More

    ಕಾಂಗ್ರೆಸ್​ ಸುಳ್ಳು ಪ್ರಚಾರದಲ್ಲಿ ತೊಡಗಿದೆ:ಚಲವಾದಿ ನಾರಾಯಣ ಸ್ವಾಮಿ

    ಕೊಪ್ಪಳ: ಅಧಿಕಾರ ಸಿಗುವುದಿಲ್ಲವೆಂದು ವಿಚಲಿತರಾಗಿರುವ ಕಾಂಗ್ರೆಸ್​ ನಾಯಕರು ಬಿಜೆಪಿ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆಂದು ವಿಪ ಸದಸ್ಯ ಚಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು.

    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

    ಇದು ದೇಶದ ಚುನಾವಣೆ. ವಿಶ್ವ ಮೆಚ್ಚಿದ ಬಲಿಷ್ಠ ನಾಯಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ದೇಶದ ಜನ ಬಯಸಿದ್ದಾರೆ. ಆದರೆ, ಕಾಂಗ್ರೆಸ್​ನವರು ಕೀಳು ಭಾಷೆ ಬಳಸಿ ಅವರ ಟೀಕೆ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ತಮ್ಮ ರಾಜಕೀಯ ಜೀವನದಲ್ಲಿ ಒಮ್ಮೆಯೂ ವೈಯಕ್ತಿಕ ಟೀಕೆ ಮಾಡಿರಲಿಲ್ಲ. ಈಗ ಪ್ರಧಾನಿಗೆ ಅವನು, ಇವನು ಎನ್ನುತ್ತಿದ್ದಾರೆ. ತಮಗೆ ಮತ ನೀಡದಿದ್ದರೂ ಪರವಾಗಿಲ್ಲ. ಅಂತ್ಯಸಂಸ್ಕಾರಕ್ಕಾದರೂ ಬನ್ನಿ ಎನ್ನುವ ಹತಾಶೆ ಮಾತಾಡಿದ್ದಾರೆ. ಅಮಿತ್​ ಷಾ, ಮೋದಿ ಭಾಷಣಗಳನ್ನು ಮನಬಂದಂತೆ ಎಡಿಟ್​ ಮಾಡಿ ಸುಳ್ಳು ಹರಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದ್ದು ಕ್ರಮಕ್ಕೆ ಒತ್ತಾಯಿಸಿದ್ದೇವೆ ಎಂದರು.

    ಕಾಂಗ್ರೆಸ್​ ನಿಜವಾದ ದಲಿತ ವಿರೋಧಿ. ಅಂಬೇಡ್ಕರ್​ ಅವರನ್ನು ಸೋಲಿಸಿದರು. ಸತ್ತಾಗ ಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಅವರ ಆಶಯವಾಗಿದ್ದ ಒಂದು ದೇಶದಲ್ಲಿ ಎರಡು ಸಂವಿಧಾನ ಇರಬಾದರೆಂಬ ಮಾತಿಗೆ ಬೆಲೆ ನೀಡಲಿಲ್ಲ. ಭಾರತ ರತ್ನ ನೀಡಲಿಲ್ಲ. ಕೇವಲ ಗಾಂಧಿ ಕುಟುಂಬಕ್ಕೆ ಕೊಟ್ಟುಕೊಂಡರು. ಸದ್ಯ ನಾವು ಸಂವಿಧಾನ ಬದಲಾಯಿಸುತ್ತೇವೆಂದು ಸುಳ್ಳು ಹರಡುತ್ತಿದ್ದಾರೆ. ಸಂವಿಧಾನಕ್ಕೆ ತಿದ್ದುಪಡಿ ತರಬಹುದೆ ವಿನಾ ಬದಲಾವಣೆ ಸಾಧ್ಯವಿಲ್ಲ. ತುರ್ತು ಪರಿಸ್ಥಿತಿ ಹೇರಿ ಜಾತ್ಯಾತಿತ, ಸಮಾಜವಾದಿ ಎಂಬ ಅಂಶ ಸೇರಿಸಿದ್ದು ಕಾಂಗ್ರೆಸ್​ನವರು. ಈಗ ಎಸ್ಸಿ&ಎಸ್ಟಿಗಳ ಅಭಿವೃದ್ಧಿಗೆ ಮೀಸಲಾದ ಹಣವನ್ನು ಗ್ಯಾರಂಟಿಗಳಿಗೆ ಬಳಸುವ ಮೂಲಕ ಅನ್ಯಾಯ ಮಾಡುತ್ತಿದ್ದಾರೆ. ಜನರಿಗೆ ಇವರ ನಿಜ ಬಣ್ಣ ಗೊತ್ತಾಗಿದೆ ಎಂದು ಕುಟುಕಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ, ಪ್ರಮುಖರಾದ ಈಶಪ್ಪ ಹಿರೇಮನಿ, ಗಣೇಶ ಹೊರತಟ್ನಾಳ ಇತರರಿದ್ದರು.

    ಕಾಂಗ್ರೆಸ್​ನ ಅಮರೇಗೌಡ ಬಯ್ಯಾಪುರ ಸಂವಿಧಾನ ಬದಲಾಯಿಸಬೇಕೆಂದು ಹೇಳಿದ್ದಾರೆ. ಅನಿಲ್​ ಲಾಡ್​ ಸಂವಿಧಾನ ರಚಿಸಿದವರು ಇಂದಿರಾ, ಸೋನಿಯಾ, ರಾಹುಲ್​ ಗಾಂಧಿ ಎಂದು ಹೇಳಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್​ ಯಾವ ಕ್ರಮ ಕೈಗೊಂಡಿದೆ ? ಹಾಸಮದ ಮಹಿಳೆಯರ ದೌರ್ಜನ್ಯ ಪ್ರಕರಣ ಒಪು$್ಪವಂತದ್ದಲ್ಲ. ತಪ್ಪಿಸ್ಥರಿಗೆ ಶಿೆಯಾಗಲಿ. ಉಪು$್ಪ ತಿಂದವರು ನೀರು ಕುಡಿಯಲೇಬೇಕು.

    ಚಲವಾದಿ ನಾರಾಯಣ ಸ್ವಾಮಿ. ವಿಪ ಸದಸ್ಯ.

    ನಾನೊಬ್ಬ ಮಹಿಳೆ. ಯಾವ ಮಹಿಳೆಯರಿಗೂ ಅನ್ಯಾಯವಾದರೂ ಒಪು$್ಪವುದಿಲ್ಲ. ಸಂಸದ ಪ್ರಜ್ವಲ್​ ರೇವಣ್ಣ ಮೇಲಿನ ಪ್ರಕರಣ ಸಂಬಂಧ ಎಸ್​ಐಟಿ ರಚಿಸಲಾಗಿದೆ. ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಇದ್ದರೂ ಶಿೆ ವಿಧಿಸಲಿ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಖಂಡನೀಯ.

    ಹೇಮಲತಾ ನಾಯಕ.ವಿಪ ಸದಸ್ಯೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts