More

    ಕರೊನಾ ಕೇಸ್​ಗಳಿಲ್ಲ; ಮಾಸ್ಕ್​ ಧರಿಸೋದು ಕಡ್ಡಾಯವೇನಲ್ಲ; ಅದ್ಯಾವ ದೇಶದಲ್ಲಿದೆ ಈ ನಿರಾಳತೆ?

    ನವದೆಹಲಿ: ಭಾರತ ಸೇರಿ ಹಲವು ದೇಶಗಳಲ್ಲಿ ಕರೊನಾ ಇನ್ನಿಲ್ಲದ ವೇಗದಲ್ಲಿ ವ್ಯಾಪಿಸುತ್ತಿದೆ. ನಮ್ಮಲ್ಲಂತೂ ಪ್ರತಿದಿನ ವರದಿಯಾಗುತ್ತಿರುವ ಪ್ರಕರಣಗಳು ಅಮೆರಿಕ, ಬ್ರೆಜಿಲ್​ಅನ್ನೂ ಮೀರಿಸುತ್ತಿವೆ. ಅದರ ನಡುವೆ ಇಲ್ಲೊಂದು ದೇಶದಲ್ಲಿ ಮಾಸ್ಕ್​ ಧರಿಸೋದು ಕೂಡ ಕಡ್ಡಾಯವೇನಲ್ಲ ಎಂದು ಘೋಷಿಸಲಾಗಿದೆ.

    ಹೌದು…! ಜಗತ್ತಿಗೆಲ್ಲ ಕರೊನಾ ಹಂಚಿದ ಚೀನಾ ಈಗ ಭಾರಿ ನಿರಾಳವಾಗಿದೆ. ಚೀನಾದ ಅರೋಗ್ಯ ಅಧಿಕಾರಿಗಳು ಈಗ ಎರಡನೇ ಬಾರಿ ಹಲವು ನಿರ್ಬಂಧಗಳನ್ನು ಸಡಿಲಿಸಿದ್ದಾರೆ. ಎರಡು ಸುತ್ತಿನ ಲಾಕ್​ಡೌನ್​ ಬಳಿಕ ಡ್ರ್ಯಾಗನ್​ ರಾಷ್ಟ್ರ ಸಾಮಾನ್ಯ ಸ್ಥಿತಿಗೆ ತಲುಪಿದೆ.

    ಇದನ್ನೂ ಓದಿ; ಹೊಟೇಲ್​, ರೆಸ್ಟೋರಂಟ್​ಗಳಲ್ಲಿ ಮದ್ಯ ಸರಬರಾಜು; ಯಾವ ರಾಜ್ಯಗಳಲ್ಲಿದೆ ಅವಕಾಶ?

    ಕಳೆದ 13 ದಿನಗಳಿಂದ ಚೀನಾದಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಜನರು ಮಾಸ್ಕ್​ ಧರಿಸದೇ ಓಡಾಡಬಹುದು ಎಂದು ಪ್ರಕಟಿಸಲಾಗಿದೆ. ಆಧರೆ, ಬಹುತೇಕ ಜನರು ಮಾಸ್ಕ್​ ಧರಿಸಿಯೇ ಸಂಚರಿಸುತ್ತಿದ್ದಾರೆ.

    ಮಾಸ್ಕ್​ ಧರಿಸುವುದು ನನಗೆ ಸುರಕ್ಷತೆಯ ಅನುಭವ ನೀಡುತ್ತದೆ. ನಾನು ಮಾಸ್ಕ್​ ಧರಿಸದಿದ್ದರೆ, ಇತರರು ನನ್ನ್ನು ನೋಡುವ ದೃಷ್ಟಿಕೋನವೇ ಬಲಾಗುತ್ತದೆ ಎನ್ನುವುದು ಬೀಜಿಂಗ್​ ಯುವತಿಯೊಬ್ಬಳ ಅಭಿಪ್ರಾಯ.

    ಇದನ್ನೂ ಓದಿ; ಮೇಲ್ವರ್ಗದವನ ಹಿತ್ತಿಲಲ್ಲಿದ್ದ ಹೂ ಕಿತ್ತಿದ್ದಕ್ಕೆ ನಾಯ್ಕ್​ ಸಮುದಾಯದ 40 ಕುಟುಂಬಗಳಿಗೆ ಬಹಿಷ್ಕಾರ…! 

    ಆಗಸ್ಟ್​ 20ರ ವರೆಗೆ ವಿದೇಶದಿಂದ ಬಂದ ಕೆಲವರಲ್ಲಿ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಚೀನಿಯರಲ್ಲದ ಪ್ರಜೆಗಳಿಗೆ ಅಂತಾರಾಷ್ಟ್ರಿಯ ಗಡಿಗಳನ್ನು ಬಂದ್​ ಮಾಡಲಾಗಿದೆ. ಕಳೆದ ಏಪ್ರಿಲ್​ನಲ್ಲೂ ಚೀನಿಯರಿಗೆ ಮಾಸ್ಕ್​ ಧರಿಸುವುದರಿಂದ ವಿನಾಯ್ತಿ ನೀಡಲಾಗಿತ್ತು.

    ಕರೊನಾಮುಕ್ತ ದೇಶವೆಂದು ಹೇಳಿಕೊಂಡಿದ್ದ ನ್ಯೂಜಿಲೆಂಡ್​ನ ಆಕ್ಲಂಡ್​ನಲ್ಲಿ ಕರೊನಾ ಕೇಸ್​​ಗಳು ಕಾಣಿಸಿಕೊಂಡಿದ್ದರಿಂದ ಮತ್ತೆ ಅಲ್ಲಿ ಎರಡನೇ ಹಂತದ ಲಾಕ್​ಡೌನ್​ ಘೋಷಿಸಲಾಗಿದೆ.

    ಕೆಲಸ ಕಳೆದುಕೊಂಡಿದ್ದೀರಾ…? ಸರ್ಕಾರವೇ ಕೊಡುತ್ತೆ ಮೂರು ತಿಂಗಳ ಸಂಬಳ; ಅರ್ಹತೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts