More

    ವದ್ಧಿಕೆರೆ ಸಿದ್ಧಪ್ಪ ಬ್ರಹ್ಮರಥೋತ್ಸವ

    ಐಮಂಗಲ: ಬಯಲುಸೀಮೆಯ ಆರಾಧ್ಯ ದೈವ, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ವದ್ಧಿಕೆರೆ ಗ್ರಾಮದ ಶ್ರೀ ಸಿದ್ಧೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

    ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು ನಡೆದವು. ಉತ್ಸವ ಮೂರ್ತಿಯನ್ನು ಅಲಂಕರಿಸಲಾಗಿತ್ತು. ರಥಕ್ಕೆ ಬಣ್ಣದ ಬಟ್ಟೆ ಕಟ್ಟಲಾಗಿತ್ತು. ಭಕ್ತರು ನೀಡಿದ ದೊಡ್ಡ ಹೂವಿನ ಹಾರಗಳನ್ನು ತೇರಿಗೆ ಹಾಕಲಾಗಿತ್ತು.

    ರಥದ ನಾಲ್ಕು ದಿಕ್ಕುಗಳಲ್ಲಿ ಬಾವುಟ ಕಟ್ಟಿ ಕಳಸ ಪ್ರತಿಷ್ಠಾಪಿಸಲಾಗಿತ್ತು. ಹೂಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಸಿದ್ಧೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.ಮೆರವಣಿಗೆಯುದ್ದಕ್ಕೂ ವೀರಗಾಸೆ, ಗೊರವರ ಕುಣಿತ ಗಮಸೆಳೆದವು.

    ರಥಕ್ಕೆ ಬಲಿಬಾನದ ಪೂಜೆ ಸಲ್ಲಿಸಿದ ನಂತರ ರಥ ಎಳೆಯಲಾಯಿತು. ರಥೋತ್ಸವಕ್ಕೆ ಭಕ್ತರು ಬಾಳೆಹಣ್ಣು, ಉತ್ತುತ್ತಿ ಎಸೆದರು. ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬಾಳೆಹಣ್ಣಿನ ಆರತಿ ಮಾಡಿ ಭಕ್ತಿ ಸಮರ್ಪಸಿದರು.

    ಸುತ್ತಲೂ ಹತ್ತಾರು ಗ್ರಾಮಗಳ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಜಾತ್ರೆಗೆ ಬಂದ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.
    ರಥೋತ್ಸವಕ್ಕೆ ತಹಸೀಲ್ದಾರ್ ಸಿ.ರಾಜೇಶ್‌ಕುಮಾರ್ ಚಾಲನೆ ನೀಡಿದರು.

    ಆರಕ್ಷಕ ಇಲಾಖೆಯಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ವೈದ್ಯಕೀಯ, ಬೆಸ್ಕಾಂ, ಕಂದಾಯ, ಗ್ರಾಪಂ ಹಾಗೂ ಇತರ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts