More

    ಕೈತುಂಬಾ ಸಂಬಳವಿದ್ರೂ ಮಾಡಬಾರದನ್ನು ಮಾಡಿ ಸಿಕ್ಕಿಬಿದ್ದ ಗ್ಲಾಮರಸ್​ ಕೃಷಿ ಅಧಿಕಾರಿ! ಏನ್​ ಕೇಳಿದ್ರು ಬಾಯ್ಬಿಡ್ತಿಲ್ಲ…

    ಅಲಪ್ಪುಳ: ನಕಲಿ ನೋಟು ಪ್ರಕರಣದಲ್ಲಿ ಕೇರಳದ ಮಹಿಳಾ ಕೃಷಿ ಅಧಿಕಾರಿಯೊಬ್ಬರು ಬಂಧನವಾಗಿದೆ. ಇದರ ಬೆನ್ನಲ್ಲೇ ಅಧಿಕಾರಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

    ಎಂ. ಜಿಶ್ಮೋಲ್​ ಬಂಧಿತ ಕೃಷಿ ಅಧಿಕಾರಿ. ಇವರು ಅಲಪ್ಪುಳದ ಎಡತುವಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಕಲಿ ನೋಟು ಪ್ರಕರಣದಲ್ಲಿ ನಿನ್ನೆಯಷ್ಟೇ (ಮಾ.08) ಬಂಧನದ ಬೆನ್ನಲ್ಲೇ ಸೇವೆಯಿಂದ ಅಮಾನತು ಮಾಡಲಾಗಿದೆ.

    ಇದನ್ನೂ ಓದಿ: ರಾತ್ರಿ ವೇಳೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಹೊಸ ರೂಲ್ಸ್! ಉಲ್ಲಂಘಿಸಿದ್ರೆ ಕಠಿಣ ಕ್ರಮ​ದ ಎಚ್ಚರಿಕೆ

    ಜಿಶ್ಮೋಲ್​ ಅವರಿಂದ ಪಡೆದ ನೋಟನ್ನು ವ್ಯಕ್ತಿಯೊಬ್ಬ ಬ್ಯಾಂಕ್​ಗೆ ನೀಡಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಜಿಶ್ಮೋಲ್​ ಅವರಿಗೆ ಪರಿಚಿತನಾಗಿರುವ ಮೀನುಗಾರಿಕೆ ಸಾಧನಗಳನ್ನು ಮಾರಾಟ ಮಾಡುವ ವ್ಯಕ್ತಿಯೊಬ್ಬ 500 ರೂ. ಮುಖಬೆಲೆಯ 7 ನಕಲಿ ನೋಟುಗಳನ್ನು ಬ್ಯಾಂಕ್​ಗೆ ತಂದಿದ್ದ. ಈ ವೇಳೆ ಸಿಕ್ಕಿಬಿದ್ದಾಗ ಜಿಶ್ಮೋಲ್​ ಅವರು ನೋಟುಗಳನ್ನು ಕೊಟ್ಟಿದ್ದಾಗಿ ಹೇಳಿದ್ದ. ಬಳಿಕ ಜಿಶ್ಮೋಲ್​ ಅವರನ್ನು ಕೇರಳ ಪೊಲೀಸರು ವಿಚಾರಣೆ ನಡೆಸಿದರು.

    ಆದರೆ, ಸಾಕಷ್ಟು ಸಮಯದವರೆಗೆ ವಿಚಾರಣೆ ನಡೆಸಿದರೂ ಜಿಶ್ಮೋಲ್​ ಮಾತ್ರ ನಕಲಿ ನೋಟಿನ ಮೂಲ ಯಾವುದು ಎಂದು ಬಹಿರಂಗಪಡಿಸಲು ತಯಾರಿಲ್ಲ. ಹೀಗಾಗಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಮನೆಯ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಅನುಮಾನ ಬರುವಂತಹ ಯಾವುದೇ ವಸ್ತು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

    ಬೇರೆ ಯಾರೋ ಜಿಶ್ಮೋಲ್​ ಅವರಿಗೆ ನಕಲಿ ನೋಟುಗಳನ್ನು ನೀಡಿ ಬಲೆಗೆ ಬೀಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಆಯಾಮದಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜಿಶ್ಮೋಲ್​ ಅವರು ಅಲಪ್ಪುಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರು ಮಾಡೆಲಿಂಗ್​ನಲ್ಲೂ ಸಕ್ರಿಯರಾಗಿದ್ದು, ಅನೇಕ ಫ್ಯಾಶನ್​ ಶೋಗಳನ್ನು ಭಾಗವಹಿಸಿದ್ದಾರೆ.

    ಇದನ್ನೂ ಓದಿ: ಈ ಒಂದು ಮಾತಿಗೆ ನಡೆದೇ ಹೋಯ್ತು ಘೋರ ದುರಂತ: ಯುವಕನ ಪರಿಚಯವೇ 48ರ ಮಹಿಳೆ ಪ್ರಾಣಕ್ಕೆ ಕುತ್ತಾಯ್ತು!

    ಕೃಷಿ ವಿಭಾಗದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಜಿಶ್ಮೋಲ್​ ಈ ಹಿಂದೆ ಗಗನಸಖಿಯಾಗಿ ಸೇವೆ ಸಲ್ಲಿಸಿದ್ದಾರೆ. 2009ರಲ್ಲಿ ಸ್ಪೈಸಸ್​​ ಬೋರ್ಡ್​ನ ಫೀಲ್ಡ್​ ಆಫೀಸರ್​ ಆಗಿದ್ದರು. ಇದಾದ ನಂತರ ಅವರು ಮುವಾಟ್ಟುಪುಳದಲ್ಲಿ VHSE ಬೋಧಕರಾದರು. 2013ರಲ್ಲಿ ಕೃಷಿ ಅಧಿಕಾರಿಯಾಗಿ ಸೇವೆಗೆ ಸೇರಿದರು. (ಏಜೆನ್ಸೀಸ್​)

    ನಿನಗೋಸ್ಕರ ಯಾವ ಮಟ್ಟಕ್ಕಾದ್ರೂ ಹೋಗ್ತೀನಿ… I Love You ಜಾಕ್ವೆಲಿನ್​ ಎಂದ ಮಹಾವಂಚಕ ಸುಕೇಶ್​

    Success Story | ಮೊದಲ ಪ್ರಯತ್ನದಲ್ಲೇ ಯಶಸ್ಸು; ತಂದೆಯ ಕೆಲಸದ ಸ್ಫೂರ್ತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ರು ಈ ಅಧಿಕಾರಿ…

    ಆಯುರ್ವೇದ ಔಷಧಿಗಳು ಹಾಳಾಗುವುದಿಲ್ಲವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts