More

    100, 10, 5 ರೂಪಾಯಿಯ ಹಳೆ ನೋಟುಗಳು ಚಲಾವಣೆ ಆಗಲ್ವಾ? ಆರ್​ಬಿಐ ಹೇಳಿದ್ದೇನು?

    ನವದೆಹಲಿ: 2016ರ ನವೆಂಬರ್​8ಕ್ಕೆ 1000 ರೂಪಾಯಿ ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಿ ಆದೇಶ ಹೊರಡಿಸಿತ್ತು. ಪೂರ್ತಿ ದೇಶಕ್ಕೆ ಶಾಕ್​ ನೀಡಿದ್ದ ಆ ನೋಟು ಅಮಾನ್ಯೀಕರಣ ನಂತರ ಇದೀಗ ಹಳೆಯ 100 ರೂಪಾಯಿ ಮುಖಬೆಲೆಯ ನೋಟುಗಳೂ ಕೂಡ ಬ್ಯಾನ್​ ಆಗಲಿವೆ ಎನ್ನುವ ಸುದ್ದಿಗಳು ಹರಿದಾಡಿದೆ. ಈ ಕುರಿತಾಗಿ ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಸ್ಪಷ್ಟನೆ ನೀಡಿದೆ.

    ಇದನ್ನೂ ಓದಿ: ಜೈ ಶ್ರೀ ರಾಮ್​ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ; ದೀದಿ ದಬ್ಬಾಳಿಕೆಯನ್ನು ಎತ್ತಿ ಹಿಡಿದ ಪಕ್ಷ

    100 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳು ಮುಂದೆ ಚಲಾವಣೆಯಲ್ಲಿರುವುದಿಲ್ಲ ಎನ್ನುವ ಸುದ್ದಿಗಳು ಹರಿದಾಡಿವೆ. ಆರ್​ಬಿಐನ ಅಸಿಸ್ಟೆಂಟ್​ ಜನರಲ್​ ಮ್ಯಾನೇಜರ್​ ಆಗಿರುವ ಮಹೇಶ್​ ಅವರೇ ಈ ಮಾಹಿತಿ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಆರ್​ಬಿಐ ಉಲ್ಟಾ ಹೊಡೆದಿದೆ. ಈ ರೀತಿಯ ಯಾವುದೇ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ. ಅದು ಸುಳ್ಳು ಸುದ್ದಿಗಳು ಎಂದು ಆರ್​ಬಿಐ ಟ್ವಿಟ್ಟರ್​ನಲ್ಲಿ ತಿಳಿಸಿದೆ.

    ಇದನ್ನೂ ಓದಿ: ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

    ಪ್ರಧಾನಿ ನರೇಂದ್ರ ಮೋದಿ ಅವರು 1,000 ಮತ್ತು 500 ರೂ. ಮುಖಬೆಲೆಯ ನೋಟು ರದ್ದು ಮಾಡಿ ನಾಲ್ಕು ವರ್ಷ ಕಳೆದಿದೆ. ಕಪ್ಪು ಹಣ, ಭಯೋತ್ಪಾದನೆ ಮತ್ತು ಖೋಟಾನೋಟು ದಂಧೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ನಗದು ರಹಿತ ಆರ್ಥಿಕತೆಗಾಗಿ ನೋಟು ರದ್ದು ಮಾಡಲಾಗಿತ್ತು. ಅದೇ ರೀತಿ 100 ರೂಪಾಯಿಯ ನೋಟನ್ನೂ ಹಿಂಪಡೆದು ಗ್ರಾಹಕರಿಗೆ ಉತ್ತಮ ನೋಟನ್ನು ನೀಡಲಾಗುವುದು ಎನ್ನುವ ಸುದ್ದಿಗೆ ಇದೀಗ ಬ್ರೇಕ್​ ಸಿಕ್ಕಿದೆ. (ಏಜೆನ್ಸೀಸ್​)

    ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ

    ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts