More

    ಗಲ್ಲಿ ಕ್ರಿಕೆಟ್​ ಆಟಗಾರರು ಕೂಡ ಇಂಥಾ ಮಿಸ್ಟೇಕ್​ ಮಾಡಲ್ಲ! ತುಂಬಾ ಚರ್ಚೆಯಾಗ್ತಿದೆ ಹಾರ್ದಿಕ್​ ಮಾಡಿದ ಈ ತಪ್ಪು…

    ಹೈದರಾಬಾದ್​: ಇಲ್ಲಿನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ (ಮಾರ್ಚ್​ 27) ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಹೊಸ ಇತಿಹಾಸವನ್ನು ನಿರ್ಮಿಸಿದೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿನ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದೆ.

    ಮೊದಲು ಬ್ಯಾಟ್​ ಮಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಮಯಾಂಕ್​ ಅವಗರ್ವಾಲ್​ (11) ಬಿಟ್ಟರೆ ಎಸ್​ಆರ್​ಎಚ್ ತಂಡದ ಉಳಿದ ಆಟಗಾರರು ಬಿರುಸಿನ ಆಟವಾಡುವ ಮೂಲಕ​ ಇತಿಹಾಸವನ್ನು ನಿರ್ಮಿಸಿದರು. ಈ ಐತಿಹಾಸಿಕ ದಾಖಲೆಗೆ ಹೈದರಾಬಾದ್​ ಬ್ಯಾಟ್ಸ್‌ಮನ್‌ಗಳ ರನ್​ ಕೊಡುಗೆ ಒಂದೆಡೆಯಾದರೆ, ಹಾರ್ದಿಕ್ ಪಾಂಡ್ಯ ಅವರ ಕಳಪೆ ನಾಯಕತ್ವವು ಕೂಡ ಪ್ರಮುಖ ಕಾರಣವಾಗಿದೆ. ಏಕೆಂದರೆ, ಹಾರ್ದಿಕ್ ಪಾಂಡ್ಯ ತೆಗೆದುಕೊಂಡ ನಿರ್ಧಾರಗಳೇ ಹೈದರಾಬಾದ್​ ತಂಡಕ್ಕೆ ವರವಾದವು. ಹಾರ್ದಿಕ್​ ಪಾಂಡ್ಯರಂತಹ ಕೆಟ್ಟ ನಾಯಕತ್ವವನ್ನು ಎಲ್ಲಿಯೂ ನೋಡಿಲ್ಲ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಹಾಗಾದರೆ, ಹಾರ್ದಿಕ್ ಪಾಂಡ್ಯ ತೆಗೆದುಕೊಂಡ ಆ ಕೆಟ್ಟ ನಿರ್ಧಾರಗಳು ಯಾವುವು ಎಂದು ನೋಡೋಣ.

    ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದೆ. ಮೊದಲ 10 ಓವರ್‌ಗಳಲ್ಲಿ ಹೈದರಾಬಾದ್​ 148 ರನ್ ಗಳಿಸಿತ್ತು. ಇಂತಹ ಪರಿಸ್ಥಿತಿಗೆ ಪ್ರಮುಖ ಕಾರಣ ಹಾರ್ದಿಕ್ ಪಾಂಡ್ಯ. ಏಕೆಂದರೆ ಈ ಪಂದ್ಯದ ಬೌಲಿಂಗ್ ಫಾರ್ಮ್ಯಾಟ್​ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಜಸ್ಪ್ರೀತ್​ ಬುಮ್ರಾ ಅವರಂತಹ ವಿಶ್ವದರ್ಜೆಯ ಬೌಲರ್ ಆಡುವ ಹನ್ನೊಂದರ ಬಳಗದಲ್ಲಿದ್ದರು ಸರಿಯಾಗಿ ಬಳಸಿಕೊಳ್ಳಲಿಲ್ಲ. ಮೊದಲ ಓವರ್​ ನೀಡುವ ಬದಲು ನಾಲ್ಕನೇ ಓವರ್‌ ಅನ್ನು ಬುಮ್ರಾಗೆ ನೀಡಿದರು. ಆದರೆ, ಅಷ್ಟರಲ್ಲಾಗಲೇ ಹೈದರಾಬಾದ್​ ರನ್​ಗಳ ಮಹಾಪೂರವನ್ನೇ ಹರಿಸಿತ್ತು. 3 ಓವರ್​ಗೆ ತಂಡದ ಮೊತ್ತ ಯಾವುದೇ ವಿಕೆಟ್​ ನಷ್ಟವಿಲ್ಲದೆ 40 ರನ್​ ಆಗಿತ್ತು. 4ನೇ ಓವರ್​ ಎಸೆದ ಬುಮ್ರಾ ಕೇವಲ 5 ರನ್​ ನೀಡುವ ಮೂಲಕ ರನ್​ ವೇಗಕ್ಕೆ ಕಡಿವಾಣ ಹಾಕಿದರು.

    ಇದಾದ ಬಳಿಕ ಮತ್ತೆ 12ನೇ ಓವರ್​ವರೆಗೂ ಬುಮ್ರಾಗೆ ಹಾರ್ದಿಕ್​ ಬೌಲಿಂಗ್​ ಮಾಡಲು ಅವಕಾಶವನ್ನೇ ನೀಡಲಿಲ್ಲ. ಅಷ್ಟರಲ್ಲಾಗಲೇ ಹೈದರಾಬಾದ್​ ತಂಡದ ಮೊತ್ತ 173 ರನ್​ಗೆ 3 ವಿಕೆಟ್​ ಕಳೆದುಕೊಂಡಿತ್ತು. 13ನೇ ಓವರ್​ ಎಸೆದ ಬುಮ್ರಾ ಕೇವಲ 7 ರನ್​ ನೀಡಿದರು. ಬಳಿಕ 15ನೇ ಓವರ್​ನಲ್ಲಿ 11 ರನ್​ ಹಾಗೂ 19ನೇ ಓವರ್​ನಲ್ಲಿ 13 ರನ್​ ನೀಡಿದರು. ಅಲ್ಲಿಗೆ 4 ಓವರ್​ಗಳಲ್ಲಿ ಕೇವಲ 36 ರನ್​ಗಳನ್ನು ಮಾತ್ರ ಬುಮ್ರಾ ನೀಡಿದರು. ಆದರೆ, ಹಾರ್ದಿಕ್​ ಸೇರಿದಂತೆ ಉಳಿದ ಎಲ್ಲ ಬೌಲರ್​ಗಳು ಎಸ್​ಆರ್​ಎಚ್​ ಬ್ಯಾಟ್ಸ್​ಮನ್​ಗಳಿಗೆ ಸುಲಭ ತುತ್ತಾದರು.

    ವಿಶ್ವ ಶ್ರೇಷ್ಠ ಬೌಲರ್​ನನ್ನು ಸರಿಯಾಗಿ ಬಳಸಿಕೊಳ್ಳದೆ ಹಾರ್ದಿಕ್​ ತಪ್ಪು ಮಾಡಿದರು. ಗಲ್ಲಿ ಕ್ರಿಕೆಟ್​ನಲ್ಲೂ ಕೂಡ ಇಂಥಾ ಎಡವಟ್ಟು ಮಾಡುವುದಿಲ್ಲ. ಗಲ್ಲಿ ಕ್ರಿಕೆಟ್​ನ ಪ್ರತಿಯೊಬ್ಬರಿಗೂ ಇರುವ ಕನಿಷ್ಠ ಜ್ಞಾನವೂ ಹಾರ್ದಿಕ್​ಗೆ ಇಲ್ಲ ಎಂದು ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ಹಾರ್ದಿಕ್​ ಕಾಲೆಳೆಯುತ್ತಿದ್ದಾರೆ.

    ಇನ್ನೂ ಪದಾರ್ಪಣೆ ಟೂರ್ನಿಯಲ್ಲೇ ಕ್ವೆನಾ ಮಫಕಾ 4 ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ ಗರಿಷ್ಠ 66 ರನ್ ನೀಡಿದರು. ಹೈದರಾಬಾದ್​ ತಂಡದ ಆಟಗಾರರು ರನ್​ ಮಳೆ ಹರಿಸುತ್ತಿದ್ದರೆ ಹಾರ್ದಿಕ್​ ಪಾಂಡ್ಯ ಮುಗುಳ್ನಗುತ್ತಿದ್ದದ್ದು ಮುಂಬೈ ಅಭಿಮಾನಿಗಳನ್ನು ಕೆರಳಿಸಿದೆ. ಪಂದ್ಯದ ನಂತರವೂ ಹಾರ್ದಿಕ್ ಪಾಂಡ್ಯ ಮಗುವಿನಂತೆ ಚಪ್ಪಾಳೆ ತಟ್ಟಿದ್ದು ಕಂಡು ಬಂತು. ಮುಂಬೈ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಈಗಾಗಲೇ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಗಂಭೀರತೆ ಕಾಯ್ದುಕೊಳ್ಳಬೇಕಾದ ಹಾರ್ದಿಕ್​, ಸುಮ್ಮನೇ ನಗುತ್ತಿದ್ದು ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ. (ಏಜೆನ್ಸೀಸ್​)

    ಉತ್ತರಕಾಂಡ ಸಿನಿಮಾದಿಂದ ಹೊರಬಂದಿದ್ದೇಕೆ? ಕೊನೆಗೂ ಮೌನ ಮುರಿದ ನಟಿ ರಮ್ಯಾ

    9 ನಿಂಬೆಹಣ್ಣಿಗೆ 2.3 ಲಕ್ಷ ರೂಪಾಯಿ! ಈ ದೇವಸ್ಥಾನದ ನಿಂಬೆಗಿರುವ ಶಕ್ತಿ ಎಂಥದ್ದು? ಯಾಕಿಷ್ಟು ಡಿಮ್ಯಾಂಡ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts