More

    ಗರ್ಭಿಣಿಯಾಗಿರುವ ಬಾಲಿವುಡ್​ ನಟಿಗೆ ನಿತ್ಯ ಗಂಡನ ಈ ಸೇವೆ ಇಲ್ಲದಿದ್ದರೆ ನಿದ್ದೆಯೇ ಬರಲ್ಲ!

    ಬಾಲಿವುಡ್​ ನಟಿ ಅಮೃತಾ ರಾವ್​ 2016ರಲ್ಲಿ ಪ್ರಿಯಕರ ಆರ್​ಜೆ ಅನ್​ಮೋಲ್​ ಅವರನ್ನು ವರಿಸಿದ್ದರು. ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಜತೆಗೆ ಆರೋಗ್ಯದ ದೃಷ್ಟಿಯಿಂದಲೂ ಅಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನೂ ಅಮೃತಾ ರಾವ್​ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: ನನ್ನ ನಿಜವಾದ ಹೆಸರು ಇಂಕ್ವಿಲಾಬ್​ ಅಲ್ಲ … ಅಮಿತಾಭ್​ ಬಚ್ಚನ್​ ಸ್ಪಷ್ಟನೆ

    ಆಹಾರ ಪದ್ಧತಿಯಿಂದ ಹಿಡಿದು, ನಿತ್ಯ ಯೋಗ, ಧ್ಯಾನದ ಮೊರೆ ಹೋಗಿರುವ ಅಮೃತಾ, ಮಾನಸಿಕ ಮತ್ತು ದೈಹಿಕವಾಗಿ ಗಟ್ಟಿಯಾಗುತ್ತಿದ್ದಾರೆ. ಅವರ ಈ ಎಲ್ಲ ಕೆಲಸಗಳಿಗೆ ಪತಿ ಅನ್​ಮೋಲ್​ ಸಾಥ್​ ನೀಡಿದ್ದು, ಪತ್ನಿಯ ಆರೋಗ್ಯದ ಕಡೆಗೂ ಗಮನಹರಿಸಿದ್ದಾರೆ.

    ಇದೆಲ್ಲದಕ್ಕಿಂತ ವಿಶೇಷ ಏನೆಂದರೆ, ಗರ್ಭಿಣಿ ಆಗಿರುವ ಅಮೃತಾ ರಾವ್​ ನಿತ್ಯ ಭಗವದ್ಗೀತೆಯ ಪಾಠ ಕೇಳದೆಯೇ ನಿದ್ದೆಯೇ ಬರುವುದಿಲ್ಲವಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಅವರು, ಪ್ರತಿ ನಿತ್ಯ ಮಲುಗುವ ಮುನ್ನ ಪತಿ ಅನ್​ಮೋಲ್​ ಭಗವದ್ಗೀತೆಯ ಒಂದೊಂದು ಪಾಠವನ್ನು ಹೇಳುತ್ತಿದ್ದಾರೆ. ಅದನ್ನು ಕೇಳಿಯೇ ಅವರು ನಿದ್ದೆಗೆ ಜಾರುತ್ತಾರಂತೆ.

    ಇದನ್ನೂ ಓದಿ: ಬಾಯ್​ಫ್ರೆಂಡ್​ ಬಗ್ಗೆ ಮಾತನಾಡದ ತಾಪ್ಸಿ, ಈಗ ಬಾಯ್​ಫ್ರೆಂಡ್​ ಜತೆಗೇ ಸಿಕ್ಕಿಬಿದ್ದಿದ್ದಾರೆ!

    2002ರಲ್ಲಿ ಬಾಲಿವುಡ್​ಗೆ ಎಂಟ್ರಿಕೊಟ್ಟಿದ್ದ ಅಮೃತಾ, ಇಲ್ಲಿಯವರೆಗೂ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. 2013ರಲ್ಲಿ ಸತ್ಯಾಗ್ರಹ ಚಿತ್ರದ ಬಳಿಕ ಸುದೀರ್ಘ 5 ವರ್ಷ ಗ್ಯಾಪ್​ ತೆಗೆದುಕೊಂಡು, ಠಾಕ್ರೆ ಚಿತ್ರದ ಮೂಲಕ ರೀ ಎಂಟ್ರಿ ಪಡೆದಿದ್ದರು. (ಏಜೆನ್ಸೀಸ್​)

    ಎದೆ ಸೀಳು ಕಾಣುವಂತೆ ಬಟ್ಟೆ ಧರಿಸಿದಕ್ಕೆ ಟ್ರೋಲ್​; ನೆಟ್ಟಿಗರ ಚಳಿ ಬಿಡಿಸಿದ ಕಣ್ಸನ್ನೇ ಸುಂದರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts