಲು ತಯಾರಿ

    ಬೆನ್ನು ಮೂಳೆಯ ಆರೋಗ್ಯಕ್ಕೆ ಬಹು ಉಪಕಾರಿ ಈ ಆಸನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts