Deepika Padukone ಚಿತ್ರ Instagram 
ವೆಬ್‌ಡೆಸ್ಕ್

ದಕ್ಷಿಣ ಆಫ್ರಿಕಾದಲ್ಲಿ 'ಕಿಂಗ್' ಅಬ್ಬರ: ಶಾರುಖ್-ದೀಪಿಕಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ! Deepika Padukone

Deepika Padukone: ಬಾಲಿವುಡ್‌ನ ಸೂಪರ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಅತ್ಯಂತ ಸಂಭ್ರಮದ ಹಂತದಲ್ಲಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಬಾರಿಗೆ ಗರ್ಭಿಣಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದ ದೀಪಿಕಾ, ತಾಯ್ತನದ ಈ ಸುಂದರ ಕ್ಷಣಗಳ ನಡುವೆಯೂ ತಮ್ಮ ವೃತ್ತಿಪರ ಬದ್ಧತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಕಿಂಗ್ ಚಿತ್ರಕ್ಕಾಗಿ ದಕ್ಷಿಣ ಆಫ್ರಿಕಾದಲ್ಲಿ ದೀಪಿಕಾ ಪಡುಕೋಣೆ

ಶುಕ್ರವಾರ, ದಕ್ಷಿಣ ಆಫ್ರಿಕಾದ ಚಿತ್ರದ ನಡುವೆ ಸೋರಿಕೆಯಾದ ಚಿತ್ರಗಳಲ್ಲಿ ದೀಪಿಕಾ ಮತ್ತು ಶಾರುಖ್​ ಖಾನ್​ ಕೈ ಹಿಡಿದುಕೊಂಡು ಓಡಾಡುವ ದೃಶ್ಯವನ್ನು ಕಾಣಬಹುದು. ನಟಿ ಕಿತ್ತಳೆ ಬಣ್ಣದ ಉಡುಪಿನಲ್ಲಿ ಭಾವಪರವಶವಾಗಿ ಕಾಣುತ್ತಿದ್ದು, ಅವರ ಮುಖದಲ್ಲಿನ ಗರ್ಭಧಾರಣೆಯ ಹೊಳಪು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಏತನ್ಮಧ್ಯೆ, ಶಾರುಖ್ ನೀಲಿ ಪ್ಯಾಂಟ್‌ನೊಂದಿಗೆ ಪಟ್ಟೆ ಬಿಳಿ ಮತ್ತು ನೀಲಿ ಶರ್ಟ್‌ನಲ್ಲಿ ಎಂದಿನಂತೆ ಆಕರ್ಷಕವಾಗಿ ಕಾಣುತ್ತಿದ್ದಾರೆ.
ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕರು ಪ್ರತಿಕ್ರಿಯಿಸಿದ್ದು, ಇಬ್ಬರಿಗೂ ಉತ್ತಮ ಸ್ಟೈಲಿಶ್​ ಆಗಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರುಬ 60 ವರ್ಷದ ವಯಸ್ಸಿನಲ್ಲೂ ಇಷ್ಟೊಂದು ಯಂಗ್ ಆಗಿ ಕಾಣಿಸುತ್ತಿರುವುದು ಬಹಳ ಆಶ್ಚರ್ಯ ಎಂದು ಪ್ರತಿಕ್ರಿಯಿಸಿದ್ದಾರೆ.
ವರದಿಗಳ ಪ್ರಕಾರ, ದೀಪಿಕಾ ಪಡುಕೋಣೆ ದಕ್ಷಿಣ ಆಫ್ರಿಕಾದಲ್ಲಿ ಶಾರುಖ್ ಖಾನ್ ಜೊತೆ ಕಿಂಗ್ ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಪ್ರಮುಖ ಆಕ್ಷನ್-ಪ್ಯಾಕ್ಡ್ ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಹ ಮಾಡಿದ್ದಾರೆ. ಆದಾಗ್ಯೂ, ಭಾರತಕ್ಕೆ ಹಿಂತಿರುಗಿದ ನಂತರ ದೀಪಿಕಾ ಅಲ್ಲು ಅರ್ಜುನ್ ಮತ್ತು ಅಟ್ಲೀ ಅವರ ರಾಕಾ ಚಿತ್ರದಲ್ಲಿ ನಟಿಸುವ ನಿರೀಕ್ಷೆಯಿದೆ.

ಎರಡನೇ ಬಾರಿಗೆ ತಾಯಿಯಾಗುತ್ತಿರುವ ದೀಪಿಕಾ!

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಎರಡನೇ ಗರ್ಭಧಾರಣೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಪೋಸ್ಟ್ ಮಾಡುವ ಮೂಲಕ ಶುಭ ಸುದ್ದಿಯನ್ನು ಹಂಚಿಕೊಂಡರು. ಚಿತ್ರದಲ್ಲಿ ಅವರ ಮಗಳು ದುವಾ ಗರ್ಭದಾರಣೆಯ ಕಿಟ್​ ಪರೀಕ್ಷಿಸುತ್ತಿರುವ ಚಿತ್ರವನ್ನು ತೋರಿಸಲಾಗಿದೆ. ಇದು ಎರಡು ನೀಲಿ ರೇಖೆಗಳನ್ನು ಒಳಗೊಂಡಿದ್ದು, ದುವಾ ಅಕ್ಕನಾಗಳಿದ್ದಾಳೆ ಎಂದು ಹಂಚಿಕೊಂಡಿದ್ದಾರೆ (ಏಜೆನ್ಸೀಸ್​).