More

    17ರಂದು ಬಿಕಾಂ ಅಂತಿಮ ಸೆಮಿಸ್ಟರ್ ಪರೀಕ್ಷೆ : ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದಾಗಿದ್ದ ಪರೀಕ್ಷೆ

    ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಲ್ಲಿ ಸೋಮವಾರ (ಅ.12) ನಡೆಯಬೇಕಿದ್ದ ಬಿಕಾಂ 6ನೇ ಸೆಮಿಸ್ಟರ್​ನ 6.2 ಪ್ರಿನ್ಸಿಪಲ್ಸ್ ಆಂಡ್ ಪ್ರಾಕ್ಟೀಸ್ ಆಫ್ ಆಡಿಟಿಂಗ್ (ಸಿಬಿಸಿಎಸ್) ಪರೀಕ್ಷೆ ಅ.17ರಂದು ಬೆಳಗ್ಗೆ 9.30 ರಿಂದ 12.30ರ ವರೆಗೆ ನಡೆಯಲಿದೆ. ಅ.12ರಂದು ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು ಎಂದು ಬೆಂಗಳೂರು ವಿವಿ ತಿಳಿಸಿದೆ.

    ಎಬಿವಿಪಿ ಪ್ರತಿಭಟನೆ: ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಮಂಗಳವಾರ (ಅ.13) ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ಪ್ರತಿಭಟನೆ ನಡೆಸಿದರು. ಕರೊನಾ ಸಂದರ್ಭದಲ್ಲಿ ಇಡಿ ಪ್ರಪಂಚವೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದ ಪದವಿಯ ಅಂತಿಮ ಪರೀಕ್ಷೆಯ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳು ಎಚ್ಚರಿಕೆ ವಹಿಸದೇ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟು ಮಾಡುತ್ತಿರುವುದು ಶೋಚನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: “ಖುರಾನ್​ ಮಾತ್ರ ಸರ್ಕಾರಿ ವೆಚ್ಚದಲ್ಲಿ ಕಲಿಸಲಾಗದು, ಮದರಸಾ ಮತ್ತು ಸಂಸ್ಕೃತ ಸ್ಕೂಲ್​ಗಳನ್ನೂ ಮುಚ್ತೇವೆ”

    ಬೆಂ.ಎಬಿವಿಪಿ ವಿಭಾಗದ ರಾಜ್ಯ ಸಹ ಕಾರ್ಯದರ್ಶಿ ತೇಜಸ್ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಕುಳಿತಿರುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದಿಂದ ವಾಪಸ್ ಕಳುಹಿಸಿರುವುದು ವಿಶ್ವವಿದ್ಯಾಲಯದ ಘನತೆಗೆ ಕುಂದು ತರುವಂತಹ ಕೆಲಸವಾಗಿದೆ. ಇದನ್ನು ಎಬಿವಿಪಿ ತೀವ್ರವಾಗಿ ಕಂಡಿಸುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

    ವೃಷಭಾವತಿ ನದಿ ಪುನಶ್ಚೇತನ ಸರ್ಕಾರದ ಹೊಣೆ|ನೀರಿ ಸಂಸ್ಥೆ ನೇಮಕಕ್ಕೆ ಹೈಕೋರ್ಟ್ ಇಂಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts