More

    ಬಳ್ಳಾರಿಯ ಎರಡು ಕಡೆ ಆಯುಷ್ಮತಿ ಕ್ಲಿನಿಕ್ ಆರಂಭ

    ಬಳ್ಳಾರಿ: ಜಿಲ್ಲೆಯ ನಗರ ಪ್ರದೇಶದ ಕೊಳಚೆ ಪ್ರದೇಶಗಳ ವ್ಯಾಪ್ತಿಯ ಗರ್ಭಿಣಿಯರಿಗೆ ನುರಿತ ಪ್ರಸೂತಿ ತಜ್ಞರಿಂದ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಜಾರಿಗೆ ತಂದಿರುವ ‘ಆಯುಷ್ಮತಿ ಕ್ಲಿನಿಕ್‌‘ಗಳು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಎರಡು ಕಡೆ ಸೋಮವಾರ ಆರಂಭವಾದವು.

    ಮಿಲ್ಲರ್‌ಪೇಟೆ ನಗರ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಿದ ಮಹಾನಗರ ಪಾಲಿಕೆ ಸದಸ್ಯ ಇಬ್ರಾಹಿಂಬಾಬು ಮಾತನಾಡಿ, ಪ್ರತಿದಿನ ಕಷ್ಟಪಟ್ಟು ದುಡಿದು ಜೀವನ ನಡೆಸುವ ಕೊಳಚೆ ಪ್ರದೇಶದಲ್ಲಿ ಗರ್ಭಿಣಿಯರ ಕಾಳಜಿಗಾಗಿ ಈ ಯೋಜನೆ ಆರಂಭವಾಗಿದ್ದು, ಅತ್ಯಂತ ಸೂಕ್ತವಾಗಿದೆ ಎಂದರು.

    ಕೌಲ್‌ಬಜಾರ್ ಬಡಾವಣೆ ವ್ಯಾಪ್ತಿಯಲ್ಲಿ ಬರುವ ಬ್ರೂಸ್‌ಪೇಟೆ ನಗರ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಿದ ಮಹಾನಗರ ಪಾಲಿಕೆ ಸದಸ್ಯೆ ಬಿ.ಮುಬೀನ್ ಮಾತನಾಡಿ, ಹಣ ಖರ್ಚು ಮಾಡಿ ಪ್ರಸೂತಿ ವೈದ್ಯರ ಬಳಿ ತಪಾಸಣೆಗೆ ತೆರಳಬೇಕಾಗಿತ್ತು. ಈಗ ಹಣ ಉಳಿಸಲು ಆಯುಷ್ಮತಿ ಕ್ಲಿನಿಕ್ ತುಂಬಾ ಸಹಾಯಕವಾಗುತ್ತದೆ ಎಂದರು.

    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್‌ಕುಮಾರ ಮಾತನಾಡಿ, ರಾಜ್ಯದಲ್ಲಿ ಒಟ್ಟು 95 ಆಯುಷ್ಮತಿ ಕ್ಲಿನಿಕ್‌ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ವರ್ಚುವಲ್ ಮೂಲಕ ಬೆಂಗಳೂರಿನಿಂದ ಉದ್ಘಾಟನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಎರಡು ಆಯುಷ್ಮತಿ ಕ್ಲಿನಿಕ್‌ಗಳನ್ನು ಸ್ಥಳೀಯ ಹಂತದಲ್ಲಿ ಸಂಬಂಧಿತ ವಾರ್ಡ್ ಸದಸ್ಯರು ಚಾಲನೆಗೊಳಿಸಿದ್ದಾರೆ. ಮಹಿಳೆಯರ ವಿಶೇಷ ಆರೋಗ್ಯ ತಪಾಸಣೆಗಾಗಿ ಆಯುಷ್ಮತಿ ಕ್ಲಿನಿಕ್ ಆರಂಭಿಸಲಾಗುತ್ತಿದೆ ಎಂದರು.
    ಪ್ರತಿ ಸೋಮವಾರ ಫಿಜಿಷಿಯನ್, ಮಂಗಳವಾರ ಮೂಳೆ ಮತ್ತು ಕೀಲು ತಜ್ಞ, ಬುಧವಾರ-ಶಸ್ತ್ರಚಿಕಿತ್ಸಾ ತಜ್ಞ, ಗುರುವಾರ-ಮಕ್ಕಳ ತಜ್ಞ, ಶುಕ್ರವಾರ-ಸ್ತ್ರೀರೋಗ ತಜ್ಞ, ಶನಿವಾರ- ಇತರ ಕಿವಿ, ಮೂಗು ಮತ್ತು ಗಂಟಲು, ನೇತ್ರ, ಚರ್ಮರೋಗ, ಮಾನಸಿಕ ರೋಗ ತಜ್ಞರು ಸೇವೆ ನೀಡುತ್ತಾರೆ ಎಂದರು.

    ಮಹಿಳೆಯರಿಗೋಸ್ಕರ ರೂಪುಗೊಂಡ ಈ ಕ್ಲಿನಿಕ್‌ನಲ್ಲಿ ಉಚಿತವಾಗಿ ಆಪ್ತಸಮಾಲೋಚನೆ, ಲ್ಯಾಬ್ ಪರೀಕ್ಷೆಗಳು, ಔಷಧ, ಯೋಗ, ಧ್ಯಾನ ಹಾಗೂ ರೆಫರಲ್ ಸೇವೆಗಳು ಲಭ್ಯವಾಗಲಿವೆ ಎಂದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾಧಿಕಾರಿ ಡಾ.ಆರ್.ಎಸ್.ಶ್ರೀಧರ್, ವೈದ್ಯಾಧಿಕಾರಿಗಳಾದ ಡಾ.ಹನುಮಂತಪ್ಪ, ಡಾ.ಸುರೇಖಾ, ಡಾ.ಸೈಯದ್ ಖಾದ್ರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಎಚ್.ದಾಸಪ್ಪನವರ, ನಗರ ಕಾರ್ಯಕ್ರಮ ವ್ಯವಸ್ಥಾಪಕ ಸುರೇಶ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts