More

  ಸೆ… ಅಲ್ಲೂ ಇದೇ ರೀತಿ ಎಂಜಾಯ್​ ಮಾಡಿದ್ರಾ? ಆ್ಯಂಕರ್​ ಪ್ರಶ್ನೆಗೆ ನಟ ಸಿದ್ದು ಶಾಕ್​! ಉತ್ತರ ಕೊಟ್ರು ಅನುಪಮಾ

  ಹೈದರಾಬಾದ್​: ನಾವು ಮಾತನಾಡುವ ಪ್ರತಿಯೊಂದು ಮಾತು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು. ಹಾಗೇ ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳುವಾಗಲೂ ತುಂಬಾ ಗಮನವಿಟ್ಟು ಕೇಳಿಸಿಕೊಳ್ಳಬೇಕು. ಅಪ್ಪಿತಪ್ಪಿ ಯಾವುದೇ ಪದ ನಮ್ಮ ಕಿವಿಗೆ ಅನುಚಿತವಾಗಿ ಕೇಳಿಸಿದರೆ ಅದು ಅಪಾರ್ಥಕ್ಕೆ ಗುರಿಯಾಗಿಬಿಡುತ್ತದೆ. ಇದಕ್ಕೆ ತಾಜಾ ನಿದರ್ಶನ ಈ ವಿಡಿಯೋ. ಇತ್ತೀಚೆಗಷ್ಟೇ ಟಿಲ್ಲು ಸ್ಕ್ವೇರ್ ತೆಲುಗು ಚಿತ್ರದ ಪ್ರಚಾರದ ವೇಳೆ ಇಂತಹ ವಿಚಿತ್ರ ಘಟನೆ ನಡೆದಿದೆ. ಸಂದರ್ಶನದಲ್ಲಿ ಹೀರೋ ಸಿದ್ದು ಜೊನ್ನಲಗಡ್ಡಗೆ ಆ್ಯಂಕರ್ ಹೇಳಿದ ಪದವೊಂದು ತಪ್ಪಾಗಿ ಕೇಳಿಸಿದ್ದು, ಒಂದು ಕ್ಷಣ ಸಿಧು ಶಾಕ್​ ಆದ ಪ್ರಸಂಗ ಜರುಗಿದೆ.

  ಟಾಲಿವುಡ್ ಯುವ ನಟ ಸಿದ್ದು ಜೊನ್ನಲಗಡ್ಡ ಬಗ್ಗೆ ತೆಲುಗು ಮಂದಿಗೆ ತುಂಬಾ ಪರಿಚಯವಿದೆ. ಅವರ ಡಿಜೆ ಟಿಲ್ಲು ಸಿನಿಮಾ ಸೂಪರ್ ಡೂಪರ್ ಹಿಟ್ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಚಿತ್ರದಲ್ಲಿ ಕನ್ನಡತಿ ನೇಹಾ ಶೆಟ್ಟಿ ನಟಿಸಿದ್ದಾರೆ. ಈ ಚಿತ್ರದ ಮುಂದುವರಿದ ಭಾಗ “ಟಿಲ್ಲು ಸ್ಕ್ವೇರ್” ಬಿಡುಗಡೆಗೆ ಸಜ್ಜಾಗಿದೆ. ಇದರಲ್ಲಿ ನೇಹಾ ಶೆಟ್ಟಿ ಮಾಡಿದ ಬೋಲ್ಡ್​ ಪಾತ್ರವನ್ನು ಕೇರಳದ ಕುಟ್ಟಿ ಅನುಪಮಾ ಪರಮೇಶ್ವರನ್ ಮಾಡಿದ್ದಾರೆ.

  ಮಾರ್ಚ್ 29ರಂದು ಅಂದರೆ ನಾಳೆ ಟಿಲ್ಲು ಸ್ಕ್ವೇರ್​ ಸಿನಿಮಾ ದೇಶಾದ್ಯಂತ ಥಿಯೇಟರ್‌ಗೆ ಲಗ್ಗೆ ಇಡಲಿದೆ. ಈಗಾಗಲೇ ಟಿಲ್ಲು ಸ್ಕ್ವೇರ್‌ ಸಿನಿಮಾ ತನ್ನ ಫಸ್ಟ್ ಲುಕ್ ಪೋಸ್ಟರ್‌, ಟೀಸರ್, ಟ್ರೇಲರ್ ಹಾಗೂ ಹಾಡುಗಳಿಂದಲೇ ಫೇಮಸ್​ ಆಗಿದೆ. ಅದರಲ್ಲೂ ಚಿತ್ರದಲ್ಲಿ ವಯಸ್ಕರ ಕಂಟೆಂಟ್ ಹೆಚ್ಚು ಕಂಡು ಬಂದಿರುವುದರಿಂದ ಪಡ್ಡೆ ಹುಡುಗರ ಕಣ್ಣು ಈ ಸಿನಿಮಾ ಮೇಲೆ ಬಿದ್ದಿದೆ. ಈ ಸಿನಿಮಾ ಡಿಜೆ ಟಿಲ್ಲು ಸಿನಿಮಾವನ್ನೂ ಹಿಂದಿಕ್ಕಲಿದೆ ಎಂಬುದು ಸಿನಿಪ್ರಿಯರ ಅಭಿಪ್ರಾಯ. ಅನುಪಮಾ ಅವರ ಲಿಪ್​ಲಾಕ್, ಸೆಕ್ಸ್​ ಡೈಲಾಗ್ ಹಾಗೂ ರೊಮ್ಯಾನ್ಸ್​ ದೃಶ್ಯಗಳು ಈ ಚಿತ್ರದಲ್ಲಿವೆ. ಇದೇ ಮೊದಲ ಬಾರಿಗೆ ಅನುಪಮಾ ತುಂಬಾ ಬೋಲ್ಡ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಟಿಲ್ಲು ಸ್ಕ್ವೇರ್​ ಚಿತ್ರತಂಡ ಪ್ರಚಾರದಲ್ಲಿ ಬಿಜಿಯಾಗಿದೆ.

  ಪ್ರಚಾರದ ಭಾಗವಾಗಿ ಇತ್ತೀಚೆಗೆ ಮಾಧ್ಯಮ ಸಂದರ್ಶನ ಸಹ ನಡೆಯಿತು. ಈ ವೇಳೆ ಟಿವಿ ಆ್ಯಂಕರ್ ಒಬ್ಬರು ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾರನ್ನು ಸಂದರ್ಶಿಸಿದರು. ಟಿಲ್ಲು ಸ್ಕ್ವೇರ್ ಚಿತ್ರಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಆ್ಯಂಕರ್ ಕೇಳಿದರು. ಈ ಸಂದರ್ಭದಲ್ಲಿ ನೀವು ಸೆಟ್‌ನಲ್ಲೂ ಇದೇ ರೀತಿ ಎಂಜಾಯ್ ಮಾಡಿದ್ದೀರಾ ಎಂದು ಆ್ಯಂಕರ್ ಪ್ರಶ್ನಿಸಿದರು. ಆದರೆ, ಆ ಮಾತು ಸಿದ್ದುಗೆ ತಲುಪಿದ್ದು ಬೇರೆ ರೀತಿ. ಸಿದ್ದು ಆಶ್ಚರ್ಯದಿಂದ ಆ್ಯಂಕರ್ ಕಡೆ ನೋಡಿದರು. ಏನು ಕೇಳುತ್ತಿದ್ದೀರಾ ಎಂದು ಆ್ಯಂಕರ್​ಗೆ ಮರು ಪ್ರಶ್ನೆ ಮಾಡಿದರು. ಈ ವೇಳೆ ಪಕ್ಕದಲ್ಲಿದ್ದ ಅನುಪಮಾ ಕೂಡ ಇಲ್ಲ… ಇಲ್ಲ.. ನೀವು ಅಂದುಕೊಂಡಂತೆ ಅಲ್ಲ, ಅದು ಸೆಟ್ಸ್​ ಎಂದು ಹೇಳಿ ಜೋರಾಗಿ ನಕ್ಕರು. ಅಂದಹಾಗೆ ಆ್ಯಂಕರ್​ ಮಾತು ಸಿದ್ದುಗೆ ಸೆಕ್ಸ್​ ಎಂದು ಕೇಳಿಸಿದೆ. ಬಳಿಕ ಸಿದ್ದು ಕ್ಷಮೆ ಸಹ ಕೋರಿದರು.

  ವಿಷಯವನ್ನು ಇಷ್ಟಕ್ಕೆ ನಿಲ್ಲಿಸಿದ್ದರೆ ಸಾಕಿತ್ತು. ಆದರೆ, ಆ್ಯಂಕರ್ ಮುಖ ಕೆಂಪಾಗಿ ಮತ್ತೆ ಅದನ್ನೇ ಕೇಳಿದಳು. ಸೆಟ್ಸ್​ನಲ್ಲಿ ಎಂದು ಒತ್ತಿ ಹೇಳಿದರು. ಈ ವೇಳೆಯೂ ಆ್ಯಂಕರ್ ಹೇಳಿದ ಮಾತು ಕೇಳುಗರಿಗೆ ಸೆಕ್ಸ್​ ಎಂದೇ ಕೇಳಿಸುತ್ತದೆ. ಮತ್ತೆ ಮತ್ತೆ ಅದೇ ಮಾತು ಕೇಳಿ ಅನುಪಮಾ ಗಹಗಹಿಸಿ ನಕ್ಕರು. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ವಿಡಿಯೋ ನೋಡಿದವರೆಲ್ಲ ನಮಗೂ ಸೆಕ್ಸ್ ಎಂದೇ ಕೇಳಿಸಿತು ಎನ್ನುತ್ತಿದ್ದಾರೆ. ಈ ವಿಡಿಯೋ ಟ್ರೋಲ್​ ಸಹ ಆಗುತ್ತಿದೆ.

  ಅಂದಹಾಗೆ ಟಿಲ್ಲು ಸ್ಕ್ವೇರ್​ ಸಿನಿಮಾ ಮಾರ್ಚ್​ 29ರಂದು ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಮಲಿಕ್​ ರಾಮ್​ ನಿರ್ದೇಶನ ಮಾಡಿದ್ದಾರೆ. ಅನುಪಮಾ ಅವರು ಜಯಂ ರವಿ ನಟನೆಯ ಸೈರೆನ್​ ಸಿನಿಮಾದಲ್ಲಿಯೂ ನಟಿಸಿದ್ದು, ಈ ಚಿತ್ರವು ಸಹ ಬಿಡುಗಡೆಗೆ ಸಜ್ಜಾಗಿದೆ. (ಏಜೆನ್ಸೀಸ್​)​

  ಇದು ಕ್ಯಾಪ್ಟನ್ಸಿ ಅಂದ್ರೆ! ಪಂದ್ಯದ ನಡುವೆ ರೋಹಿತ್​ ಮಾಡಿದ ಮೋಡಿಗೆ ಹಾರ್ದಿಕ್​ ಕಕ್ಕಾಬಿಕ್ಕಿ, ನೋಡಿ ಕಲಿ ಅಂದ್ರು ಫಾನ್ಸ್

  ಐಪಿಎಲ್​ ಹರಾಜು ವೇಳೆ ಪ್ರೀತಿ ಝಿಂಟಾ ಮಾಡಿದ ಈ ಒಂದು ಮಿಸ್ಟೇಕ್ ಪಂಜಾಬ್​ ತಂಡಕ್ಕೆ ವರವಾಯ್ತು!​

  ರೋಹಿತ್​ಗೆ ವರವಾಯ್ತು ಮುಂಬೈ ಇಂಡಿಯನ್ಸ್​ ನಾಯಕತ್ವ ಬದಲಾವಣೆ! ಇದಕ್ಕಿಂತ ಸಾಕ್ಷಿ ಬೇಕಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts