More

    ಬೆಂಗಳೂರು ಏರ್​ಪೋರ್ಟ್ ರಸ್ತೆಯಲ್ಲಿ ಮತ್ತೊಂದು ಭೀಕರ ಅಪಘಾತ; ಡಿವೈಡರ್​ ದಾಟಿ ಪಕ್ಕದ ರಸ್ತೆಗೆ ನೆಗೆದ ಕಾರು, ಇನ್ನೊಂದು ಕಾರಿಗೆ ಡಿಕ್ಕಿ..

    ಬೆಂಗಳೂರು: ಬೆಂಗಳೂರಿನ ಏರ್​ಪೋರ್ಟ್ ರಸ್ತೆಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಕಾರುಗಳೆರಡು ಮುಖಾಮುಖಿ ಡಿಕ್ಕಿಯಾಗಿವೆ. ಅದರಲ್ಲೂ ಒಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಅದನ್ನು ದಾಟಿ ಪಕ್ಕದ ರಸ್ತೆಗೆ ನೆಗೆದು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

    ಇದನ್ನೂ ಓದಿ: ಲಾರಿ ಅಡಿಮೇಲಾಗಿ ಬಿದ್ದರೂ ಬಚಾವ್ ಆದ ಚಾಲಕ; ಬತ್ತ ತುಂಬಿದ್ದ ವಾಹನ ಟಯರ್ ಬ್ಲಾಸ್ಟ್​ ಆಗಿ ಪಲ್ಟಿ..

    ಬೆಂಗಳೂರಿನಿಂದ ಯಲಹಂಕ ಮಾರ್ಗವಾಗಿ ವಿಮಾನನಿಲ್ದಾಣ ಕಡೆಗೆ ತೆರಳುತ್ತಿದ್ದ ಲ್ಯಾನ್ಸರ್ ಕಾರು ಹಾಗೂ ಏರ್​ಪೋರ್ಡ್ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಪೋಕ್ಸ್ ವ್ಯಾಗನ್ ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ.

    ಇದನ್ನೂ ಓದಿ: ಹೊಟ್ಟೆನೋವು ತಾಳಲಾರದೆ ಫ್ಯಾನ್​ಗೆ ನೇಣು ಹಾಕಿಕೊಂಡ ಯುವತಿ; ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ

    ಲ್ಯಾನ್ಸರ್​ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನ ವೇಗದ ತೀವ್ರತೆಗೆ ಅದು ಡಿವೈಡರ್​ ದಾಟಿ ಪಕ್ಕದ ರಸ್ತೆಗೆ ನೆಗೆದು ಪೋಕ್ಸ್ ವ್ಯಾಗನ್ ಕಾರಿಗೆ ಡಿಕ್ಕಿ ಹೊಡೆದಿದೆ. ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ. ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

    ರಾಜ್ಯದಲ್ಲಿ ಹೆಚ್ಚಾದ ಕರೊನಾ ಆತಂಕ; ಸಿಎಂ ಸಭೆಯಲ್ಲಿ ಹೊರಬಿತ್ತು ಹೊಸ ಗೈಡ್​​ಲೈನ್ಸ್​: ಇಲ್ಲಿದೆ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts