‘ನೀ ಹುಟ್ಟಿದಾಗ ಕುಣಿದಾಡಿದ್ದೆ ಮಗನೇ’; ಚಿರು ನೆನೆದು ಭಾವುಕ ಪೋಸ್ಟ್ ಹಾಕಿದ ಅರ್ಜುನ್​ ಸರ್ಜಾ

12345
Published on

ಬೆಂಗಳೂರು: ಸ್ಯಾಂಡಲ್​ ವುಡ್ ನಟ ದಿ. ಚಿರಂಜೀವಿ ಸರ್ಜಾ ಬದುಕಿದ್ದಿದ್ದರೆ, ಇಂದು ಅವರ 36ನೇ ಜನ್ಮದಿನದ ಸಂಭ್ರಮ ಇರುತ್ತಿತ್ತು. ಆದರೆ, ತುಂಬ ಬೇಗ ಎಲ್ಲರನ್ನು ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿಯೇ ಅಭಿಮಾನಿಗಳು ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಸಿನಿಮಾ ತಂಡಗಳು ಪೋಸ್ಟರ್​, ಟೀಸರ್, ಹಾಡುಗಳನ್ನು ಬಿಡುಗಡೆ ಮಾಡಿಕೊಂಡು, ಚಿರುಗೆ ಅರ್ಪಣೆ ಮಾಡುತ್ತಿದ್ದಾರೆ.

ಇತ್ತ ಚಿರು ಸೋದರ ಮಾವ ಅರ್ಜುನ್​ ಸರ್ಜಾ ಸಹ ಅಗಲಿದ ಮಗನನ್ನು ನೆನಪು ಮಾಡಿಕೊಂಡು ದುಃಖಿತರಾಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಆ ಮಾಸದ ಗಾಢವಾದ ನೋವನ್ನು ಬರಹದ ಮೂಲಕ ಹಂಚಿಕೊಂಡಿದ್ದಾರೆ.

‘ನೀನು ಹುಟ್ಟಿದಾಗ ಕುಣಿದಾಡಿದ್ದೆ. ಆದರೆ, ವಿಧಿಯ ಕ್ರೌರ್ಯವನ್ನು ನಾನು ನಂಬಿರಲಿಲ್ಲ... ನನ್ನ ಕನಸಿನಲ್ಲೂ ನಿನ್ನ ಜನ್ಮದಿನದಂದು ಈ ರೀತಿಯಲ್ಲಿ ಬರೆಯುತ್ತೇನೆ ಎಂದು ಊಹಿಸಿರಲಿಲ್ಲ. ಯಾವಾಗಲೂ ನಿನ್ನ ಆಲೋಚನೆಯಲ್ಲಿಯೇ ಕಾಲ ಕಳೆಯುತ್ತೇವೆ ಮಗನೇ. ಲವ್​ ಯೂ ಸೋ ಮಚ್​ ಬೇಬಿ’ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಇತ್ತ ಚಿರು ಜನ್ಮದಿನದ ಪ್ರಯುಕ್ತ ಸ್ಯಾಂಡಲ್​ವುಡ್​ನ ಬಹುತೇಕ ಸ್ಟಾರ್ ಕಲಾವಿದರೆಲ್ಲ ಶುಭಾಶಯ ಕೋರಿದ್ದಾರೆ. ಪತ್ನಿ ಮೇಘನಾ ಸರ್ಜಾ ಸಹ ಪತಿಯ ನೆನೆದು ಸೋಷಿಯಲ್​ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net