ಬೆಂಗಳೂರು: ಫೆಬ್ರವರಿ 11(2026)ರಿಂದ ನಡೆಯುತ್ತಿದ್ದ ರಾಜ್ಯಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆ ಸೌರಭ 26(Saurabha-26) ಸಮಾರೋಪಗೊಂಡಿದೆ.
ಕಾರ್ಯಕ್ರಮದ ಸಮರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಫೆ.28ರಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗ ಮಂದಿರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಿದರು. ನೆರೆದಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ಪರ್ಧಾ ಮನೋಭಾವವನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಇನ್ನು ಕಾರ್ಯಕ್ರಮದಲ್ಲಿ ಚಲನಚಿತ್ರ ನಟರಾದ ವಿಜಯ ರಾಘವೇಂದ್ರ, ಅರುಣ್ ಸಾಗರ್, ನಿರಂಜನ ದೇಶಪಾಂಡೆ, ಸುಜಯ್ ಶಾಸ್ತ್ರಿ ಮುಂತಾದವರು ಪಾಲ್ಗೊಂಡಿದ್ದರು. ನಾಗಾರ್ಜುನ ಡಿಗ್ರಿ ಕಾಲೇಜು ಈ ಸಾಲಿನ ಪದ್ಮಭೂಷಣ ಡಾಕ್ಟರ್ ರಾಜಕುಮಾರ್ ಸರ್ವೋತ್ತಮ ಕಾಲೇಜು ಪರ್ಯಾಯ ಪಾರಿತೋಷಕವನ್ನು ಗೆದ್ದುಕೊಂಡಿತು.