More

    ಕೇನ್ಸ್ ಫಿಲ್ಮ್​ ಫೆಸ್ಟಿವಲ್ 2024: ಇತಿಹಾಸ ಸೃಷ್ಟಿಸಿದ ನಟಿ ಅನಸೂಯಾ ಸೇಂಗುಪ್ತಾ!

    ಫ್ರಾನ್ಸ್​: ಪ್ರತಿವರ್ಷ ನಡೆಯಲಿರುವ ಕೇನ್ಸ್ ಫಿಲ್ಮ್​ ಫೆಸ್ಟಿವಲ್ ಅನ್ನು​ ಈ ಬಾರಿ ಫ್ರಾನ್ಸ್​ನಲ್ಲಿ ಆಯೋಜಿಸಲಾಗಿದೆ. ಪ್ರತಿಷ್ಠಿತ ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024ರ ವೇದಿಕೆಯಲ್ಲಿ ವಿವಿಧ ದೇಶಗಳ ಸೆಲೆಬ್ರಿಟಿಗಳು ಕೂಡ ಆಗಮಸಿ, ಕಾರ್ಯಕ್ರಮಕ್ಕೆ ಮತ್ತಷ್ಟು ರಂಗೇರಿಸಿದ್ದಾರೆ. ಬಾಲಿವುಡ್​ನ ಖ್ಯಾತ ನಟಿಯರು ಗ್ರ್ಯಾಂಡ್​ ಉಡುಗೆಯನ್ನು ತೊಟ್ಟು, ಕಂಗೊಳಿಸಿದ್ದಾರೆ. ಇನ್ನು ಶ್ಯಾಮ್ ಬೆನಗಲ್ ಅವರ ಮಂಥನ್ ಬಿಡುಗಡೆಯಾಗಿ ಸುಮಾರು 48 ವರ್ಷಗಳ ನಂತರ ಫೆಸ್ಟಿವಲ್​ನಲ್ಲಿ ವಿಶೇಷ ಪ್ರದರ್ಶನವನ್ನು ಕಂಡಿದೆ.

    ಇದನ್ನೂ ಓದಿ: ನೆರೆಗಾ ಕಾಮಗಾರಿ ಬಿಡುವಿನ ವೇಳೆ ಮಹಿಳೆಯರ ಕಬ್ಬಡ್ಡಿ ಪಂದ್ಯಾವಳಿ

    ಇದರೊಟ್ಟಿಗೆ ಹಲವಾರು ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ್ದಾರೆ. ಭಾರತೀಯ ಸಿನಿಮಾಗಳು ಮತ್ತು ಸ್ಟಾರ್​ ನಟರು ಕೇನ್ಸ್​ ಫಿಲ್ಮ್​ ಫೆಸ್ಟಿವಲ್​ನ ಹಲವಾರು ವಿಭಾಗಗಳ ಅಡಿಯಲ್ಲಿ ನಾಮನಿರ್ದೇಶನಗೊಂಡಿದ್ದರು. ಈಗ, ಭಾರತೀಯ ನಟಿಯರೊಬ್ಬರು ಕೇನ್ಸ್ 2024ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.

    ಕೋಲ್ಕತ್ತಾ ಮೂಲದ ಅನಸೂಯಾ ಸೇಂಗುಪ್ತಾ ಅವರು ‘ದಿ ಶೇಮ್‌ಲೆಸ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಬಲ್ಗೇರಿಯನ್ ಚಲನಚಿತ್ರ ನಿರ್ಮಾಪಕ ಕಾನ್ಸ್ಟಾಂಟಿನ್ ಬೊಜಾನೋವ್ ಬರೆದು, ನಿರ್ದೇಶಿಸಿರುವ ಚಲನಚಿತ್ರವು ರೇಣುಕಾ ಪಾತ್ರದ ಸುತ್ತ ಸುತ್ತುತ್ತದೆ. ಪೊಲೀಸ್ ಅಧಿಕಾರಿಯನ್ನು ಕೊಂದು ದೆಹಲಿಯ ವೇಶ್ಯಾಗೃಹದಿಂದ ತಪ್ಪಿಸಿಕೊಳ್ಳುವ ಮಹಿಳೆಯ ಪಾತ್ರವನ್ನು ಅನಸೂಯಾ ನಿರ್ವಹಿಸಿದ್ದಾರೆ.

    ಕೇನ್ಸ್ ಫಿಲ್ಮ್​ ಫೆಸ್ಟಿವಲ್ 2024ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದ ಅನಸೂಯಾ ಸೇಂಗುಪ್ತಾ, ಈ ಪ್ರಶಸ್ತಿ ಸ್ವೀಕರಿಸಿದ ಮೊದಲ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯ ನಟಿಗೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ,(ಏಜೆನ್ಸೀಸ್).

    ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಅಂದ್ರೆ, ನೀನು 500 ರನ್​ ಗಳಿಸಿ ಏನು ಫಲ? ಸಂಜುಗೆ ಬೆವರಿಳಿಸಿದ ಮಾಜಿ ಆಟಗಾರ

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts