ಸಾಂದರ್ಭಿಕ ಚಿತ್ರ 
ವೆಬ್‌ಡೆಸ್ಕ್

ಕೊಳಕು ಕೈಗಳಿಂದ ಇವುಗಳನ್ನು ಮುಟ್ಟಬೇಡಿ! ನಿಮ್ಮ ಮೇಲೆ ಲಕ್ಷ್ಮೀ ದೇವಿ ಕೋಪಿಸಿಗೊಳ್ಳುತ್ತಾಳೆ! Vastu Tips

ಭಾನುಪ್ರಿಯ ಡಿ.ಕೆ
Vastu Tips: ವೇದಗಳಲ್ಲಿ, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮೀ ದೇವಿಯ ಆಶೀರ್ವಾದ ಪಡೆದ ವ್ಯಕ್ತಿಯು ಎಂದಿಗೂ ಸಂಪತ್ತು ಮತ್ತು ಸಮೃದ್ಧಿಯನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ಆದಾಗ್ಯೂ, ಲಕ್ಷ್ಮಿಯು ಆಶೀರ್ವಾದವನ್ನು ನೀಡದಿದ್ದರೆ, ಹಣ ಇದ್ದವನು ಕೂಡಾ ಬಡವನಾಗುತ್ತಾನಂತೆ. ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಕೊಳಕು ಕೈಗಳಿಂದ ಈ ವಸ್ತುಗಳನ್ನು ಮುಟ್ಟಬಾರದು ಎಂದು ತಿಳಿಸಿದ್ದಾರೆ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ತಡೆಯುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ಕೆಲಸ ಯಾವುದು ಎಂದು ನೋಡೋಣ ಬನ್ನಿ...

ಹಣವನ್ನು ಮುಟ್ಟಬೇಡಿ

ವಾಸ್ತು ಶಾಸ್ತ್ರದ ಪ್ರಕಾರ, ಕೊಳಕು ಅಥವಾ ಅಶುದ್ಧ ಕೈಗಳಿಂದ ಹಣವನ್ನು ಎಂದಿಗೂ ಮುಟ್ಟಬಾರದು ಎಂದು ಹೇಳಲಾಗುತ್ತದೆ. ಹಾಗೆ ಮಾಡುವವರು ಮನೆಗಳಲ್ಲಿ ಲಕ್ಷ್ಮೀ ಎಂದಿಗೂ ನೆಲೆಸುವುದಿಲ್ಲ. ಹಾಗೆಯೇ ಆ ಮನೆಯಲ್ಲಿ ಸದಾ ದುಃಖ, ಬಡತನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಊಟ ಮಾಡಿದ ನಂತರ ಅಥವಾ ಅಶುದ್ಧ ಸ್ಥಳವನ್ನು ಮುಟ್ಟಿದ ನಂತರ ಕೈಗಳನ್ನು ತೊಳೆದು, ಬಳಿಕ ಪರ್ಸ್​ನ್ನು ಮುಟ್ಟಬೇಕು. ಇಲ್ಲದಿದ್ದರೆ, ಲಕ್ಷ್ಮೀ ಕೋಪಗೊಳ್ಳುತ್ತಾಳೆ.

ಲಕ್ಷ್ಮಿ ವಿಗ್ರಹ ಅಥವಾ ಪೂಜಾ ಕೋಣೆ

ಮನೆಯಲ್ಲಿರುವ ಪೂಜಾ ಕೊಠಡಿ ಅಥವಾ ಲಕ್ಷ್ಮಿ ದೇವಿಯ ವಿಗ್ರಹವನ್ನು ಎಂದಿಗೂ ಕೊಳಕು ಕೈಗಳಿಂದ ಮುಟ್ಟಬಾರದು ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ. ಹಾಗೆಯೇ ನಿಮ್ಮ ನೆಮ್ಮದಿಯನ್ನು ಕಸಿದುಕೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ದೇಹ ಮತ್ತು ಮನಸ್ಸಿನ ಶುದ್ಧತೆ ಬಹಳ ಮುಖ್ಯವಾಗಿರುತ್ತದೆ. ಇನ್ನು ದೇವಾಲಯ ಅಥವಾ ಲಕ್ಷ್ಮೀ ದೇವಿಯ ವಿಗ್ರಹಗಳನ್ನು ಕೊಳಕು ಕೈಗಳಿಂದ ಮುಟ್ಟುವುದರಿಂದ ಜೀವನದಲ್ಲಿ ಗಮನಾರ್ಹ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.

ತುಳಸಿ ಅಥವಾ ಧಾರ್ಮಿಕ ಗ್ರಂಥಗಳು

ವಾಸ್ತು ಶಾಸ್ತ್ರದಲ್ಲಿ ತುಳಸಿ ಸಸ್ಯವನ್ನು ಲಕ್ಷ್ಮೀ ದೇವಿಯ ರೂಪವೆಂದು ಹೇಳಲಾಗುತ್ತದೆ. ತುಳಸಿಯನ್ನು ತಪ್ಪಾಗಿಯೂ ಕೊಳಕು ಕೈಗಳಿಂದ ಮುಟ್ಟಬಾರದು. ಒಂದು ವೇಳೆ ಈ ರೀತಿಯಾಗಿ ಮಾಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಎಂದಿಗೂ ಸಿಗುವುದಿಲ್ಲ. ಕೊಳಕು ಕೈಗಳಿಂದ ದೇವರಿಗೆ ಪೂಜೆ ಮಾಡುವುದು, ನೀರನ್ನು ಅರ್ಪಿಸುವುದರಿಂದ ದೇವಿಯು ಕೋಪಗೊಂಡು ಆಶಿರ್ವಾದವನ್ನು ನೀಡದೆ ಇರುವ ಸಂಪತ್ತನ್ನು ಕಸಿದುಕೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.