ಜಗ್ಗೇಶ್ ಟಾಂಗ್ ಕೊಟ್ಟಿದ್ದು ಯಾರಿಗೆ?

ಲಾಕ್‌ಡೌನ್ ಮುಗಿಯುತ್ತಿದ್ದಂತೆಯೇ ಜಗ್ಗೇಶ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಅವರು ಸಖತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಹೊಸ ಫೋಟೋವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಷ್ಟಕ್ಕೂ ಯಾಕೆ ಈ ಲುಕ್ ಎಂಬ ಪ್ರಶ್ನೆ ಬರಬಹುದು. ಯಾವುದಾದರೂ ಹೊಸ ಚಿತ್ರಕ್ಕೆ ಜಗ್ಗೇಶ್ ಈ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಹಾಗೇನಿಲ್ಲ. ‘ಹಾಗೇ ಸುಮ್ಮನೆ ಓಲ್ಡ್ ಸ್ಟೈಲ್ ದರ್ಶನ. 1980, ಶ್ರೀರಾಮಪುರದ 7ನೇ ಮೇನ್‌ನ ಈಶನ ಪರಿಚಯ ತಮಾಷೆಗೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ

ಅಷ್ಟೇ ಅಲ್ಲ, ಈ ಫೋಟೋ ಹಾಕುವುದರ ಜತೆಜತೆಗೆ, ಅವರು ಬಿಲ್ಡಪ್ ಬಗ್ಗೆಯೂ ಮಾತನಾಡಿದ್ದಾರೆ. ಈ ವಿಷಯವಾಗಿ ಅವರು ಯಾರ ಹೆಸರ ಪ್ರಸ್ತಾಪ ಮಾಡದಿದ್ದರೂ, ಈಗಿನವರು ಹೇಗೆ ಬಿಲ್ಡಪ್ ಕೊಡುತ್ತಾರೆ ಎಂದು ತಮ್ಮ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

‘ಎಂಥಾ ಕಾಲಘಟ್ಟ ಇದು. ರಾಜ್, ವಿಷ್ಣು, ಅಂಬರೀಷ್, ಪ್ರಭಾಕರ್, ಶಂಕರ್ ಜಮಾನ ಕಂಡವರು ನಾವು. ಇಂದು ಜಾಲತಾಣ ಕುಬೇರನ ಬಿಲ್ಡಪ್‌ಗಳಿಗೆ ಜೈ ಅನ್ನಬೇಕಂತೆ! ಅಂದರೆ ಗ್ರೇಟ್, ಇಲ್ಲಾ ಎಂದರೆ ಚಿತ್ರಾನ್ನವಂತೆ. ಕರ್ಮವೇ, ಇದನ್ನು ಮೀರಿ ಬೆಳೆದ ಸಂತತಿ ನಾವು. ಇಂದು ಹುಟ್ಟು-ಸಾವು ಬರೀ ಜಾಲತಾಣದಲ್ಲೇ ನಿರ್ಧಾರ ಮಾಡದಿರಿ. ಅದನ್ನು ಮೀರಿ ಬೆಳೆದ ಸಂತತಿ ನಾವು. ನಾವು ನೋ ಬಿಲ್ಡಪ್’ ಎಂದು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ ಜಗ್ಗೇಶ್.

ಇದನ್ನೂ ಓದಿ: ಮಾನ್ವಿತಾ-ಆಶಿಕಾಗೆ ಹ್ಯಾಕರ್ಸ್ ಕಾಟ; ನಮ್ ಹುಷಾರಲ್ಲಿ ನಾವು ಇರಬೇಕಷ್ಟೇ..

ಅಷ್ಟೇ ಅಲ್ಲ, ಇನ್ನೂ ಸ್ವಲ್ಪ ಮುಂದುವರೆದು, ‘ಎಂಥಾ ಬಿಲ್ಡಪ್ ಕಾಲವಿದು. ಗನ್‌ಮನ್, ಬೌನ್ಸರ್ಸ್‌ ಇದ್ದವನ ಒಪ್ಪಿ ಯುಗೆಯುಗೆ ಅಂತೆ. ಎಲ್ಲಾ ಇದ್ದು ಸಾಮಾನ್ಯನಂತೆ ಬದುಕುವವ, ಎಲ್ಲೂ ಸಲ್ಲದ ಸಾಮಾನ್ಯನಂತೆ. ಯಾಕೆ? ವಾಕರಿಗೆ ಬರುತ್ತಿದೆ. ಇತ್ತೀಚಿನ ನಡವಳಿಕೆ ಕಂಡು. ತುಂಬಿದ ಕೊಡು ತುಳುಕೋಲ್ಲ.ಅರ್ಧ ತುಂಬಿದ ಕೊಡವೇ ಶಬ್ಧ ಜಾಸ್ತಿ. ಬಿಲ್ಡಪ್‌ಗೆ ಅಳಿಯದಿರಿ ಸಾಧನೆ. ಎಲ್ಲಾ ಬಿಲ್ಡಪ್ ಕೊಟ್ಟು ಬೋರ್ ಆಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇಷ್ಟಕ್ಕೂ ಜಗ್ಗೇಶ್ ಟಾಂಗ್ ಕೊಟ್ಟಿದ್ದು ಯಾರಿಗೆ? ಈ ಪ್ರಶ್ನೆಗೆ ಅವರೇ ಉತ್ತರಿಸಬೇಕು.

ದೀಪಿಕಾ ಹೇಳಿಕೊಂಡ ತಮ್ಮ ರಿಯಲ್ ಲೈಫ್​ ಲವ್ ಸ್ಟೋರಿ …

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ