More

    9 ನಿಂಬೆಹಣ್ಣಿಗೆ 2.3 ಲಕ್ಷ ರೂಪಾಯಿ! ಈ ದೇವಸ್ಥಾನದ ನಿಂಬೆಗಿರುವ ಶಕ್ತಿ ಎಂಥದ್ದು? ಯಾಕಿಷ್ಟು ಡಿಮ್ಯಾಂಡ್​?

    ವಿಲ್ಲುಪುರಂ: ಕೇವಲ ಮೂರರಿಂದ ನಾಲ್ಕು ರೂಪಾಯಿಗೆ ಒಂದು ನಿಂಬೆ ಹಣ್ಣು ದೊರೆಯುತ್ತದೆ. ಆದರೆ, ಈಗ ಬೇಸಿಗೆಯಾದ್ದರಿಂದ ತುಸು ಬೇಡಿಕೆ ಹೆಚ್ಚಾಗಿ ಬೆಲೆಯೂ ಏರಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ನಿಂಬೆ ಹಣ್ಣು 7 ರಿಂದ 10 ರೂ.ವರೆಗೂ ಮಾರಾಟವಾಗುತ್ತಿದೆ. ಆದರೆ, ತಮಿಳುನಾಡಿನಲ್ಲಿ 9 ನಿಂಬೆಹಣ್ಣು ಬರೋಬ್ಬರಿ 2.36 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಸೇಲಾಗಿದೆ. ಅಂತಹ ವಿಶೇಷ ಏನಿದೆ ಈ ನಿಂಬೆ ಹಣ್ಣಿನಲ್ಲಿ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.

    ನಿಂಬೆ ಹಣ್ಣನ್ನು ಅಡುಗೆಗೆ ಮಾತ್ರವಲ್ಲ, ಪೂಜೆ-ಪುನಸ್ಕಾರಗಳಲ್ಲೂ ಹೆಚ್ಚಾಗಿ ಬಳಸಲಾಗುತ್ತದೆ. ನಿಂಬೆ ಹಣ್ಣನ್ನು ಮಂತ್ರಿಸಿದರೆ ನೆಗಿಟಿವ್​ ಶಕ್ತಿ ದೂರವಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಅಲ್ಲದೆ, ಮಾಟ ಮಂತ್ರಗಳಲ್ಲೂ ನಿಂಬೆ ಹಣ್ಣನ್ನು ಬಳಸಲಾಗುತ್ತದೆ. ಹೀಗಾಗಿ ನಿಂಬೆ ಹಣ್ಣನ್ನು ಭಾರತದಲ್ಲಿ ಪ್ರತಿನಿತ್ಯ ಹೆಚ್ಚಾಗಿ ಬಳಸುತ್ತಾರೆ. ನಿಂಬೆ ಹಣ್ಣನ್ನು ದೈವಿಕ ರೂಪ ಎಂದು ಭಾವಿಸುವ ಕಾರಣ 9 ನಿಂಬೆಹಣ್ಣನ್ನು 2.36 ಲಕ್ಷ ರೂ. ಕೊಟ್ಟ ಭಕ್ತರು ಖರೀದಿಸಿದ್ದಾರೆ.

    ಇಂಥದ್ದೊಂದು ಅಪರೂಪದ ಸನ್ನಿವೇಶಕ್ಕೆ ತಮಿಳುನಾಡಿನ ವಿಲ್ಲುಪುರಂ ದೇವಸ್ಥಾನ ಸಾಕ್ಷಿಯಾಗಿದೆ. ಮಂಗಳವಾರ ನಡೆದ ಹರಾಜಿನಲ್ಲಿ ನಿಂಬೆಹಣ್ಣನ್ನು ಖರೀದಿ ಮಾಡಲಾಗಿದೆ. ಈ ವಿಲ್ಲುಪುರಂ ದೇವಸ್ಥಾನವು ತನ್ನ ಪವಿತ್ರ ನಿಂಬೆಹಣ್ಣಿಗೆ ಹೆಸರುವಾಸಿಯಾಗಿದೆ. ಮುರುಗನ್ ದೇವರ ಮೊನೆಚಾದ ಈಟಿಯಲ್ಲಿ ಸಿಗಿಸುವ ನಿಂಬೆಯು ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಸ್ಥಳೀಯ ಜನರು ಬಲವಾಗಿ ನಂಬುತ್ತಾರೆ.

    ಮಕ್ಕಳಿಲ್ಲದ ದಂಪತಿ ವಾರ್ಷಿಕ ಪಂಗುನಿ ಉಥಿರಂ ಹಬ್ಬದ ಸಮಯದಲ್ಲಿ ವಿಲ್ಲುಪುರಂನ ತಿರುವಾನೈನಲ್ಲೂರು ಗ್ರಾಮದ ಎರಡು ಬೆಟ್ಟಗಳ ಸಂಗಮದಲ್ಲಿರುವ ಸಣ್ಣ ದೇವಾಲಯದಲ್ಲಿ ಮುರುಗ ದೇವರ ದರ್ಶನ ಪಡೆಯುತ್ತಾರೆ. ಈ ವೇಳೆ ದೇವಾಲಯದ ಆಡಳಿತ ಮಂಡಳಿಯು ಹರಾಜಿಗಿಟ್ಟ ನಿಂಬೆಹಣ್ಣುಗಳನ್ನು ಖರೀದಿಸುತ್ತಾರೆ.

    ತಮ್ಮ ಬಂಜೆತನವನ್ನು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಮಕ್ಕಳಿಲ್ಲ ದಂಪತಿ ನಿಂಬೆ ಹಣ್ಣು ಖರೀದಿ ಮಾಡಿದರೆ, ವ್ಯಾಪಾರಸ್ಥರು ತಮ್ಮ ವ್ಯಾಪಾರದಲ್ಲಿ ಸಮೃದ್ಧಿಯನ್ನು ಬಯಸಿ ನಿಂಬೆಹಣ್ಣನ್ನು ಕೊಂಡುಕೊಳ್ಳುತ್ತಾರೆ ಎಂದು ಸ್ಥಳೀಯ ಗ್ರಾಮಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಉತ್ಸವ ನಡೆಯುವ ಒಂಬತ್ತು ದಿನವೂ ದೇವಾಲಯದ ಅರ್ಚಕರು ನಿಂಬೆಹಣ್ಣನ್ನು ಮುರಿಯುತ್ತಾರೆ. ದೇವಾಲಯದ ಆಡಳಿತ ಮಂಡಳಿಯು ಹಬ್ಬದ ಕೊನೆಯ ದಿನದಂದು ನಿಂಬೆಹಣ್ಣುಗಳನ್ನು ಹರಾಜು ಹಾಕುತ್ತದೆ. ಹಬ್ಬದ ಮೊದಲ ದಿನದಂದು ಮುರುಗನ್​ ದೇವರ ಈಟಿಯ ಮೇಲೆ ಸಿಗಿಸಲಾದ ನಿಂಬೆಹಣ್ಣು “ಅತ್ಯಂತ ಮಂಗಳಕರ ಮತ್ತು ಶಕ್ತಿಯುತ” ಎಂದು ನಂಬಲಾಗಿದೆ. ಈ ನಿಂಬೆಹಣ್ಣನ್ನು ಕುಳತ್ತೂರು ಗ್ರಾಮದ ದಂಪತಿ 50,500 ರೂ.ಗೆ ಖರೀದಿಸಿದ್ದಾರೆ.

    ನಿಂಬೆಹಣ್ಣುಗಳನ್ನು ಹರಾಜು ಕೂಗಿದ ಜನರು ಪವಿತ್ರ ಸ್ನಾನ ಮಾಡಿದ ಬಳಿಕ ದೇವಸ್ಥಾನದ ಅರ್ಚಕರ ಮುಂದೆ ಮಂಡಿಯೂರಿ ನಿಂಬೆಹಣ್ಣುಗಳನ್ನು ಸ್ವೀಕರಿಸಿದರು. ಮುರುಗನ್​ ದೇವಾಲಯದಲ್ಲಿ ಹಲವು ವರ್ಷಗಳಿಂದ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. (ಏಜೆನ್ಸೀಸ್​)

    ಇದು ಕ್ಯಾಪ್ಟನ್ಸಿ ಅಂದ್ರೆ! ಪಂದ್ಯದ ನಡುವೆ ರೋಹಿತ್​ ಮಾಡಿದ ಮೋಡಿಗೆ ಹಾರ್ದಿಕ್​ ಕಕ್ಕಾಬಿಕ್ಕಿ, ನೋಡಿ ಕಲಿ ಅಂದ್ರು ಫಾನ್ಸ್

    ಖರೀದಿಯಾಗದೇ ಉಳಿದಿದ್ದ ಒಂದೇ ಒಂದು ಲಾಟರಿಯಿಂದ ಬಡವನ ಬಾಳಲ್ಲಿ ನಡೆಯಿತು ಪವಾಡ! ಇಷ್ಟೊಂದು ಹಣನಾ?

    ಸೆ… ಅಲ್ಲೂ ಇದೇ ರೀತಿ ಎಂಜಾಯ್​ ಮಾಡಿದ್ರಾ? ಆ್ಯಂಕರ್​ ಪ್ರಶ್ನೆಗೆ ನಟ ಸಿದ್ದು ಶಾಕ್​! ಉತ್ತರ ಕೊಟ್ರು ಅನುಪಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts