More

    ಕಲಾಸಿಪಾಳ್ಯ ನೂತನ ಬಸ್ ಟರ್ಮಿನಲ್ ಶುಕ್ರವಾರದಿಂದ ಕಾರ್ಯಾರಂಭ

    ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ವತಿಯಿಂದ ನೂತನವಾಗಿ ನಿರ್ಮಿಸಿರುವ ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ಶುಕ್ರವಾರದಿಂದ ಬಸ್ಸುಗಳ ಕಾರ್ಯಾಚರಣೆ ಪ್ರಾರಂಭವಾಗಲಿದೆ.

    ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಲಾಗುತ್ತಿದ್ದು, ಅಂದಾಜು ಪ್ರತಿ ದಿನ ಒಟ್ಟು 3500 ಟ್ರಿಪ್‌ಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    63.12 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ
    4 ಎಕರೆ 13 ಗುಂಟೆ ಜಾಗದಲ್ಲಿ ಒಟ್ಟು 63.17 ಕೋಟಿ ರೂ.ವೆಚ್ಚದಲ್ಲಿ ಈ ಆಧುನಿಕ ಮತ್ತು ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ನೆಲ ಅಂತಸ್ತಿನಲ್ಲಿ ಏಕಕಾಲದಲ್ಲಿ ಏಕಕಾಲದಲ್ಲಿ ಬಿಎಂಟಿಸಿಯ 18 ಬಸ್‌ಗಳು, ಕೆಎಸ್‌ಆರ್‌ಟಿಸಿಯ 6 ಬಸ್‌ಗಳು ಹಾಗೂ ಖಾಸಗಿಯ 6 ಬಸ್‌ಗಳು ಒಟ್ಟಾರೆ 30 ಬಸ್‌ಗಳು ಕಾರ್ಯಾಚರಣೆ ನಡೆಸಲಿದೆ.

    ಇದನ್ನೂ ಓದಿ: ದೈಹಿಕ ಸಂಬಂಧ ಬೆಳೆಸುವುದಾಗಿ ಮನೆಗೆ ಕರೆದು ಹಣ ಸುಲಿಗೆ: ಇಬ್ಬರು ಮಹಿಳೆಯರು ಸೇರಿ 6 ಮಂದಿ ಸೆರೆ

    ಬಿಎಂಟಿಸಿಯ 18 ಪ್ಲಾಟ್‌ಫಾರಂ 3020 ಡಿರ್ಪಾಚರ್ಸ್, ಕೆ.ಎಸ್.ಆರ್.ಟಿ 6 ಫ್ಲಾಟ್‌ಫಾರಂ, 262 ಡಿರ್ಪಾಚರ್ಸ್, ಖಾಸಗಿ ಬಸ್ಸುಗಳಿಗಾಗಿ 6 ಫ್ಲಾಟ್ ಫಾರಂ, ಅಂದಾಜು 376 ಡಿರ್ಪಾಚರ್ಸ್‌ಗಳಿವೆ. ಈ ನಿಲ್ದಾಣದಲ್ಲಿ ಉಪಹಾರ ಗೃಹ ಮತ್ತು ವಾಣಿಜ್ಯ ಮಳಿಗೆಗಳು, ಕುಡಿಯುವ ನೀರು, ಶೌಚಗೃಹಗಳು, ಆಸನಗಳ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ, ಪ್ರಯಾಣಿಕರ ಸುರಕ್ಷಿತೆಗಾಗಿ ಸುರಂಗ ಮಾರ್ಗ, ಮಹಿಳೆಯರ ವಿಶ್ರಾಂತಿ ಕೊಠಡಿ, ಪ್ರಯಾಣಿಕರಿಗೆ ಆಸನದ ವ್ಯವಸ್ಥೆ, ಲ್‌ಟಿ, ಪಾಸು ಕೌಂಟರ್‌ಗಳು ಮತ್ತು ಟಿಕೇಟ್ ಕಾಯ್ದಿರಿಸುವ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಬಸ್ ನಿಲ್ದಾಣದ ಹೊರಗೆ ಫ್ರಿಪೇಡ್ ಆಟೋ ನಿಲ್ದಾಣವನ್ನು ನಿರ್ಮಿಸಲಾಗಿದೆ.

    ಎಲ್ಲೆಲ್ಲಿಗೆ ಬಿಎಂಟಿಸಿ ಬಸ್ ಸಂಚಾರ?
    ಈ ಬಸ್ ನಿಲ್ದಾಣದಿಂದ ಬೆಂಗಳೂರು ನಗರ, ಹೊರವಲಯಕ್ಕೆ ಪ್ರಮುಖವಾಗಿ ಮೆಜೆಸ್ಟಿಕ್, ಕೋರಮಂಗಲ, ಕೆಂಗೇರಿ, ಎಲೆಕ್ಟ್ರಾನಿಕ್‌ಸಿಟಿ, ಆನೇಕಲ್, ಚಂದಾಪುರ, ಅತ್ತಿಬೆಲೆ, ಸರ್ಜಾಪುರ, ಜಿಗಣಿ, ಐಟಿಪಿಎಲ್, ಹೊಸೂರು, ಕನಕಪುರ ರಸ್ತೆ, ಮತ್ತು ಬನಶಂಕರಿಗೆ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ.

    Kalasi Palya Bus Terminal 1

    ಎಲ್ಲೆಲ್ಲಿಗೆ ಕೆಎಸ್‌ಆರ್‌ಟಿ ಬಸ್ ಸಂಚಾರ?
    ಫ್ಲಾಟ್​ಫಾರಂ 5 ಮತ್ತು 6 ರಿಂದ ಹೊಸೂರು, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಕಡೆಗೆ, ಫ್ಲಾಟ್​ಫಾರಂ 4 ರಿಂದ ಆನೇಕಲ್, ಚಂದಾಪುರ ಕಡೆಗೆ, ಫ್ಲಾಟ್​ಫಾರಂ 3 ರಿಂದ ಮಾಗಡಿ, ಕುಣಿಗಲ್, ನಾಗಮಂಗಲ, ಹುಲಿಯೂರು ದುರ್ಗ, ಫ್ಲಾಟ್​ಫಾರಂ 2 ರಿಂದ ಕನಕಪುರ, ಮಳವಳ್ಳಿ, ಮೈಸೂರು, ಫ್ಲಾಟ್​ಫಾರಂ 1ರಿಂದ ಕನಕಪುರ, ಮಳವಳ್ಳಿ, ಕೊಳ್ಳೆಗಾಲ, ಮಹದೇಶ್ವರಬೆಟ್ಟ ಕಡೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲಿವೆ.

    ಇದನ್ನೂ ಓದಿ: ಶೋಕಿಗೆ ಬಳಸದೆ ಬೈಕ್‌ಗಳನ್ನು ಉದ್ಯೋಗಕ್ಕೆ ಬಳಸಿ

    21 ಲಕ್ಷ ಮಹಿಳೆಯರ ಪ್ರಯಾಣ
    ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೆ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ನಗರದ ಆರು ವಲಯಗಳಲ್ಲಿ ಒಟ್ಟು 21,97,022 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ಕೈತುಂಬಾ ಸಂಬಳವಿದ್ರೂ ಮಾಡಬಾರದನ್ನು ಮಾಡಿ ಸಿಕ್ಕಿಬಿದ್ದ ಗ್ಲಾಮರಸ್​ ಕೃಷಿ ಅಧಿಕಾರಿ! ಏನ್​ ಕೇಳಿದ್ರು ಬಾಯ್ಬಿಡ್ತಿಲ್ಲ…

    ಶಿವಾಜಿನಗರ ಕ್ಷೇತ್ರದಲ್ಲಿ ಯಾವುದೇ ಹೆಸರು ಕೈಬಿಟ್ಟಿಲ್ಲ: ಬಿಬಿಎಂಪಿ ಸ್ಪಷ್ಟನೆ

    ರಾತ್ರಿ ವೇಳೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಹೊಸ ರೂಲ್ಸ್! ಉಲ್ಲಂಘಿಸಿದ್ರೆ ಕಠಿಣ ಕ್ರಮ​ದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts