More

    ವಿಂಡೀಸ್, ಪಾಕಿಸ್ತಾನದ ಬಳಿಕ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾದ ಆಸ್ಟ್ರೇಲಿಯಾ

    ಮೆಲ್ಬೋರ್ನ್: ವೆಸ್ಟ್ ಇಂಡೀಸ್, ಪಾಕಿಸ್ತಾನ ತಂಡಗಳ ಬಳಿಕ ಆಸ್ಟ್ರೇಲಿಯಾ ತಂಡವೂ ಇಂಗ್ಲೆಂಡ್‌ನ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಆಡಲು ಸಜ್ಜಾಗಿದ್ದು, ಸೆಪ್ಟೆಂಬರ್ 4ರಿಂದ ತಲಾ 3 ಟಿ20 ಮತ್ತು ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಲಿದೆ ಎಂದು ವರದಿಯಾಗಿದೆ.

    ಸೆ. 4, 6 ಮತ್ತು 8ರಂದು ನಡೆಯಲಿರುವ ಟಿ20 ಪಂದ್ಯಗಳೊಂದಿಗೆ ಸರಣಿ ಆರಂಭವಾಗಲಿದ್ದು, ಬಳಿಕ ಸೆ. 10, 12 ಮತ್ತು 15ರಂದು ಏಕದಿನ ಪಂದ್ಯಗಳು ನಡೆಯಲಿವೆ ಎಂದು ಡೈಲಿ ಟೆಲಿಗ್ರಾಫ್  ಪತ್ರಿಕೆ ವರದಿ ಮಾಡಿದೆ. ಆಸೀಸ್ ತಂಡ ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದು, ಪ್ರವಾಸದ ಎಲ್ಲ 6 ಪಂಧ್ಯಗಳು ಸೌಥಾಂಪ್ಟನ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ಮಾತ್ರ ನಡೆಯಲಿವೆ ಎನ್ನಲಾಗಿದೆ.

    ಇದನ್ನೂ ಓದಿ: ಟಿ20 ವಿಶ್ವಕಪ್ ಮುಂದೂಡಿದ ಐಸಿಸಿ; ಐಪಿಎಲ್ ಹಾದಿ ಸುಗಮ…

    ಇವೇ 2 ಮೈದಾನಗಳಲ್ಲಿ ಈಗ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳು ನಡೆಯುತ್ತಿವೆ. ಬಳಿಕ ಪಾಕಿಸ್ತಾನ ವಿರುದ್ಧದ ಸರಣಿಯೂ ಇಲ್ಲೇ ನಡೆಯಲಿದೆ. ಪ್ರವಾಸಕ್ಕೆ 26 ಆಟಗಾರರ ಸಂಭಾವ್ಯ ತಂಡವನ್ನು ಆಸ್ಟ್ರೇಲಿಯಾ ಕಳೆದ ವಾರವೇ ಪ್ರಕಟಿಸಿದೆ. ಪ್ರವಾಸಕ್ಕೆ ಮುನ್ನ ಅಂತಿಮ ತಂಡದ ಆಯ್ಕೆ ನಡೆಯಲಿದೆ. ಆಸೀಸ್ ತಂಡ ಕ್ವಾರಂಟೈನ್ ಅವಧಿ ಇಲ್ಲದೆ ನೇರವಾಗಿ ಸರಣಿಯಲ್ಲಿ ಆಡಲಿದೆ ಎಂದೂ ಹೇಳಲಾಗುತ್ತಿದೆ.

    ಭಾರತ ಮಹಿಳಾ ಕ್ರಿಕೆಟ್ ತಂಡದ ಇಂಗ್ಲೆಂಡ್ ಪ್ರವಾಸ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts