More

    ಬೆಂಗಳೂರಿಗೆ ಮುಂದಿನ ವರ್ಷದ ಟಿ20 ವಿಶ್ವಕಪ್ ಪಂದ್ಯಗಳ ಆತಿಥ್ಯ?

    ಅಹಮದಾಬಾದ್: ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಬೆಂಗಳೂರು ಸಹಿತ ದೇಶದ 7 ಪ್ರಮುಖ ತಾಣಗಳಲ್ಲಿ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಮುಂಬೈ, ಚೆನ್ನೈ, ಮೊಹಾಲಿ, ದೆಹಲಿ, ಅಹಮದಾಬಾದ್ ಮತ್ತು ಧರ್ಮಶಾಲಾ ಪಂದ್ಯ ನಡೆಯಲಿರುವ ಇತರ ಪ್ರಮುಖ ತಾಣಗಳು. ಈ ತಾಣಗಳಿಗೆ ಗುರುವಾರ ನಡೆಯುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಒಪ್ಪಿಗೆ ಲಭಿಸುವ ನಿರೀಕ್ಷೆ ಇದೆ.

    ಈ ನಡುವೆ ಪ್ರಮುಖ ತಾಣಗಳ ಜತೆಗೆ ನಮಗೂ ಪಂದ್ಯ ಆಯೋಜನೆಯ ಅವಕಾಶ ನೀಡಿ ಎಂದು ಕೆಲ ಸಣ್ಣ ನಗರಗಳು ಒತ್ತಾಯಿಸಿವೆ. ಭಾರತದ ಪಂದ್ಯಗಳು ದೊಡ್ಡ ಕ್ರೀಡಾಂಗಣಗಳಲ್ಲಿಯೇ ನಡೆಯಲಿ. ಆದರೆ ಇತರ ಕೆಲ ಪಂದ್ಯಗಳ ಆಯೋಜನೆಗೆ ನಮಗೂ ಅವಕಾಶ ಕಲ್ಪಿಸಿ ಎಂದು ಪಶ್ಚಿಮ ವಲಯದ ಕ್ರಿಕೆಟ್ ಸಂಸ್ಥೆಯೊಂದರ ಮುಖ್ಯಸ್ಥರು ಹೇಳಿದ್ದಾರೆ.

    ಇದನ್ನೂ ಓದಿ: ಕರೊನಾವನ್ನು ಮಣಿಸಿದ ಸೈನಾ ನೆಹ್ವಾಲ್​-ಕಶ್ಯಪ್ ದಂಪತಿ

    ಟಿ20 ವಿಶ್ವಕಪ್ ತೆರಿಗೆ ವಿನಾಯಿತಿ
    ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಕೇಂದ್ರ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಐಸಿಸಿ ನೀಡಿರುವ ಗುಡುವು ಪೂರ್ಣಗೊಳ್ಳಲು ಇನ್ನು ಒಂದು ವಾರವಷ್ಟೇ ಬಾಕಿ ಇದೆ. ಆದರೆ ಕೇಂದ್ರ ಸರ್ಕಾರ ಹಾಲಿ ತೆರಿಗೆ ಕಾನೂನಿನ ಅನ್ವಯ ಕ್ರೀಡಾಕೂಟಗಳಿಗೆ ತೆರಿಗೆ ವಿನಾಯಿತಿ ನೀಡಲಾಗುವುದಿಲ್ಲ. ಹೀಗಾಗಿ ಈ ವಿಚಾರದಲ್ಲಿ ಬಿಸಿಸಿಐ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ತೆರಿಗೆ ವಿನಾಯಿತಿ ಸಿಗದಿದ್ದರೆ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗುವುದು ಎಂದೂ ಐಸಿಸಿ ಎಚ್ಚರಿಸಿದೆ.

    ಸೌಹಾರ್ದ ಪಂದ್ಯದಲ್ಲಿ ಗಂಗೂಲಿ ತಂಡವನ್ನು ಮಣಿಸಿದ ಜಯ್ ಷಾ ಇಲೆವೆನ್

    ಪಿತೃತ್ವ ರಜೆ ವಿಚಾರದಲ್ಲಿ ಕೊಹ್ಲಿ-ನಟರಾಜನ್ ನಡುವೆ ಬಿಸಿಸಿಐ ತಾರತಮ್ಯ, ಗಾವಸ್ಕರ್ ಆರೋಪ

    ಕ್ರಿಕೆಟ್ V/s ಪಿತೃತ್ವ ರಜೆ; ಕ್ರಿಕೆಟಿಗರ ಪಿತೃತ್ವ ರಜೆ ಹೊಸದಲ್ಲ!

    PHOTO | ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿವಾಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts