More

    ಸುಖಾಂತ್ಯ ಕಂಡ ಮಗು ಮಾರಾಟ ಪ್ರಕರಣ

    ಹೈದರಾಬಾದ್: ಕರೊನಾ ಮಹಾಮಾರಿಯಿಂದಾಗಿ ಜಾರಿಗೊಂಡ ಲಾಕ್​​ಡೌನ್​ ಹಲವಾರು ಬಡವರ ಬದುಕನ್ನು ಕಸಿದುಕೊಂಡಿದೆ. ಎಷ್ಟೊಂದು ಕುಟುಂಬಗಳು ಬೀದಿಗೆ ಬರುತ್ತಿವೆ.
    ಜೀವನ ನಿರ್ವಹಣೆಗೆ ಹಣವಿಲ್ಲದ ಕಾರಣ ಹೈದರಾಬಾದ್‌ನ ಮಹಿಳೆಯೊಬ್ಬಳು ತನ್ನ 2 ತಿಂಗಳ ಮಗುವನ್ನು ತನ್ನ ನೆರೆಹೊರೆಯವರಿಗೆ ಮಾರಿದ ಘಟನೆ ಇತ್ತೀಚೆಗೆ ನಡೆದಿದೆ. ಪತಿಯಿಂದ ಬೇರೆಯಾಗಿರುವ ಮಹಿಳೆ ಹೈದರಾಬಾದ್‌ನ ಸುಭನ್‌ಪುರ ಪ್ರದೇಶದಲ್ಲಿ ವಾಸವಾಗಿದ್ದಳು.

    ಇದನ್ನೂ ಓದಿ;  ಆಭರಣ ಪ್ರಿಯರಿಗೆ ಸಿಹಿ ಸುದ್ದಿ: 10 ಗ್ರಾಂಗೆ 1228 ರೂ. ಇಳಿಕೆ


    ಮಗುವನ್ನು ಮಾರಿದ ಮಹಿಳೆಯನ್ನು ಎಸ್​ಕೆ ಜೋಯಾ ಖಾನ್ ಎಂದು ಗುರುತಿಸಲಾಗಿದೆ. ಇತರ ಆರೋಪಿಗಳನ್ನು ಆಯೆಷಾ ಜಬೀನ್, ಶಮೀಮ್ ಬೇಗಂ, ಶಮೀಮ್ ಸಹೋದರಿ ಸಿರಾಜ್ ಬೇಗಮ್ ಮತ್ತು ಇಬ್ಬರು ಮಧ್ಯವರ್ತಿಗಳಾದ ಎಸ್ ಕೆ ಮೊಹಮ್ಮದ್ ಮತ್ತು ಆತನ ಪತ್ನಿ ತಬಸ್ಸುಮ್ ಎಂದು ಗುರುತಿಸಲಾಗಿದೆ.
    ಆಗಸ್ಟ್ 11 ರಂದು ಅಬ್ದುಲ್ ಮುಜಾಹೇದ್ ಎಂಬಾತ ಹಬೀಬ್ ನಗರ ಪೊಲೀಸ್ ಠಾಣೆ ಬಳಿ ಬಂದು ತನ್ನ ಹೆಂಡತಿ ತಮ್ಮ ಮಗುವನ್ನು ಮಾರಿರುವುದಾಗಿ ಆರೋಪಿಸಿದ್ದಾನೆ. ಆತ ನಾಂಪಲ್ಲಿಯ ಸುಭನ್‌ಪುರದ ದಾರುವಾಲಾ ಬಾರ್ ಮತ್ತು ರೆಸ್ಟೋರೆಂಟ್‌ನ ವ್ಯವಸ್ಥಾಪಕನಾಗಿದ್ದಾನೆ.

    ಇದನ್ನೂ ಓದಿ:  ಕಾರಿನಲ್ಲಿ ಸಾವು-ಬದುಕಿನ ನಡೆವೆ ಹೋರಾಡುತ್ತಿದ್ದ ನಾಲ್ವರನ್ನು ರಕ್ಷಿಸಿದ ಸ್ಥಳೀಯರು


    ದೂರು ದಾಖಲಾದ ನಂತರ ಪೊಲೀಸರು ಜೋಯಾ ಖಾನ್‌ ಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಜೋಯಾ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಆಗಸ್ಟ್ 3 ರಂದು ಮುಜಾಹೇದ್ ತನ್ನ ಹೆಂಡತಿಯೊಂದಿಗೆ ಜಗಳವಾಡಲು ಪ್ರಾರಂಭಿಸಿ ತನ್ನ ಹೆತ್ತವರ ಮನೆಗೆ ತೆರಳಿದ.
    ಪತಿಯ ವರ್ತನೆಯಿಂದ ಜೋಯಾ ಅಸಮಾಧಾನಗೊಂಡಿದ್ದಾಳೆ. ಹಣವಿಲ್ಲದೆ ಬದುಕಿನ ಅಗತ್ಯತೆಗಳನ್ನು ಪೂರೈಸಲು ಆಕೆಗೆ ಸಾಧ್ಯವಾಗದ ಕಾರಣ, ಮಹಿಳೆ ತನ್ನ ಮಗುವನ್ನು ಮಾರಾಟ ಮಾಡುವ ನಿರ್ಧಾರವನ್ನು ತೆಗೆದುಕೊಂಡಳು. ನಂತರ ಜೋಯಾ ಇಬ್ಬರನ್ನು ಸಂಪರ್ಕಿಸಿ ತನ್ನ 2 ತಿಂಗಳ ಮಗನನ್ನು ಮಾರಾಟ ಮಾಡಲು ಬಯಸಿದ್ದಾಗಿ ತಿಳಿಸಿದ್ದಾಳೆ.
    ಆಕೆ ತನ್ನ ಮಗುವನ್ನು 45,000 ರೂ.ಗೆ ಮಾರಾಟ ಮಾಡಲು ಒಪ್ಪಿಕೊಂಡಳು ಮತ್ತು ಆಗಸ್ಟ್ ಮೊದಲ ವಾರದಲ್ಲಿ ಆರೋಪಿಗಳಿಗೆ ಒಪ್ಪಿಸಿದಳು. ಆಗಸ್ಟ್ 8 ರಂದು ಮುಜಾಹೇದ್ ಮನೆಗೆ ಹಿಂತಿರುಗಿ ತನ್ನ ಮಗನ ಬಗ್ಗೆ ಕೇಳಿದ. ಮಗುವನ್ನು ಮಾರಿರುವುದಾಗಿ ಜೋಯಾ ತಿಳಿಸಿದಳು, ನಂತರ ಆತ ಮಗುವಿಗಾಗಿ ಹುಡುಕಾಟ ಆರಂಭಿಸಿದ. ಸಿಗದಿದ್ದಾಗ ಮುಜಾಹೇದ್ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾನೆ.

    ಇದನ್ನೂ ಓದಿ : ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂಥ ಕ್ರಮಗಳು ಬೇಡ; ಭಾರತಕ್ಕೆ ಚೀನಾದ ಎಚ್ಚರಿಕೆ  


    ದೂರಿನ ಮೇರೆಗೆ ಪೊಲೀಸರು ಚಂಚಲಗುಡದಲ್ಲಿರುವ ಆಯೆಷಾ ಮನೆಯಲ್ಲಿ ಮಗುವಿರುವುದನ್ನು ಪತ್ತೆ ಮಾಡಿದ್ದಾರೆ. ಇತರ ಆರೋಪಿಗಳೊಂದಿಗೆ ಮಹಿಳೆಯನ್ನು ಬಂಧಿಸಲಾಗಿದೆ. ರಕ್ಷಿಸಿದ ನಂತರ, ಮಗುವನ್ನು ಆತನ ಕುಟುಂಬಕ್ಕೆ ಒಪ್ಪಿಸಲಾಯಿತು. 

    ವನ್ಯಜೀವಿಗಳಿಗೆ ಹೆದರದ ಅರಣ್ಯಾಧಿಕಾರಿ, ಪತಿಯ ದೌರ್ಜನ್ಯಕ್ಕೆ ಹೆದರಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts