More

    ಕಂಗನಾ ವಿರುದ್ಧ ದೂರು ದಾಖಲಿಸುವಂತೆ ಬಾಂದ್ರಾ ಮ್ಯಾಜಿಸ್ಟ್ರೇಟ್​ ಕೋರ್ಟ್​ ನಿರ್ದೇಶನ

    ಮುಂಬೈ: ನೂತನ ಕೃಷಿ ಕಾನೂನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದ ವೇಳೆ ಟ್ವಿಟರ್​​ನಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿರುವ ಆರೋಪ ಹೊತ್ತ ಬಾಲಿವುಡ್​​ ನಟಿ ಕಂಗನಾ ರಣಾವತ್ ವಿರುದ್ಧ ಇತ್ತೀಚೆಗಷ್ಟೇ ತುಮಕೂರಿನ ಕ್ಯಾತಸಂದ್ರ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದರು. ಇದೀಗ ಇದೇ ಘಟನೆಗೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ​ ಸಹ ದೂರು ದಾಖಲಿಸುವಂತೆ ಆದೇಶಿಸಿದೆ.

    ಇದನ್ನೂ ಓದಿ: ಮಹೇಶ್​ ಬಾಬು ಚಿತ್ರಕ್ಕೆ ನಾಯಕಿ ಫಿಕ್ಸ್; ಕೀರ್ತಿ ಸುರೇಶ್​ಗೆ ಜನ್ಮದಿನವೇ ಸಿಕ್ತು ಸರ್ಪ್ರೈಸ್​

    ಸೆಪ್ಟೆಂಬರ್​​ 21ರಂದು ಕಂಗನಾ ತಮ್ಮ ಟ್ವಿಟರ್​​ ಖಾತೆಯಲ್ಲಿ ಕೃಷಿ ಮಸೂದೆ ಪ್ರತಿಭಟನೆ ವಿರೋಧವಾಗಿ ಟ್ವೀಟ್​ ಮಾಡಿದ್ದರು. ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗೆ ಕರ್ನಾಟಕ, ಪಂಜಾಬ್​, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ವೇಳೆ ಕಂಗನಾ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದರು.

    ಇದನ್ನೂ ಓದಿ: ಆಮೀರ್​ ಖಾನ್​ ಪುತ್ರ ಬಾಲಿವುಡ್​ಗೆ ಎಂಟ್ರಿ; ಸೌತ್​ನ ಈ ಚಿತ್ರದ ರಿಮೇಕ್​ನಲ್ಲಿ ನಟನೆ

    ಇದೀಗ ಇದೇ ಘಟನೆಗೆ ಸಂಬಂಧಿಸಿದಂತೆ ಕಂಗನಾ ಮತ್ತವರ ಸಹೋದರಿ ರಂಗೋಲಿ ಚಾಂಡೆಲಾ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಪೊಲೀಸ್​ ಇಲಾಖೆಗೆ ಕೋರ್ಟ್​ ಆದೇಶಿಸಿದೆ. ಜತೆಗೆ ಹೇಳಿಕೆಗೆ ಕಾರಣ ಮತ್ತು ಹಿನ್ನೆಲೆಯ ಸಂಪೂರ್ಣ ವಿಚಾರಣೆ ಮಾಡುವಂತೆಯೂ ತಿಳಿಸಿದೆ. (ಏಜೆನ್ಸೀಸ್​)

    ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ಮೊದಲೇ ಅನುಭವಿಸಿದ್ದ ಚಿರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts