ಕರೊನಾ ಲಸಿಕೆ ಸಂಶೋಧಿಸಿರುವ ಭಾರತ್​ ಬಯೋಟೆಕ್​ ಜೈಕಾಗೂ ಔಷಧ ಆವಿಷ್ಕರಿಸಿತ್ತು

Bharath biotech
Published on

ನವದೆಹಲಿ: ಜಗತ್ತನ್ನೇ ಕಾಡುತ್ತಿರುವ ಮಾರಕ ಕರೊನಾ ವೈರಸ್​ ನಿಗ್ರಹಕ್ಕೆ ಲಸಿಕೆ ಸಂಶೋಧನೆಯಲ್ಲಿ ತೊಡಗಿ ಕ್ಲಿನಿಕಲ್​ ಟ್ರಯಲ್​ ಹಂತಕ್ಕೆ ಕೊಂಡೊಯ್ದಿರುವ ಹೈದರಾಬಾದ್​ನ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಕಂಪನಿ ಔಷಧ ರಂಗದಲ್ಲಿ ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ.

ಮುತ್ತಿನ ನಗರಿಯ ಜೆನೊಮ್​ ವ್ಯಾಲಿಯಲ್ಲಿ 1996ರಲ್ಲಿ ಆರಂಭವಾದ ಸಂಸ್ಥೆಯ ಸ್ಥಾಪಕರು ಡಾ. ಕೃಷ್ಣಾ ಎಂ. ಎಲ್ಲ ಹಾಗೂ ಸುಚಿತ್ರ ಎಲ್ಲ ದಂಪತಿ. ಅಮೆರಿಕದಲ್ಲಿ ಇದೇ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಬೋಧಕ ಹುದ್ದೆಯಲ್ಲಿದ್ದರು. ಕಂಪನಿ ಸ್ಥಾಪಿಸಬೇಕೆಂಬ ಉದ್ದೇಶದಿಂದಲೇ ಭಾರತಕ್ಕೆ ಮರಳಿದರು.

ಪರಿಣತರ ತಂಡ ಕಟ್ಟಿಕೊಂಡು ಔಷಧ ಉತ್ಪಾದನೆಯಲ್ಲಿ ತೊಡಗಿದರು. ಭಾರತದ ಪ್ರಮುಖ ಬಯೋಟೆಕ್ನಾಲಜಿ ಕಂಪನಿಗಳಲ್ಲಿ ಒಂದೆನಿಸಿದೆ. ಪ್ರಸ್ತುತ ಈ ಕಂಪನಿ 160ಕ್ಕೂ ಅಧಿಕ ಪೇಟೆಂಟ್​​ಗಳಿವೆ. ರೋಟಾವೈರಸ್​, ಎಚ್​1ಎನ್​1, ಟೈಫಾಯ್ಡ್​, ಜಪಾನ್​ ಎನ್ಸೆಫೆಲಿಟಿಸ್​ ಮೊದಲಾದ ಕಾಯಿಲೆಗಳಿಗೆ ಯಶಸ್ವಿಯಾಗಿ ಲಸಿಕೆ ಸಂಶೋಧಿಸಿದ ಕೀರ್ತಿ ಭಾರತ್​ ಬಯೋಟೆಕ್​ನದ್ದಾಗಿದೆ.

ಇನ್ನು, ಜೈಕಾ ವೈರಸ್​ಗೆ ನಿಗ್ರಹಕ್ಕೆ ತಯಾರಿಸಿದ ಲಸಿಕೆಗೆ ಜಾಗತಿಕ ಪೇಟೆಂಟ್​ ಪಡೆದ ಹೆಗ್ಗಳಿಕೆ ಇದರದ್ದಾಗಿದೆ. ಇದರ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯೂ ಲಭಿಸಿದೆ.

ಇದೀಗ, ಕರೊನಾ ಲಸಿಕೆ ಸಂಶೋಧಿಸಿದ್ದು, ಕ್ಲಿನಿಕಲ್​ ಟ್ರಯಲ್​ ಹಂತಕ್ಕೆ ತಲುಪಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೆಚ್ಚಿನ ಆಸಕ್ತಿ ವಹಿಸಿ ಕ್ಲಿನಿಕಲ್​ ಟ್ರಯಲ್​ ತ್ವರಿತವಾಗಿ ಪೂರ್ಣಗೊಳಿಸುವಲ್ಲಿ ಆಸ್ಥೆ ವಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net