More

    ‘ಆರಾಮ್​ ಅರವಿಂದಸ್ವಾಮಿ’ ಆದ ಅನೀಶ್​; ಹೊಸ ಲುಕ್​ ಬಿಡುಗಡೆ

    ಬೆಂಗಳೂರು: ಅನೀಶ್​ ತೇಜೇಶ್ವರ್​ ಅಭಿನಯದಲ್ಲಿ ಅಭಿಷೇಕ್​ ಶೆಟ್ಟ ಒಂದು ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಕೇಳಿಬಂದಿತ್ತು. ಆ ಚಿತ್ರದ ಹೆಸರೇನೆಂದು ಅನೀಶ್​ ಬಾಯಿಬಿಟ್ಟಿರಲಿಲ್ಲ. ಈಗ ಚಿತ್ರಕ್ಕೆ ಕೊನೆಗೂ ‘ಆರಾಮ್​ ಅರವಿಂದಸ್ವಾಮಿ’ ಎಂಬ ಹೆಸರನ್ನು ಇಡಲಾಗಿದೆ.

    ಇದನ್ನೂ ಓದಿ: ಇಷ್ಟು ವರ್ಷಗಳಲ್ಲಿ ಇಂಥ ಪಾತ್ರವನ್ನೇ ಮಾಡಿರಲಿಲ್ಲವಂತೆ ಗಣೇಶ್​ … ಯಾವುದು ಆ ಪಾತ್ರ?

    ಈ ಹಿಂದೆ ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗಳನ್ನು ನಿರ್ದೇಶಿಸುವುದರ ಜತೆಗೆ, ಆ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರದಲ್ಲಿ ಅನೀಶ್​ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಹೊಸ ಲುಕ್​ನ ಫೋಟೋವೊಂದನ್ನು ಅನೀಶ್​ ಹಂಚಿಕೊಂಡಿದ್ದಾರೆ.

    ಇದೊಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಲಿದ್ದು, ಇದುವರೆಗೂ ಅನೀಶ್ ಮಾಡಿರುವ ಸಿನಿಮಾಗಳಿಗಿಂತ ಈ ಸಿನಿಮಾ ಖಂಡಿತ ವಿಭಿನ್ನವಾಗಿರಲಿದ್ದು, ಸದ್ಯ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇನ್ನೂ ಹೆಸರಿಡದ ಈ ಚಿತ್ರವನ್ನು ‘ಅಕಿರಾ’ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

    ಇದನ್ನೂ ಓದಿ: ಅಜೇಯ್​ ನಿರ್ಮಾಣದ ಎರಡನೇ ಚಿತ್ರದ ಮೊದಲ ಪೋಸ್ಟರ್​ ಹೀಗಿದೆ ನೋಡಿ …

    ಇದಕ್ಕೂ ಮುನ್ನ ‘ಬೆಂಕಿ’ ಎಂಬ ಚಿತ್ರದಲ್ಲಿ ಅನೀಶ್​ ನಟಿಸಿದ್ದರು. ಬಾಕ್ಸ್​-ಆಫೀಸ್​ನಲ್ಲಿ ಹೆಚ್ಚು ಸದ್ದು, ಸುದ್ದಿ ಮಾಡದ ಈ ಚಿತ್ರದ ನಂತರ ಹೊಸ ಚಿತ್ರದ ಸಿದ್ಧತೆಯಲ್ಲಿದ್ದ ಅನೀಶ್​, ಈಗ ‘ಆರಾಮ್​ ಅರವಿಂದಸ್ವಾಮಿ’ಯಾಗಿ ಮತ್ತೊಮ್ಮೆ ಬರಲಿದ್ದಾರೆ.

    ರಿಷಭ್​ ಶೆಟ್ರಿಗೆ ಕಮಲ್​ ಹಾಸನ್​ ಪೋನ್​ ಮಾಡಿದ್ರಂತೆ … ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts