More

    ಜಮ್ಮು-ಕಾಶ್ಮೀರದ ಶಾಲೆಗಳಿಗೆ ತ್ರಿವರ್ಣ ಫಲಕಗಳು

    ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ತ್ರಿವರ್ಣ ಧ್ವಜದ ಹಿನ್ನೆಲೆಯುಳ್ಳ ನಾಮಫಲಕಗಳನ್ನು ಅಳವಡಿಸಬೇಕೆಂದು ಆದೇಶ ಹೊರಡಿಸಲಾಗಿದೆ. ಪಾಕಿಸ್ತಾನದ ಒತ್ತುವರಿ ಪ್ರಯತ್ನಗಳನ್ನೆದುರಿಸುತ್ತಾ ವಿಶೇಷ ಸ್ಥಾನಮಾನದ ಇತಿಹಾಸ ಹೊಂದಿರುವ ಈ ಪ್ರದೇಶಕ್ಕೆ ಭಾರತೀಯತೆಯನ್ನು ತುಂಬುವ ಮತ್ತೊಂದು ಪ್ರಯತ್ನ ಇದಾಗಿದೆ ಎನ್ನಲಾಗಿದೆ.

    ರಾಷ್ಟ್ರಧ್ವಜದ ಹಿನ್ನೆಲೆಯನ್ನು ಹೊಂದಿದ ಫಲಕಗಳನ್ನು ಶಾಲೆಯ ಆವರಣದಲ್ಲಿ ಸ್ಥಾಪಿಸಿ, ಅದರಲ್ಲಿ ಶಾಲೆಯ ಎಲ್ಲಾ ವಿವರಗಳನ್ನು ಬರೆಸಬೇಕು. ಜೊತೆಗೆ ಎಲ್ಲಾ ಶಾಲೆಗಳ ಕಟ್ಟಡಗಳಿಗೆ ಕಂದು ಮತ್ತು ಬಿಳಿ ಬಣ್ಣದ ಕಲರ್ ಸ್ಕೀಮ್​ಅನ್ನು ಪಾಲಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಶಿಕ್ಷಣ ಇಲಾಖೆ ಆದೇಶ ಜಾರಿ ಮಾಡಿದೆ. ಏಪ್ರಿಲ್ 30 ರೊಳಗೆ ಈ ಕೆಲಸವನ್ನು ಪೂರೈಸಬೇಕಿದ್ದು, ಪ್ರಗತಿ ಪರಿಶೀಲನೆಗಾಗಿ ವಾರಕ್ಕೊಂದು ವರದಿ ಸಲ್ಲಿಸಬೇಕು ಎಂದು ಶಾಲಾ ಮುಖ್ಯಸ್ಥರಿಗೆ ಇಲಾಖೆ ಪತ್ರ ಬರೆದಿದೆ. ಈ ಕೆಲಸದ ಉಸ್ತುವಾರಿ ನಡೆಸಲು ನೋಡಲ್ ಅಧಿಕಾರಿಯೊಬ್ಬರನ್ನು ಕೂಡ ನೇಮಕ ಮಾಡಲಾಗಿದೆ.

    ಇದನ್ನೂ ಓದಿ: ಸಿಡಿಯಲ್ಲಿರುವ ಹುಡುಗಿಗೆ ಈಗಾಗಲೇ ರಕ್ಷಣೆ ಸಿಕ್ಕಿದೆ: ಯಾರಿಂದ ಎಂಬುದನ್ನು ಎಚ್​ಡಿಕೆ ಹೇಳಿದ್ರು ನೋಡಿ..

    ಆಗಸ್ಟ್ 2019 ರಲ್ಲಿ ಸಂವಿಧಾನದ ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವವರೆಗೂ, ಭಾರತದ ಧ್ವಜದೊಂದಿಗೆ ತನ್ನದೇ ಆದ ಕೆಂಪು ಧ್ವಜವನ್ನು ಈ ಪ್ರದೇಶ ಹೊಂದಿತ್ತು. 1956 ರಲ್ಲಿ ಮುಂಚೆ ಇದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರವು ತನ್ನದೇ ಪ್ರತ್ಯೇಕ ಸಂವಿಧಾನವನ್ನು ಅಂಗೀಕರಿಸಿ, ತನ್ನದೇ ಧ್ವಜವನ್ನು ಹಾರಿಸಲು ಅನುಮೋದನೆ ಪಡೆದಿತ್ತು. ಆದರೆ ವಿಶೇಷ ಸ್ಥಾನ ರದ್ದಾದ ಹಿನ್ನೆಲೆಯಲ್ಲಿ ಈ ಪ್ರತ್ಯೇಕ ಧ್ವಜವನ್ನು ಶ್ರೀನಗರ ಮತ್ತು ಜಮ್ಮುವಿನ ಸರ್ಕಾರಿ ಕಛೇರಿಗಳಿಂದ ತೆಗೆದುಹಾಕಲಾಯಿತು.

    ಈ ವರ್ಷದ ಆರಂಭದಲ್ಲಿ, ಗಣರಾಜ್ಯೋತ್ಸವದಂದು ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿನ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಭಾರತದ ರಾಷ್ಟ್ರಧ್ವಜವಾದ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂದು ಆಡಳಿತವು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಇದೀಗ ಶಾಲೆಗಳಲ್ಲಿ ತ್ರಿವರ್ಣ ಧ್ವಜಕ್ಕೆ ಸ್ಥಾನ ದೊರಕಿಸುವ ಪ್ರಯತ್ನ ನಡೆದಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹೇಗ್ಹೇಗೋ ಮುಟ್ಟುತ್ತಾ ‘ಪರೀಕ್ಷೆ’ ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್ ಮುಖ್ಯಸ್ಥನ ಬಂಧನ

    “ಆ ರಹೀ ಹೇ ಪೊಲೀಸ್… !” ಭರ್ಜರಿ ಆ್ಯಕ್ಷನ್ ಚಿತ್ರಕ್ಕೆ ತಯಾರಾಗಿ !

    ಸೇನಾ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ : ಸಿಬಿಐ ತನಿಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts