More

    ನೀವೇ ಹೋಗಿ ನಿಮ್ಮಿಷ್ಟದ ಕಾಂಡೋಮ್ ಖರೀದಿಸಿ, ಯಾಕೆ ನಮಗೆ ಇದು ಬೇಕು ಅನ್ನಿಸಲ್ಲವಾ?; ನಟಿ ರಾಧಿಕಾ ಆಪ್ಟೆ

    ಮುಂಬೈ: ಬಾಲಿವುಡ್ ನಟಿ ರಾಧಿಕಾ ಆಪ್ಟೆ ಕಾಂಡೋಮ್ ಕಂಪನಿಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ಮೂಲಕ ಸದ್ದು ಮಾಡುತ್ತಿದ್ದಾಳೆ ಈ ಹಾಟ್​​ ಬ್ಯೂಟಿ.

    ನೀವೇ ಹೋಗಿ ನಿಮ್ಮಿಷ್ಟದ ಕಾಂಡೋಮ್ ಖರೀದಿಸಿ, ಯಾಕೆ ನಮಗೆ ಇದು ಬೇಕು ಅನ್ನಿಸಲ್ಲವಾ?; ನಟಿ ರಾಧಿಕಾ ಆಪ್ಟೆ

    ರಾಧಿಕಾ ಆಪ್ಟೆ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಇದರ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಂಡೋಮ್ ಎಂಬ ಪದ ಕೇಳಿದ್ರೆ ಈಗಲೂ ಜನರು ಮುಜುಗರಕ್ಕೆ ಒಳಗಾಗುತ್ತಾರೆ. ಮಹಿಳೆಯರು ಕಾಂಡೋಮ್ ಖರೀದಿಯ ನಿರ್ಧಾರವನ್ನು ತಮ್ಮ ಸಂಗಾತಿಯ ವಿವೇಚನೆಗೆ ಬಿಡುತ್ತಿರೋದು ಯಾಕೆ? ಈ ವಿಷಯದಲ್ಲಿ ನಮ್ಮ ಅಭಿಪ್ರಾಯವೂ ಮುಖ್ಯವಾಗಿರುತ್ತೆ ಎಂದು ಯಾರಿಗೂ ಯಾಕೆ ಅನ್ನಿಸಲ್ಲ ಎಂದು ರಾಧಿಕಾ ಆಪ್ಟೆ ಪ್ರಶ್ನೆ ಮಾಡಿದ್ದಾರೆ. ಯಾಕೆ ನಮಗೆ ಇದು ಬೇಕು ಅನ್ನಿಸಲ್ಲವಾ? ಕಾಂಡೋಮ್ ನಾವು ಫೀಲ್ ಮಾಡುತ್ತೇವೆ. ಹಾಗಾಗಿ ಕಾಂಡೋಮ್ ಖರೀದಿಯಲ್ಲಿಯೂ ನಮ್ಮ ನಿರ್ಧಾರ ಮುಖ್ಯವಾಗಿರುತ್ತದೆ. ಈ ವಿಷಯದಲ್ಲಿ ಮಹಿಳೆಯರೇ ಬೇರೆಯವರ ನಿರ್ಧಾರದ ಮೇಲೆ ನೀವು ಅವಲಂಬಿತರಾಗಬೇಡಿ. ನೀವೇ ಹೋಗಿ ನಿಮ್ಮಿಷ್ಟದ ಕಾಂಡೋಮ್ ಖರೀದಿಸಬೇಕು ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.

    Radhika Apte 1

    ಜಾಹೀರಾತಿನ ಜೊತೆಯಲ್ಲಿ ಮಹಿಳೆಯರಿಗೆ ಲೈಂಗಿಕ ಶಿಕ್ಷಣದ ಕುರಿತು ಕೆಲ ಮಾಹಿತಿಯನ್ನು ರಾಧಿಕಾ ಆಪ್ಟೆ ನೀಡಿದ್ದಾರೆ. ಮಹಿಳೆಯರೇ ನಿಮ್ಮಿಷ್ಟದ ಕಾಂಡೋಮ್ ನೀವೇ ಖರೀದಿಸಿ ಎಂದು ರಾಧಿಕಾ ಆಪ್ಟೆ ಮಹಿಳೆಯರಿಗೆ ಕರೆ ನೀಡಿದ್ದಾರೆ.

    ನೀವೇ ಹೋಗಿ ನಿಮ್ಮಿಷ್ಟದ ಕಾಂಡೋಮ್ ಖರೀದಿಸಿ, ಯಾಕೆ ನಮಗೆ ಇದು ಬೇಕು ಅನ್ನಿಸಲ್ಲವಾ?; ನಟಿ ರಾಧಿಕಾ ಆಪ್ಟೆ

    ನಟನೆ ಜೊತೆ ಮಾಡೆಲಿಂಗ್‌ನಲ್ಲಿಯೂ ರಾಧಿಕಾ ಆಪ್ಟೆ ಕೆಲಸ ಮಾಡಿಕೊಂಡಿದ್ದಾರೆ. ಬಾಲಿವುಡ್ ನಟಿ ರಾಧಿಕಾ ಆಪ್ಟೆ ಓಟಿಟಿ ಪ್ಲಾಟ್‌ಫಾರಂನ ಒಂದು ಪ್ರೊಜೆಕ್ಟ್ ಬಗ್ಗೆ ಸರಿ ಸುಮಾರು 4 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts