More

    VIDEO| ಅಶ್ಲೀಲ ಕಾಮೆಂಟ್​ ಮಾಡುವವರಿಗೆ ಬೋಲ್ಡ್​ ವಿಡಿಯೋ ಹರಿಬಿಟ್ಟು ತಿರುಗೇಟು ನೀಡಿದ ನಟಿ ಆಶು ರೆಡ್ಡಿ

    ಹೈದರಾಬಾದ್​: ಚಲ್​ ಮೋಹನ್​ ರಂಗ ಚಿತ್ರದ ಮೂಲಕ ಟಾಲಿವುಡ್​ನಲ್ಲಿ ಸಿನಿ ಜರ್ನಿ ಆರಂಭಿಸಿದ ನಟಿ ಆಶು ರೆಡ್ಡಿ (Ashu reddy), ಬಿಗ್​ಬಾಸ್​ ಸಿಸನ್​ 3ರಲ್ಲಿ ಭಾಗವಹಿಸುವ ಮೂಲಕ ತುಂಬಾ ಖ್ಯಾತಿಯನ್ನು ಪಡೆದಿದ್ದಾರೆ. ನೋಡಲು ಸ್ವಲ್ಪ ಸಮಂತಾರನ್ನೇ ಹೋಲುವ ಆಶು ರೆಡ್ಡಿಯನ್ನು ಟಾಲಿವುಡ್ (Tollywood)​ನಲ್ಲಿ ಜೂನಿಯರ್​ ಸಮಂತಾ ಅಂತಾನೇ ಕರೆಯುತ್ತಾರೆ.

    ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಆಶು ರೆಡ್ಡಿ, ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಅಲ್ಲದೆ, ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಬೋಲ್ಡ್​ ಕಂಟೆಂಟ್​ ಮತ್ತು ವಿಡಿಯೋಗಳನ್ನು ಶೇರ್​ ಮಾಡುವ ಮೂಲಕ ಟ್ರೋಲ್​ಗು ಗುರಿಯಾಗುತ್ತಿರುತ್ತಾರೆ.

    ಆಶು ರೆಡ್ಡಿ ಯಾವುದೇ ಬೋಲ್ಡ್​ ಫೋಟೋ ಹಾಕಿದರೂ ಅವರನ್ನು ಟ್ರೋಲ್​ ಮಾಡದೇ ಬಿಡುವುದಿಲ್ಲ. ಅಲ್ಲದೆ, ತುಂಬಾ ಅಶ್ಲೀಲವಾಗಿ ಕಾಮೆಂಟ್​ ಸಹ ಮಾಡುತ್ತಾರೆ. ಇದೀಗ ಅಂಥವರಿಗಾಗಿ ಆಶು ರೆಡ್ಡಿ (Ashu reddy) ವಿಡಿಯೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ನನ್ನ ಪ್ರೊಫೈಲ್‌ನಲ್ಲಿ ಕಾಮೆಂಟ್​ ಮಾಡುವ ಕೆಲವರಿಗೆ ಇದನ್ನು ಸಮರ್ಪಿಸಲಾಗಿದೆ ಎಂದು ಅಡಿಬರಹ ನೀಡಿದ್ದಾರೆ.

    ವಿಡಿಯೋದಲ್ಲಿ ಅಶ್ಲೀಲ ಕಾಮೆಂಟ್​ ಮಾಡುವವರನ್ನು ಕಾಮಾಂಧರು ಎಂದು ಆಶು ರೆಡ್ಡಿ ಜರಿದಿದ್ದಾರೆ. ಅಲ್ಲು ಅರ್ಜುನ್​ ನಟನೆಯ ದೇಶಮುದುರು ಸಿನಿಮಾದಲ್ಲಿ ನಟಿ ರಾಮ ಪ್ರಭಾ ಹೇಳುವ “ಕಾಮ ತುರಾಣಂ ನಾಭಯಂ ನಾಲಜ್ಜ” ಡೈಲಾಗ್​ ಅನ್ನು ಕಾಮೆಂಟ್​ ಮಾಡುವವರಿಗೆ ಅರ್ಪಿಸಿದ್ದಾರೆ. ಕಾಮದಿಂದ ಕಣ್ಣು ಮುಚ್ಚಿರುವ ವಿಧವೆಗೆ ನಾಚಿಕೆ, ಭಯ, ಭಕ್ತಿ ಯಾವುದು ಇರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಆಶು ರೆಡ್ಡಿ ಫೋಕಸ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. (ಏಜೆನ್ಸೀಸ್​)

    ಬೆತ್ತಲೆ ವಿಡಿಯೋ ಹರಿಬಿಡುವುದಾಗಿ ಬೆದರಿಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: ಪೊಲೀಸ್​ ಅಧಿಕಾರಿಯ ಬಂಧನ

    VIDEO: ಜಲ ಬಂಧನದಲ್ಲೇ ವಿವಾಹ ಬಂಧನಕ್ಕೊಳಗಾದ ನವ ಜೋಡಿ!

    ಅವಳಿ ಮಕ್ಕಳಿಗೆ ಹೆಸರಿಟ್ಟ ಅಮೂಲ್ಯ-ಜಗದೀಶ್​; ಹೆಸರೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts