Tara Sutaria ಚಿತ್ರ Instagram 
ವೆಬ್‌ಡೆಸ್ಕ್

ವೀರ್ ಪಹರಿಯಾ ಜೊತೆ ಬ್ರೇಕಪ್ ವದಂತಿ ಬೆನ್ನಲ್ಲೇ 'ಮಿಸ್ಟರಿ ಮ್ಯಾನ್' ರಹಸ್ಯ ಬಯಲು; ತಾರಾ ಕೈ ಹಿಡಿದ್ರಾ ಆದಿತ್ಯ ರಾಯ್ ಕಪೂರ್? Tara Sutaria

ಮುಂಬೈ: ಬಾಲಿವುಡ್‌ನ ನಟಿ ತಾರಾ ಸುತಾರಿಯಾ ಕೇವಲ ತಮ್ಮ ನಟನೆಯ ಮೂಲಕ ಮಾತ್ರವಲ್ಲದೇ, ಆಗಾಗ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಲೂ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಟ ವೀರ್ ಪಹರಿಯಾ (Tara Sutaria) ಅವರೊಂದಿಗೆ ಬೇರ್ಪಟ್ಟ ವದಂತಿಯ ನಂತರ ಅವರ ಜೀವನಕ್ಕೆ ಹೊಸಬರ ಎಂಟ್ರಿಯಾಗಿದೆ ಎಂಬ ಊಹಾಪೋಹಗಳು ಬಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.
ವರದಿಯ ಪ್ರಕಾರ, ಕೆಲವು ದಿನಗಳಿಂದ ತಾರಾ ಮತ್ತು ಆದಿತ್ಯ ರಾಯ್ ಕಪೂರ್ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿಗಳಿದ್ದವು. ಈ ಹಿಂದೆ ಆದಿತ್ಯ ಅನನ್ಯಾ ಪಾಂಡೆ ಜೊತೆ ಸಂಬಂಧ ಹೊಂದಿದ್ದರು. ಜೊತೆಗೆ ತಾರಾ ವೀರ್ ಜೊತೆಗಿನ ಸಂಬಂಧಕ್ಕಾಗಿ ಸುದ್ದಿಯಲ್ಲಿದ್ದರು. ಈ ಸುದ್ದಿ ಆನ್‌ಲೈನ್‌ನಲ್ಲಿ ಶೀಘ್ರವಾಗಿ ಗಮನ ಸೆಳೆಯಿತು.
ವರದಿಗಳು ಹೊರಬೀಳುತ್ತಿದ್ದಂತೆಯೇ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಇದು ಶುಭ ಸುದ್ದಿ ನಾನು ಅವರಿಬ್ಬರನ್ನು ಪ್ರೀತಿಸುತ್ತೇನೆ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಸಂಬಂಧ ಆದ್ರೂ ನಿಜವಾಗಲಿ ಎಂದು ನಾನು ಭಾವಿಸುತ್ತೇನೆ ಎಂದು ಬರೆದಿದ್ದಾರೆ.

ಈ ಹಿಂದೆ ಏನಾಗಿತ್ತು?

ಮುಂಬೈನಲ್ಲಿ ಶುಕ್ರವಾರ (ಡಿ.26) ರಾತ್ರಿ ನಡೆದ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಅವರ 'ಒನ್ ಆಫ್ ಒನ್' ಟೂರ್ ಸಂಗೀತ ಕಾರ್ಯಕ್ರಮಕ್ಕೆ ಈ ಜೋಡಿ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ಧಿಲ್ಲೋನ್​, ತಾರಾರನ್ನು ವೇದಿಕೆಗೆ ಆಹ್ವಾನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿತ್ತು.

ಪೋಸ್ಟ್​ನಲ್ಲೇನಿತ್ತು?

ತಾರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಂಗೀತ ಕಚೇರಿಯ ವೀಡಿಯೊವನ್ನು ಹಂಚಿಕೊಂಡು ಜೋರಾಗಿ ಮತ್ತು ಹೆಮ್ಮೆಯಿಂದ ಮತ್ತು ಅದರಲ್ಲಿ ಒಟ್ಟಿಗೆ!!! ಎಂತಹ ರಾತ್ರಿ! ನಮ್ಮ ಹಾಡಿಗೆ ತುಂಬಾ ಪ್ರೀತಿ ನೀಡಿದ್ದಕ್ಕಾಗಿ ಮುಂಬೈಗೆ ಧನ್ಯವಾದಗಳು. ಇಲ್ಲಿನ ನೆನಪುಗಳು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತವೆ.
ಆದಾಗ್ಯೂ, ಸುಳ್ಳು ನಿರೂಪಣೆಗಳು, ಬುದ್ಧಿವಂತ ಸಂಪಾದನೆ ಮತ್ತು ಜನರಿಂದ ಪಾವತಿಸಿದ ಪಿಆರ್ ಅಭಿಯಾನಗಳು ಯಾವುದೇ ಕಾರಣಕ್ಕೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಮ್ಮ ಪ್ರೀತಿ ಮತ್ತು ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಬರೆದು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್​ಗೆ ವೀರ್​ ಪ್ರತಿಕ್ರಿಯಿಸಿದ್ದು, "ನನ್ನ ಪ್ರತಿಕ್ರಿಯೆಯ ತುಣುಕನ್ನು ಮತ್ತೊಂದು ಹಾಡಿನ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ, ನಾನು ಜೋಕರ್​ ಅಲ್ಲ ಎಂದು ಕಿಡಿಕಾರಿದ್ದರು.

ತಾರಾ ಮತ್ತು ವೀರ್ ಸಂಬಂಧ

ತಾರಾ ಸುತಾರಿಯಾ ಮತ್ತು ವೀರ್ ಪಹರಿಯಾ 2025 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಇವರಿಬ್ಬರು ಒಟ್ಟಿಗೆ ತಮ್ಮ ವೈಯಕ್ತಿಕ ಸಮಯವನ್ನು ಖಾಸಗಿ ವಿಹಾರಗಳಿಗೆ ಹೋಗುವುದರ ಮೂಲಕ ಗುರುತಿಸಿಕೊಂಡಾಗ, ಅವರ ಬಗ್ಗೆ ಅನೇಕ ಊಹಾಪೋಹಗಳು ಪ್ರಾರಂಭವಾದವು. ಇದಾದ ಬಳಿಕ ಆಗಸ್ಟ್‌ನಲ್ಲಿ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವುದರ ಮೂಲಕ ಸಂಬಂಧವನ್ನು ಬಹಿರಂಗಪಡಿಸಿದರು (ಏಜೆನ್ಸೀಸ್​).