More

    ‘ಭಾಗ್ಯವಂತರು’ ಚಿತ್ರಕ್ಕೆ ಆಧುನಿಕ ಟಚ್; ಮರು ಬಿಡುಗಡೆಯಾಗಲಿದೆ ಡಾ. ರಾಜ್ ಸಿನಿಮಾ

    ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಚಂದನವನದ ಹಳೆಯ ಹಿಟ್ ಸಿನಿಮಾಗಳಿಗೆ ಆಧುನಿಕತೆಯ ಟಚ್​ ಕೊಟ್ಟು ಮತ್ತೆ ತೆರೆಗೆ ತರುವ ಕೆಲಸ ನಡೆಯುತ್ತಿದೆ. ಈಗಾಗಲೇ ಅಂತಹ ಹಲವು ಪ್ರಯೋಗಗಳು ಕನ್ನಡದಲ್ಲಿ ಆಗಿವೆ. ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆ ಡಾ. ರಾಜಕುಮಾರ್ ಮತ್ತು ಸರೋಜಾದೇವಿ ನಟನೆಯ ‘ಭಾಗ್ಯವಂತರು‘ ಸಿನಿಮಾ.

    ಇದನ್ನೂ ಓದಿ: ‘ನೀವು ಯಾವತ್ತಿದ್ದರೂ ನನಗೆ ಸ್ಫೂರ್ತಿಯ ಚಿಲುಮೆ’; ದೀಪಿಕಾ ಬರ್ತ್​​ಡೇಗೆ ಆಲಿಯಾ ಕಡೆಯಿಂದ ವಿಶೇಷ ವಿಷ್

    ಈಗಾಗಲೇ ಡಾ. ರಾಜಕುಮಾರ್ ಅವರ ಕಸ್ತೂರಿ ನಿವಾಸ ಸಿನಿಮಾ ಆಧುನಿಕ ಸ್ಪರ್ಶ ಪಡೆದು ಮರು ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ ಒಳ್ಳೆಯ ಕಲೆಕ್ಷನ್​ ಸಹ ಮಾಡಿತ್ತು. 2018ರಲ್ಲಿ ಡಾ. ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾ ಮರು ಬಿಡುಗಡೆ ಆಗಿ ಸದ್ದು ಮಾಡಿತ್ತು. ಇದೀಗ ಭಾಗ್ಯವಂತರು ಸರದಿ.

    ಇದನ್ನೂ ಓದಿ: ಧೂಮ್​ 4ರಲ್ಲಿ ಶಾರುಖ್​ ಖಾನ್​ ಜತೆ ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರಾ ದೀಪಿಕಾ!

    ಸಿನಿಮಾ ಸ್ಕೋಪ್ 7.1 ಡಿ ತಂತ್ರಜ್ಞಾನ‌ ಬಳಸಿಕೊಂಡು ಕಲರಿಂಗ್ ಕೆಲಸ ಪ್ರಗತಿಯಲ್ಲಿದ್ದು, ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯದ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಮರು ಬಿಡುಗಡೆ ಆಗಲಿದೆ. ಈ ಹಿಂದೆ ಆಪರೇಷನ್ ಡೈಮಂಡ್ ರಾಕೆಟ್, ನಾನೊಬ್ಬ ಕಳ್ಳ, ರಾಜ‌ ನನ್ನ ರಾಜ, ದಾರಿ ತಪ್ಪಿದ ಮಗ ಮುಂತಾದ ಚಿತ್ರಗಳ ವಿತರಣೆ ‌ಮಾಡಿದ್ದ ಮುನಿರಾಜು ತಮ್ಮ ಮುನೇಶ್ವರ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

    ಅಂದಹಾಗೆ ಈ ಚಿತ್ರವನ್ನು 1976ರಲ್ಲಿ ದ್ವಾರಕೀಶ್ ಅವರು‌ ನಿರ್ಮಾಣ ಮಾಡಿದ್ದರು. ಭಾರ್ಗವ ಅವರು ನಿರ್ದೇಶಿಸಿದ್ದ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.

    ಪುತ್ರಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಿದ ನಟ ರಮೇಶ್ ಅರವಿಂದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts