More

    ಟೀಮ್ ಇಂಡಿಯಾ ಕಿಟ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನ

    ನವದೆಹಲಿ: ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಸೋಮವಾರ ಬಿಡ್ ಆಹ್ವಾನಿಸಿದೆ. ನೈಕಿ ಕಂಪನಿ ಜತೆಗಿನ ಹಾಲಿ ಒಪ್ಪಂದ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ಅಧಿಕೃತ ಮಾರಾಟ ಸರಕು ಪಾಲುದಾರ ಹಕ್ಕಿಗೂ ಟೆಂಡರ್ ಪ್ರಕ್ರಿಯೆ ಶುರು ಮಾಡಲಾಗಿದೆ.

    ನೈಕಿ ಜತೆಗೆ ಬಿಸಿಸಿಐ ಕಳೆದ 4 ವರ್ಷಗಳಿಂದ ಕಿಟ್ ಪ್ರಾಯೋಜಕತ್ವ ಒಪ್ಪಂದ ಹೊಂದಿತ್ತು. ಅದರಂತೆ 370 ಕೋಟಿ ರೂ. ಮತ್ತು 30 ಕೋಟಿ ರೂ. ರಾಯಲ್ಟಿ ಮೊತ್ತವನ್ನು ಬಿಸಿಸಿಐ ಪಡೆದುಕೊಂಡಿದೆ. ಆಗಸ್ಟ್ 3ರಿಂದ ಟೆಂಡರ್ ಪ್ರತಿ (ಐಟಿಟಿ) ಲಭ್ಯವಿದ್ದು, 1 ಲಕ್ಷ ರೂ. ಟೆಂಡರ್ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದು ಎಂದು ಬಿಸಿಸಿಐ ತಿಳಿಸಿದೆ. ಐಟಿಟಿ ಆಗಸ್ಟ್ 26ರವರೆಗೆ ಲಭ್ಯವಿರುತ್ತದೆ.

    ನೈಕಿ ಕಂಪನಿ ಒಟ್ಟಾರೆಯಾಗಿ ಕಳೆದ 14 ವರ್ಷಗಳಿಂದ ಭಾರತೀಯ ಕ್ರಿಕೆಟ್ ಜತೆಗೆ ಸಂಬಂಧ ಹೊಂದಿದೆ. ಆದರೆ ಇತ್ತೀಚೆಗೆ ಲಾಕ್‌ಡೌನ್‌ನಿಂದಾಗಿ ನೈಕಿ ಸಂಸ್ಥೆ ಆರ್ಥಿಕ ಹೊಡೆತ ಎದುರಿಸಿರುವ ಹಿನ್ನೆಲೆಯಲ್ಲಿ ಕಿಟ್ ಪ್ರಾಯೋಜಕತ್ವವನ್ನು ಮುಂದುವರಿಸುತ್ತಿಲ್ಲ. ಒಂದು ವೇಳೆ ಹಿಂದಿಗಿಂತ ಕಡಿಮೆ ಮೊತ್ತಕ್ಕೆ ಹಕ್ಕು ಒಲಿದು ಬಂದರೆ ನೈಕಿ ಮತ್ತೆ ಕಿಟ್ ಪ್ರಾಯೋಜಕನಾಗಿ ಮುಂದುವರಿಯುವ ಸಾಧ್ಯತೆಯೂ ಇದೆ.

    ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಪುತ್ರನ ಬಗ್ಗೆ ತೈಮುರ್ ಅಲಿ ಖಾನ್‌ಗೆ ಬೇಸರವೇಕೆ?

    ನೈಕಿ ಕಿಟ್ ಪ್ರಾಯೋಜಕತ್ವಕ್ಕೆ ಪ್ರತಿ ಪಂದ್ಯಕ್ಕೆ 88 ಲಕ್ಷ ರೂ. ಪಾವತಿಸುತ್ತಿತ್ತು ಎನ್ನಲಾಗಿದೆ. ಆದರೆ ಇದೀಗ ಬಿಸಿಸಿಐ ಟೆಂಡರ್‌ನಲ್ಲಿ ಪ್ರತಿ ಪಂದ್ಯಕ್ಕೆ ಕನಿಷ್ಠ 61 ಲಕ್ಷ ರೂ. ನಿಗದಿಪಡಿಸಿದೆ. ಇದು ಹಿಂದಿನ ಮೊತ್ತಕ್ಕಿಂತ ಶೇ. 31ರಷ್ಟು ಕಡಿಮೆಯಾಗಿದೆ. ಆದರೆ ಪೈಪೋಟಿ ಅಧಿಕವಾದರೆ ಮೊತ್ತ ಏರಿಕೆಯಾಗುವ ನಿರೀಕ್ಷೆ ಇದೆ.

    ಚೀನಾ ಪ್ರಾಯೋಜಕತ್ವ ತ್ಯಜಿಸದ ಬಿಸಿಸಿಐ ವಿರುದ್ಧ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts