Urfi Javed: ಉರ್ಫಿ ಜಾವೇದ್ ಯಾವಾಗಲೂ ಫ್ಯಾಷನ್ ಜಗತ್ತಿನಲ್ಲಿ ಸುದ್ದಿಯಲ್ಲಿರುತ್ತಾರೆ. ಅವರು ಹಾಕುವ ಪೋಸ್ಟ್ಗಳು ಕ್ಷಣಾರ್ಧದಲ್ಲೇ ಭಾರೀ ವೈರಲ್ ಆಗುವುದರ ಜೊತೆಗೆ ಮೆಚ್ಚುಗೆಯನ್ನು ಪಡೆಯುತ್ತವೆ. ಸಣ್ಣ ಪರದೆಯ ಮೂಲಕ ಮನರಂಜನಾ ಜಗತ್ತಿಗೆ ಪ್ರವೇಶ ಪಡೆದ ಉರ್ಫಿ ರಾತ್ರೋ ರಾತ್ರಿ ಭಯಭೀತರಾಗಿದ್ದಾರಂತೆ. ಹೌದು, ಯಾವಾಗಲೂ ತನ್ನ ಬೋಲ್ಡ್ ಫ್ಯಾಷನ್‌ಗಳಿಂದ ಸುದ್ದಿಯಲ್ಲಿರುವ ಉರ್ಫಿ ಜಾವೇದ್ (Uorfi Javed) ಈ ಬಾರಿ ತನ್ನ ಸುರಕ್ಷತೆಗೆ ಸಂಬಂಧಿಸಿದ ಭಯಾನಕ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ.
ಘಟನೆ ಏನು?
ಡಿಸೆಂಬರ್ 22 ಸೋಮವಾರ ರಾತ್ರಿ ಸುಮಾರು 3:30ಕ್ಕೆ ಇಬ್ಬರು ಅಪರಿಚಿತ ಪುರುಷರು ಉರ್ಫಿ ಅವರ ಮನೆಯ ಬಾಗಿಲನ್ನು ಬಡಿದು ನಮಗೆ ರಾಜಕೀಯ ಸಂಪರ್ಕಗಳಿವೆ ಒಳಗೆ ಕರೆದುಕೊಳ್ಳಿ ಎಂದು ಹೇಳಿದ್ದಾರೆ. ಈ ವೇಳೆ ಉರ್ಫಿ ಅವರಿಗೆ ಬಾಗಿಲು ತೆರೆಯಲು ನಿರಾಕರಿಸಿ, ಅವರನ್ನು ಹೊರಹೋಗುವಂತೆ ಒತ್ತಾಯಿಸಿದ್ದಾಳೆ. ಆದರೂ ಅಪರಿಚಿತರು ಮತ್ತೆ ಮನೆಯ ಒಳಗೆ ಬರಲು ಪ್ರವೇಶಿಸಿದ್ದಾರೆ. ಈ ವೇಳೆ ಆಕೆ ಪೊಲೀಸರ ಸಹಾಯವನ್ನು ತೆಗದುಕೊಂಡಿದ್ದಾಳೆ. ಪೊಲೀಸರು ಮನೆಯ ಹತ್ತಿರ ಬರುತ್ತಿದ್ದಂತೆಯೇ ಅಪರಿಚಿತರು ಮನೆಯಿಂದ ಪರಾರಿಯಾಗಿದ್ದಾರೆ ಎಂದು ಉರ್ಫಿ ತಿಳಿಸಿದ್ದಾಳೆ.
ಪೋಸ್ಟ್ನಲ್ಲೇನಿದೆ?
ಈ ಘಟನೆಯ ಬಗ್ಗೆ ಉರ್ಫಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ "ಇದು ನನ್ನ ಜೀವನದ ಅತ್ಯಂತ ಭಯಾನಕ ಅನುಭವ" ಮುಂಬೈ ಸುರಕ್ಷಿತವೇ? ಒಂದು ವಾರದಲ್ಲಿ ಎರಡನೇ ಬಾರಿ ಅಸುರಕ್ಷಿತ ಭಾವನೆಯನ್ನು ಅನುಭವಿಸಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.
ಉರ್ಫಿಯ ಮೇಲಿನ ದೌರ್ಜನ್ಯ
ನಾವು ಪೊಲೀಸರಿಗೆ ಕರೆ ಮಾಡಿದಾಗ, ಅವರು ನಮ್ಮೊಂದಿಗೆ ಮತ್ತು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ನಾವು ಎಷ್ಟೇ ಹೊರಹೋಗಿ ಎಂದು ಹೇಳಿದರು ಕೂಡಾ ಅವರು ಹೋಗಲು ನಿರಾಕರಿಸಿದರು ಎಂದು ಉರ್ಫಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅಪರಿಚಿತ ವ್ಯಕ್ತಿಗಳು ಬೆಳಗಿನ ಜಾವ 3 ಗಂಟೆಗೆ ಮನೆಯ ಹೊರಗೆ ನಿಂತು ಮಹಿಳೆಯರು ಇರುವ ಮನೆಯಲ್ಲಿ ಬಾಗಿಲು ತೆಗೆಯಿರಿ ಎಂದು ಹೇಳಿದಾಗ ತುಂಬಾ ಭಯವಾಗುತ್ತದೆ. ಇಂತಹ ಘಟನೆಗಳನ್ನು ಹುಡುಗಿಯರು ಅನುಭವಿಸುವುದು ಬಹಳ ಕಷ್ಟ. ಹಾಗಾಗಿ ಅಪರಿಚಿತರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ. ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆದಾಗ್ಯೂ, ಉರ್ಫಿ ಜಾವೇದ್ ಆಗ್ಗಾಗ್ಗೆ ತನ್ನ ಸ್ಟೈಲ್ನಿಂದ ಯಾವಾಗಲು ಸುದ್ದಿಯಲ್ಲಿರುತ್ತಾರೆ. ಪ್ರತಿಬಾರಿಯು ಅವರ ಹೊಸ ವಿನ್ಯಾಸದಲ್ಲಿ ಜನರ ಗಮನವನ್ನು ಸೆಳೆಯುತ್ತಾರೆ. ಈ ನಟಿ ಕೈಗಡಿಯಾರಗಳು, ಬ್ಲೇಡ್‌ಗಳು, ಕನ್ನಡಕಗಳು, ಬ್ಯಾಂಡೇಜ್‌ಗಳು, ಮೃದುವಾದ ಆಟಿಕೆಗಳು, ಉಗುರುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ತನ್ನ ಉಡುಪುಗಳಾಗಿ ಬಳಸುವುದು ಜನರನ್ನು ಆಕರ್ಷಿಸುತ್ತದೆ (ಏಜೆನ್ಸೀಸ್).