More

    ರಾತ್ರಿ ವೇಳೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಹೊಸ ರೂಲ್ಸ್! ಉಲ್ಲಂಘಿಸಿದ್ರೆ ಕಠಿಣ ಕ್ರಮ​ದ ಎಚ್ಚರಿಕೆ

    ನವದೆಹಲಿ: ರಾತ್ರಿ ವೇಳೆ ಪ್ರಯಾಣಿಕರ ಸುರಕ್ಷಿತ ಮತ್ತು ನೆಮ್ಮದಿಯ ಪ್ರಯಾಣಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಗುಂಪನ್ನು ನಿಯಂತ್ರಿಸಲು ಮತ್ತು ಇತರೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಹೊಸ ನಿಯಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಎಚ್ಚರಿಸಿದೆ.

    ರಾತ್ರಿ ವೇಳೆ ಪ್ರಯಾಣ ಮಾಡುವ ಪ್ರಯಾಣಿಕರು ಸದ್ದು-ಗದ್ದಲವನ್ನು ತಪ್ಪಿಸಬೇಕು. 10 ಗಂಟೆಯ ಬಳಿಕ ಮೊಬೈಲ್​ನಲ್ಲಿ ಲೌಡ್​ ಸ್ಪೀಕರ್​ ಬಳಸುವಂತಿಲ್ಲ. ಇದು ಪ್ರಯಾಣಿಕರಿಗೆ ಮಾತ್ರವಲ್ಲ, ಟಿಟಿಟಿ (ಪ್ರಯಾಣ ಟಿಕೆಟ್ ಪರೀಕ್ಷಕ)ಗಳು, ರೈಲು ಸಿಬ್ಬಂದಿ, ಕ್ಯಾಟರಿಂಗ್​ ಸಿಬ್ಬಂದಿ ಮತ್ತು ಇತರೆ ಉದ್ಯೋಗಿಗಳಿಗೂ ಇದು ಅನ್ವಯವಾಗುತ್ತದೆ ಮತ್ತು ಪ್ರಯಾಣಿಕರ ಜೊತೆ ಅವರು ಸಹಕರಿಸಬೇಕಾಗಿ ರೈಲ್ವೆ ಇಲಾಖೆ ಸೂಚನೆ ನೀಡಿದೆ.

    ಇದನ್ನೂ ಓದಿ: ಸಿಬಿಐ ಬಳಿಕ ಮನೀಶ್​ ಸಿಸೋಡಿಯಾಗೆ ಇಡಿ ಶಾಕ್​: ಅಕ್ರಮ ಹಣ ವರ್ಗಾವಣೆ, ಎಎಪಿ ನಾಯಕನ ಬಂಧನ

    ಇತರೆ ನಿಯಮಗಳನ್ನು ಸಹ ಸೇರಿಸಲಾಗಿದೆ. ಅವುಗಳೆಂದರೆ, ರಾತ್ರಿ 10 ಗಂಟೆಯ ನಂತರ ರೈಲಿನ ಲೈಟ್​ ಬಿಟ್ಟು ಉಳಿದ ಯಾವುದೇ ಲೈಟ್​ ಉರಿಯುವಂತಿಲ್ಲ ಮತ್ತು ಯಾರೂ ಕೂಡ ಗುಂಪು ಸೇರುವಂತಿಲ್ಲ. ಧೂಮಪಾನ, ಮಧ್ಯಪಾನ ಸೇರಿದಂತೆ ಸಹ ಪ್ರಯಾಣಿಕರಿಗೆ ತೊಂದರೆಯಾಗುವ ಇತರೆ ಯಾವುದೇ ಚಟುವಟಿಕೆಯನ್ನು ಮಾಡುವಂತಿಲ್ಲ. ಹೆಚ್ಚುವರಿಯಾಗಿ ಪ್ರಯಾಣಿಕರು ರೈಲಿನಲ್ಲಿ ಯಾವುದೇ ದಹಿಸುವ ವಸ್ತುಗಳನ್ನು ಸಾಗಿಸಲು ಅನುಮತಿಸಲಾಗುವುದಿಲ್ಲ.

    ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯದ ಬರ್ತ್ ಅನ್ನು ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆವರೆಗೆ ತೆರೆಯಲು ರೈಲ್ವೆ ಇಲಾಖೆ ವ್ಯವಸ್ಥೆ ಮಾಡಿದೆ. ರಾತ್ರಿ 10 ಗಂಟೆಯ ನಂತರವೂ ಪ್ರಯಾಣಿಕರು ಕೆಳಗಿನ ಬರ್ತ್‌ನಲ್ಲಿ ಕುಳಿತಿದ್ದರೆ, ಇತರ ಪ್ರಯಾಣಿಕರಿಗೆ ತೊಂದರೆಯಾಗದಂತೆ ಅದನ್ನು ತೆಗೆದು ಮಧ್ಯದ ಬರ್ತ್ ತೆರೆಯಬಹುದು ಎಂದು ಹೇಳಿದೆ.

    10 ಗಂಟೆಯ ನಂತರ ಆನ್​​ಲೈನ್​ ಫುಡ್​ ಡಿಲಿವರಿ ಇರುವುದಿಲ್ಲ ಎಂದು ಪ್ರಯಾಣಿಕರಿಗೆ ತಿಳಿಸಿದ್ದು, ನೆಮ್ಮದಿಯುತ ಮತ್ತು ಸುರಕ್ಷಿತ ಪ್ರಯಾಣಿಕ್ಕಾಗಿ ರೈಲಿನಲ್ಲಿ ಇರುವ ಪ್ರತಿಯೊಬ್ಬರು ಕೂಡ ಈ ನಿಯಮಗಳನ್ನು ಅನುಸರಿಸಬೇಕೆಂದು ರೈಲ್ವೆ ಇಲಾಖೆ ಹೇಳಿದೆ. ಪ್ರಯಾಣಿಕರಿಗೆ ಸಾಧ್ಯವಾದಷ್ಟು ಉತ್ತಮ ಸೇವೆ ನೀಡುವ ಗುರಿಯನ್ನು ಹೊಂದಿದೆ. (ಏಜೆನ್ಸೀಸ್​)

    ಈ ಒಂದು ಮಾತಿಗೆ ನಡೆದೇ ಹೋಯ್ತು ಘೋರ ದುರಂತ: ಯುವಕನ ಪರಿಚಯವೇ 48ರ ಮಹಿಳೆ ಪ್ರಾಣಕ್ಕೆ ಕುತ್ತಾಯ್ತು!

    ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟ ಉದಾಹರಣೆ ಇಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಶಾಸಕ ಸತೀಶ್ ರೆಡ್ಡಿ, ಮುನಿರೆಡ್ಡಿ ವಿರುದ್ಧ ಭೂ ಕಬಳಿಕೆ ಆರೋಪ: ಉಮಾಪತಿ ಶ್ರೀನಿವಾಸಗೌಡರಿಂದ ದಾಖಲೆ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts