More

    ಈ ರೀತಿಯ ಕರೆ, ಮೆಸೇಜ್​ಗಳು ನಿಮಗೂ ಬರಬಹುದು ಎಚ್ಚರ! UPI ವಂಚಕರ ಬಗ್ಗೆ ನಿಮಗೆ ತಿಳಿದಿರಲಿ…

    ತಿರುವನಂತಪುರಂ: ಗೂಗಲ್​ ಪೇ ಮತ್ತು ಫೋನ್​ ಪೇನಂತಹ ಯುಪಿಐ (ಯೂನಿಫೈಡ್​​ ಪೇಮೆಂಟ್​ ಇಂಟರ್​ಫೇಸ್​) ವೇದಿಕೆ ಮೂಲಕ ಜನರಿಗೆ ವಂಚನೆ ಮಾಡಲು ಕ್ರಿಮಿನಲ್​ಗಳು ಹೊಸ ಹೊಸ ತಂತ್ರವನ್ನು ರೂಪಿಸುತ್ತಿರುವುದು ಪೊಲೀಸ್​ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.

    ಇತ್ತೀಚೆಗಷ್ಟೇ ಮಹಾರಾಷ್ಟ್ರ ಮೂಲದ ಯುವತಿಯೊಬ್ಬಳು ಇನ್ನೇನು ವಂಚಕರ ಬಲೆಗೆ ಬೀಳುವಷ್ಟರಲ್ಲಿ ಬಚಾವ್​ ಆಗಿದ್ದಳು. ಎಲ್​ಐಸಿ ಹೆಸರಲ್ಲಿ ವಂಚಿಸುವ ಪ್ರಯತ್ನ ನಡೆದಿತ್ತು. ಯುವತಿಯ ತಂದೆಯಿಂದ ಫೋನ್​ ನಂಬರ್​ ಪಡೆದು ಆಕೆಗೆ ಕರೆ ಮಾಡಿದ್ದ ವಂಚಕನೊಬ್ಬ ಮಗು ಎಂದು ಮಾತು ಆರಂಭಿಸಿ, ನಿಮ್ಮ ತಂದೆಯ ಖಾತೆಗೆ 25 ಸಾವಿರ ರೂ. ಎಲ್​ಐಸಿ ಹಣ ಕಳುಹಿಸಬೇಕಿದೆ. ಆದರೆ, ನಿಮ್ಮ ತಂದೆ ಬಳಿ ಯುಪಿಐ ಖಾತೆ ಇಲ್ಲದ ಕಾರಣ ನಿಮ್ಮ ಯುಪಿಐ ನಂಬರ್​ಗೆ ಹಣ ಪಾವತಿಸುತ್ತೇನೆ ಎಂದು ಹೇಳಿದ್ದಾನೆ. ಆರಂಭದಲ್ಲಿ ಆತನ ಮಾತು ನಂಬಿದ ಯುವತಿ ತನ್ನ ಗೂಗಲ್​ ಪೇ ಮಾಹಿತಿ ನೀಡಿದ್ದಾಳೆ.

    ಇದಾದ ಬಳಿಕ ವಂಚಕ 20000 ಮತ್ತು 50000 ರೂ.ನಂತೆ ಎರಡು ಬಾರಿ ಹಣದ ವಹಿವಾಟು ನಡೆಸುತ್ತಾನೆ. ನಂತರ ಮಾತು ಮುಂದುವರಿಸುವ ವಂಚಕ ಮಗು ನಿನಗೆ 5 ಸಾವಿರ ಕಳುಹಿಸುವ ಬದಲು ಮಿಸ್​ ಆಗಿ 50000 ಕಳಹಿಸಿದ್ದೇನೆ. ದಯವಿಟ್ಟು 45 ಸಾವಿರ ರೂ. ಹಣವನ್ನು ವಾಪಸ್​ ಕಳುಹಿಸು ಎಂದು ಕೇಳುತ್ತಾನೆ. ಬಹಳ ಮುಗ್ದನಂತೆ ಮಾತನಾಡುತ್ತಾನೆ. ಆತನ ಮಾತುಗಳಿಂದ ಅನುಮಾನ ಬಂದು ಗೂಗಲ್​ ಪೇ ಪರಿಶೀಲಿಸಿದಾಗ ಹಣ ಬಂದಿರುವ ಮೆಸೇಜ್​ ಮಾತ್ರ ಇರುತ್ತದೆ. ಆದರೆ, ಬ್ಯಾಂಕ್​ ಖಾತೆಗೆ ಮಾತ್ರ ಹಣ ಕ್ರೆಡಿಟ್​ ಆಗಿರುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ವಂಚಕ ತಕ್ಷಣ ಕಾಲ್​ ಕಟ್​ ಮಾಡುತ್ತಾನೆ.

    ಅದೃಷ್ಟವಶಾತ್​ ಯುವತಿ ವಂಚಕನ ಜಾಲದಿಂದ ಬಚಾವ್​ ಆಗುತ್ತಾಳೆ. ಒಂದು ವೇಳೆ ಯಾಮಾರಿದ್ದರೆ, 45 ಸಾವಿರ ಹಣ ವಂಚಕ ಜೇಬು ಸೇರುತ್ತಿತ್ತು. ಇದೀಗ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ನಡೆಯುತ್ತಿದೆ.

    ಜನರನ್ನು ವಂಚಿಸಲು ವಂಚಕರು ಬಳಸುವ ಹಲವಾರು ವಿಧಾನಗಳಿವೆ. ಅವುಗಳ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಹೀಗಿವೆ ನೋಡಿ ವಂಚಕರು ಬಳಸುವ ವಿಧಾನಗಳು.

    1. ಮೊಬೈಲ್​ಗಳಿಗೆ ಒಂದು ಲಿಂಕ್ ಕಳುಹಿಸಿ, ಬಿಲ್‌ಗಳನ್ನು ತಕ್ಷಣವೇ ಪಾವತಿಸಿದರೆ, ಕ್ಯಾಶ್‌ಬ್ಯಾಕ್​ ಸಿಗುತ್ತದೆ ಎಂದು ನಂಬಿಸಿ, ಬಿಲ್​ ಪಾವತಿಗೆ ಒತ್ತಾಯಿಸುವ ಮೂಲಕ ವಂಚನೆ ಮಾಡುತ್ತಾರೆ. ಒಂದು ವೇಳೆ ಲಿಂಕ್​ ಕ್ಲಿಕ್ ಮಾಡಿದರೆ, ಫೋನ್ ಹ್ಯಾಕಿಂಗ್‌ಗೆ ಕಾರಣವಾಗುವ ಮಾಲ್‌ವೇರ್ ಅನ್ನು ಸ್ಥಾಪಿಸುತ್ತಾರೆ.
    2. ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳಲ್ಲಿ ಬಳಕೆದಾರರ UPI ಐಡಿ ಮತ್ತು ಪಿನ್ ಸಂಖ್ಯೆಗಳು ಹ್ಯಾಕಿಂಗ್‌ಗೆ ಗುರಿಯಾಗುತ್ತವೆ.
    3. ಮೊಬೈಲ್​ ನಂಬರ್​ನೊಂದಿಗೆ ಸಂಯೋಜನೆಗೊಂಡಿರುವ UPI ಖಾತೆಗಳಿಗೆ ಪ್ರವೇಶ ಪಡೆಯಲು ಸಂತ್ರಸ್ತರ ನಕಲಿ ಸಿಮ್ ಕಾರ್ಡ್‌ಗಳನ್ನು ರಚಿಸುವ ಮೂಲಕ ವಂಚನೆ ಮಾಡುತ್ತಾರೆ.

    ಯುಪಿಐ ಹಗರಣ ಹೆಚ್ಚಾಗಿ ಬೆಳಕಿಗೆ ಬರುತ್ತಿರುವ ಕಾರಣ ಸೈಬರ್​ ಪೊಲೀಸರು ಜನರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದು, ಯುಪಿಐ ವ್ಯವಹಾರಗಳನ್ನು ಜಾಗರೂಕತೆಯಿಂದ ಮೇಲ್ವಿಚಾರಣೆ ಮಾಡಿ ಎಂದಿದ್ದಾರೆ.
    * ಯುಪಿಐ ಪಿನ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ಅವುಗಳನ್ನು ರಕ್ಷಿಸಿ.
    * ಪಾಸ್​ವರ್ಡ್​ಗಳನ್ನು ಆಗಾಗ ಬದಲಾಯಿಸುತ್ತಿರಿ.
    * ನಂಬಿಕಸ್ಥ ವ್ಯಕ್ತಿಗಳೊಂದಿಗೆ ಮಾತ್ರ ಯುಪಿಐ ವ್ಯವಹಾರಗಳನ್ನು ನಡಿಸಿ.
    * ವಂಚನೆಯ ಬಗ್ಗೆ ಅನುಮಾನ ಬರುವ ಯಾವುದೇ ಚಟುವಟಿಕೆಯನ್ನು ಬ್ಯಾಂಕ್​ ಮತ್ತು ಪೊಲೀಸ್​ ಅಧಿಕಾರಿಗಳ ಗಮನಕ್ಕೆ ತನ್ನಿ. (ಏಜೆನ್ಸೀಸ್​)

    ಅನುಷ್ಕಾ-ವಿರಾಟ್ ಮಗಳಿಗೀಗ 3 ವರ್ಷ…ಈವರೆಗೆ ಮುಖವನ್ನು ರಿವೀಲ್‌ ಮಾಡದಿದ್ದರೂ ತಂದೆ-ತಾಯಿಯೊಂದಿಗಿರುವ ವಮಿಕಾ ಮುದ್ದಾದ ಫೋಟೋಗಳು ಇಲ್ಲಿವೆ

    ಹೆತ್ತ ಮಗನನ್ನೇ ಕೊಂದ ಸಿಇಓ ಸುಚನಾ ಸಿಕ್ಕಿಬೀಳಲು ಪೊಲೀಸರಿಗೆ ನೆರವಾಯ್ತು ಟ್ರಾಫಿಕ್​ ಜಾಮ್​!

    ವಿಜಯಪುರಕ್ಕೆ ಚಡ್ಡಿ ಗ್ಯಾಂಗ್ ಎಂಟ್ರಿ! ಸಾವರ್ಜನಿಕರು ಎಚ್ಚರದಿಂದಿರಲು ಪೊಲೀಸ್ ಇಲಾಖೆಯಿಂದ ಅನೌನ್ಸ್​ಮೆಂಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts