More

  ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ.27 ಲಾಸ್ಟ್​! ಮಾಜಿ ಕ್ಯಾಪ್ಟನ್ ಕುಮಾರ್ ಸಂಗಕ್ಕಾರ ಹೇಳಿದ್ದಿಷ್ಟು

  ಚೆನ್ನೈ: ನಿನ್ನೆ (ಮೇ.25) ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈರ್ 2 ಪಂದ್ಯದಲ್ಲಿ 36 ರನ್​ಗಳಿಂದ ಸನ್​ರೈಸರ್ಸ್​ ಹೈದರಾಬಾದ್​ ಎದುರು ಹೀನಾಯ ಸೋಲು ಅನುಭವಿಸಿದ ರಾಜಸ್ಥಾನ ರಾಯಲ್ಸ್​ ಪಡೆ, ಇದೀಗ ಐಪಿಎಲ್​ 17ನೇ ಸೀಸನ್​ನಲ್ಲಿ ಟ್ರೋಫಿ ಎತ್ತುವ ಕನಸನ್ನು ಕಡೆಗೂ ಕಳೆದುಕೊಂಡಿದೆ. ಇನ್ನು ಆರ್​ಆರ್​ ಕೋಚ್ ಆಗಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್​ ಕುಮಾರ ಸಂಗಕ್ಕಾರ, ಲೀಗ್​ನಲ್ಲಿ ರಾಯಲ್ಸ್​ ನೀಡಿದ ಪ್ರದರ್ಶನಕ್ಕೆ ತೃಪ್ತರಾಗಿದ್ದಾರೆ.

  ಇದನ್ನೂ ಓದಿ: ಠಾಣೆಗೆ ಬಂದು ಧಮ್ಕಿ ಹಾಕುವವರನ್ನು ಸುಮ್ಮನೆ ಬಿಡೋಕಾಗುತ್ತಾ ? : ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನೆ

  ಕ್ವಾಲಿಫೈರ್​ 2 ಪಂದ್ಯದಲ್ಲಿ ತಮ್ಮ ತಂಡ ಸೋತ ಬಗ್ಗೆ ಮಾತನಾಡಿದ ಸಂಗಕ್ಕಾರ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿರುವ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಯ ವದಂತಿಗಳ ಬಗ್ಗೆಯೂ ಮಾತನಾಡಿದ್ದಾರೆ. ಭಾರತ ತಂಡದ ಕೋಚ್ ಆಗಿ ನೀವು ಹೋಗ್ತೀರಾ? ಕರೆ ಬಂದಿತ್ತಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರ್ ಸಂಗಕ್ಕಾರ​, ನನಗೆ ಆ ರೀತಿಯ ಯಾವ ಕರೆಗಳು ಬಂದಿಲ್ಲ. ಪೂರ್ಣ ಸಮಯದ ಕೋಚಿಂಗ್ ಸ್ಥಾನಕ್ಕೆ ಹೋಗಲು ನನಗೆ ಆಗುವುದೂ ಇಲ್ಲ. ಅಷ್ಟೊಂದು ಸಮಯ ನನ್ನ ಬಳಿಯಿಲ್ಲ. ಸದ್ಯದ ಮಟ್ಟಿಗೆ ಆರ್​ಆರ್​ ಜತೆಗೆ ನನ್ನ ಬಾಂಧವ್ಯ ಚೆನ್ನಾಗಿದೆ ಎಂದರು.

  ಇನ್ನು ಟೀಂ ಇಂಡಿಯಾದ ಹೆಡ್ ಕೋಚ್ ಸ್ಥಾನವನ್ನು ಅಲಂಕರಿಸುವಂತೆ ಬಿಸಿಸಿಐ ನೀಡಿದ ಆಫರ್​ ನಾನು ತಿರಸ್ಕರಿಸಿದ್ದೇನೆ ಎಂದ ರಿಕ್ಕಿ ಪಾಟಿಂಗ್​ ಹೇಳಿಕೆ ಭಾರೀ ಚರ್ಚೆಗೆ ಪ್ರತಿಕ್ರಿಯಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ರಾಹುಲ್ ದ್ರಾವಿಡ್ ಬದಲಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರರನ್ನು ಸಂಪರ್ಕಿಸಿದ್ದೇವೆ ಎಂಬ ವದಂತಿಗಳನ್ನು ತಳ್ಳಿಹಾಕಿದರು. ಭಾರತದಲ್ಲಿ ಆಟದ ವೈಖರಿ ಬಗ್ಗೆ “ಆಳವಾದ ತಿಳುವಳಿಕೆ” ಹೊಂದಿರುವವರ ಅಗತ್ಯವಿದೆ ಎಂದು ಜಯ್ ಷಾ ಒತ್ತಿ ಹೇಳಿದ್ದಾರೆ,(ಏಜೆನ್ಸೀಸ್).

  ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಅಂದ್ರೆ, ನೀನು 500 ರನ್​ ಗಳಿಸಿ ಏನು ಫಲ? ಸಂಜುಗೆ ಬೆವರಿಳಿಸಿದ ಮಾಜಿ ಆಟಗಾರ

  ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

  See also  ನಾಳೆ GATE ಫಲಿತಾಂಶ ಪ್ರಕಟ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts