ವೆಬ್‌ಡೆಸ್ಕ್

ಟೀಮ್​ ಇಂಡಿಯಾಗೆ ಸಂಜು ತಿಲಕದ ಶ್ರೇಯಸ್ಸು: ಕೆರೆಬಿಯನ್ನರಿಗೆ ಬಿಗ್​ ಟಾರ್ಗೆಟ್! | INDvWI

INDvWI: ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅಕ್ಷರಶಃ ಅಬ್ಬರಿಸಿದೆ. ರಾಂಚಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಎದುರಾಳಿ ಬೌಲರ್‌ಗಳ ಬೆವರಿಳಿಸುವ ಮೂಲಕ ನಿಗದಿತ 20 ಓವರ್‌ಗಳಲ್ಲಿ 249 ರನ್‌ಗಳನ್ನು ಕಲೆಹಾಕಿದೆ.

INDvWI: ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅಕ್ಷರಶಃ ಅಬ್ಬರಿಸಿದೆ. ರಾಂಚಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಎದುರಾಳಿ ಬೌಲರ್‌ಗಳ ಬೆವರಿಳಿಸುವ ಮೂಲಕ ನಿಗದಿತ 20 ಓವರ್‌ಗಳಲ್ಲಿ 249 ರನ್‌ಗಳನ್ನು ಕಲೆಹಾಕಿದೆ.

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಟೀಮ್​ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರು ಆರಂಭದಲ್ಲಿ ತಮಗೆ ಸಿಕ್ಕ ಎರಡು ಜೀವದಾನಗಳ ಸಂಪೂರ್ಣ ಲಾಭ ಪಡೆದು ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ 41 ಎಸೆತಗಳನ್ನು ಎದುರಿಸಿದ ಸಂಜು, 9 ಭರ್ಜರಿ ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಬ್ಬರದ 82 ರನ್ ಕಲೆಹಾಕಿದರು. ಇವರಿಗೆ ಅತ್ಯುತ್ತಮ ಸಾಥ್ ನೀಡಿದ ಇಶಾನ್ ಕಿಶನ್ ಕೂಡ ಕೇವಲ 22 ಎಸೆತಗಳಲ್ಲಿ 43 ರನ್‌ಗಳ ಕೊಡುಗೆ ನೀಡಿ ತಂಡದ ರನ್‌ವೇಗವನ್ನು ಹೆಚ್ಚಿಸಿದರು.

ಶ್ರೇಯಸ್-ತಿಲಕ್ ಸಿಡಿಲಬ್ಬರದ ಜೊತೆಯಾಟ

ಆರಂಭಿಕರ ಅಬ್ಬರದ ಬಳಿಕ ಕ್ರೀಸ್‌ಗಿಳಿದ ನಾಯಕ ಶ್ರೇಯಸ್ ಐಯ್ಯರ್ ಮತ್ತು ಉಪನಾಯಕ ತಿಲಕ್ ವರ್ಮ ಅವರು ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದರು. ಶ್ರೇಯಸ್ ಐಯರ್ ಕೇವಲ 18 ಎಸೆತಗಳಲ್ಲಿ 40 ರನ್ ಸಿಡಿಸಿ ಮಿಂಚಿದರೆ, ಮತ್ತೊಂದೆಡೆ ಅತ್ಯಂತ ಜವಾಬ್ದಾರಿಯುತ ಹಾಗೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್ ವರ್ಮ ಕೇವಲ 18 ಎಸೆತಗಳಲ್ಲಿ ಅಜೇಯ 44 ರನ್ ಸಿಡಿಸಿ ಅಬ್ಬರಿಸಿದರು. ಈ ಇಬ್ಬರು ಆಟಗಾರರು ಕೇವಲ 32 ಎಸೆತಗಳಲ್ಲಿ ಬರೋಬ್ಬರಿ 83 ರನ್‌ಗಳ ಅಮೂಲ್ಯ ಜೊತೆಯಾಟವನ್ನು ನಡೆಸಿ ಭಾರತದ ಮೊತ್ತವನ್ನು ಹಿಗ್ಗಿಸಿದರು.

ರೋಸ್ಟನ್ ಚೇಸ್ ಬೌಲಿಂಗ್ ಧಮಾಕಾ!

ಭಾರತದ ಈ ಆರ್ಭಟದ ಮುಂದೆ ವೆಸ್ಟ್ ಇಂಡೀಸ್ ಬೌಲರ್‌ಗಳು ಸಂಪೂರ್ಣವಾಗಿ ಮಂಕಾದರು ಮತ್ತು ರನ್ ನಿಯಂತ್ರಿಸಲು ಪರದಾಡಬೇಕಾಯಿತು. ಈ ನಡುವೆ ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ ಮಾತ್ರ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಚೇಸ್ ತಮ್ಮ ಸ್ಪಿನ್​ ಮೋಡಿಯ (3/24) ಮೂಲಕ ಟೀಮ್​ ಇಂಡಿಯಾ ಬ್ಯಾಟರ್​ಗಳನ್ನು ಕಾಡಿದರು(ಏಜೆನ್ಸೀಸ್​).